ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದ ಗೋಪಾಳ ಬಡಾವಣೆಯಲ್ಲಿರುವ ದಿಯಾ ಆಯುರ್ಧಾಮ ಆಯುರ್ವೇದ ಚಿಕಿತ್ಸಾಲಯವು ಉಚಿತ ಆರೋಗ್ಯ ತಪಾಸಣಾ (health camp) ಶಿಬಿರ ಹಾಗೂ ವಿವಿಧ ಆಯುರ್ವೇದ ಚಿಕಿತ್ಸೆಗಳಲ್ಲಿ ರಿಯಾಯಿತಿಯನ್ನು ಘೋಷಿಸಿದೆ.
ಕೀಲು ನೋವು, ಮಂಡಿ ನೋವು, ಕುತ್ತಿಗೆ ಮತ್ತು ಸೊಂಟ ನೋವು ಹಾಗೂ ಸಂಧಿವಾತದಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗಾಗಿ ಫೆಬ್ರವರಿ 14 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ಉಚಿತ ಬಿ.ಎಂ.ಡಿ (ಬೋನ್ ಮಿನರಲ್ ಡೆನ್ಸಿಟಿ) ತಪಾಸಣಾ ಶಿಬಿರ ನಡೆಯಲಿದೆ. ಬೆಂಗಳೂರಿನ ಆಯುರ್ವೇದ ತಜ್ಞ ಡಾ.ಜ್ಞಾನೇಶ್ವರ್ ಪೂಜಾರಿ ಹಾಗೂ ಡಾ. ರಶ್ಮಿ ಎಸ್.ಫ್ರಾನ್ಸಿಸ್ ಚಿಕಿತ್ಸೆ ನೀಡಲಿದ್ದಾರೆ. ಶಿಬಿರದಲ್ಲಿ ವೈದ್ಯರ ತಪಾಸಣೆ ಉಚಿತವಾಗಿದ್ದು, ಔಷಧಗಳಿಗೆ ಮಾತ್ರ ಹಣ ಪಾವತಿಸಬೇಕಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಶೇಷ ರಿಯಾಯಿತಿ ಮತ್ತು ಯೋಗ ತರಬೇತಿ
- ಪಂಚಕರ್ಮ ಚಿಕಿತ್ಸೆ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಫೆಬ್ರವರಿ 15 ರಿಂದ 19 ರವರೆಗೆ 5 ದಿನಗಳ ಕಾಲ ಸರ್ವಾಂಗ ಅಭ್ಯಂಗ ಚಿಕಿತ್ಸೆಯು ₹999 ರಿಯಾಯಿತಿ ದರದಲ್ಲಿ ಲಭ್ಯವಿರಲಿದೆ.
- ಯೋಗ ತರಬೇತಿ: ಫೆಬ್ರವರಿ 20 ರಿಂದ ನುರಿತ ಶಿಕ್ಷಕರಿಂದ ಯೋಗ ತರಬೇತಿ ಆರಂಭವಾಗಲಿದ್ದು, ಬೆಳಿಗ್ಗೆ ಮತ್ತು ಸಂಜೆ ವಿವಿಧ ಬ್ಯಾಚ್‌ಗಳಲ್ಲಿ ತರಗತಿಗಳು ನಡೆಯಲಿವೆ.
ಇದನ್ನೂ ಓದಿ – ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ಸಿದ್ಧತೆ ಜೋರು, ಪ್ರಚಾರ ಶುರು
ತಪಾಸಣೆಗೆ ಬರುವವರು ತಮ್ಮ ಹಳೆಯ ಲ್ಯಾಬ್ ರಿಪೋರ್ಟ್ ಹಾಗೂ ಬಳಸುತ್ತಿರುವ ಮಾತ್ರೆಗಳನ್ನು ತರುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9341848382 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

LATEST NEWS
- ದಿಢೀರ್ ರಸ್ತೆಗೆ ಬಂದು ಕಾರಿನ ಮೇಲೆ ಜಿಗಿದ ಕಾಡುಕೋಣ

- ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? | 10 ಫೆಬ್ರವರಿ 2026

- ಶಿವಮೊಗ್ಗ ವಿಮಾನ ನಿಲ್ದಾಣ, ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಂಸದ ರಾಘವೇಂದ್ರ

- ಶಿವಮೊಗ್ಗದಲ್ಲಿ ಉಚಿತ ಆರ್ಯುವೇದ ಆರೋಗ್ಯ ತಪಾಸಣಾ ಶಿಬಿರ, ಈಗಲೇ ಹೆಸರು ನೋಂದಣಿಗೆ ಸೂಚನೆ

- ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ಸಿದ್ಧತೆ ಜೋರು, ಪ್ರಚಾರ ಶುರು

About The Editor
ನಿತಿನ್ ಆರ್.ಕೈದೊಟ್ಲು





