ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ಸಿದ್ಧತೆ ಜೋರು, ಪ್ರಚಾರ ಶುರು

ಶಿವಮೊಗ್ಗ: ನಗರದ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಜಾತ್ರೆಯ ಸಿದ್ಧತೆ ಭರದಿಂದ ಸಾಗಿದೆ. ಇವತ್ತು ಜಾತ್ರೆಯ ಪ್ರಚಾರದ ಪೋಸ್ಟರ್‌ ಬಿಡುಗಡೆ (poster launch) ಮಾಡಲಾಯಿತು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯ ಕ್ಷ ಎಸ್‌.ಕೆ.ಮರಿಯಪ್ಪ, ಕಾರ್ಯದರ್ಶಿ ಎನ್.ಮಂಜುನಾಥ್‌ ನೇತೃತ್ವದಲ್ಲಿ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

Kote-Marikamba-temple-jathre-poster-released.

ಆಟೋಗಳ ಮೇಲೆ ಪೋಸ್ಟರ್‌

ಜಾತ್ರೆಯ ದಿನಾಂಕವನ್ನು ಪ್ರಚಾರ ಮಾಡಲು ಆಟೋಗಳ ಮೇಲೆ ಪೋಸ್ಟರ್‌ ಅಂಟಿಸಲಾಯಿತು. ಇದೇ ವೇಳೆ ಮಾರಿಕಾಂಬಾ ದೇವಿಯ ಪರ ಪದಾಧಿಕಾರಿಗಳು, ಭಕ್ತರು ಘೋಷಣೆ ಕೂಗಿದರು. ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಫೆಬ್ರವರಿ 24 ರಿಂದ ಫೆಬ್ರವರಿ 28ರವರೆಗೆ ನಡೆಯಲಿದೆ.

Kote-Marikamba-temple-jathre-poster-released.

ಅಧ್ಯಕ್ಷರು, ಕಾರ್ಯದರ್ಶಿ ಏನಂದ್ರು?

ಆಟೋಗಳಿಗೆ ಅಂಟಿಸುವ ಪೋಸ್ಟರ್‌ಗಳನ್ನು ಇವತ್ತು ಬಿಡುಗಡೆ ಮಾಡಿದ್ದೇವೆ. ಮಂಡ್ಲಿ ಕ್ರಿಕೆಟ್‌ ಕ್ಲಬ್‌ನವರು ಜಾತ್ರೆ ಪ್ರಯುಕ್ತ ಕ್ರಿಕೆಟ್‌ ಆಡಿಸುತ್ತಿದ್ದಾರೆ. ಫೆಬ್ರವರಿ 14ರಂದು ಸ್ಪರ್ಧೆ ನಡೆಯಲಿದೆ. ಅವುಗಳ ಪೋಸ್ಟರ್‌ ಕೂಡ ಬಿಡುಗಡೆ ನಡೆಯಲಿದೆ. ಎಸ್‌.ಕೆ.ಮರಿಯಪ್ಪ, ದೇಗುಲ ಸಮಿತಿ ಅಧ್ಯಕ್ಷ
ಹಲವು ವರ್ಷದಿಂದ ಆಟೋಗಳ ಹಿಂಬದಿ ಜಾತ್ರೆಯ ಪೋಸ್ಟರ್‌ ಅಂಟಿಸಲಾಗುತ್ತಿದೆ. ಇವತ್ತು ಅದರ ಪೋಸ್ಟರ್‌ ಬಿಡುಗಡೆಯಾಗಿದೆ. ಕೋಟೆ ಮಾರಿಕಾಂಬಾ ಸೇವಾ ಸಮಿತಿ ಪರವಾಗಿ ರಾಜ್ಯಮಟ್ಟದ ಟಗರು ಕಾಳಗ ನಡೆಸಲಾಗುತ್ತಿದೆ. ಫೆಬ್ರವರಿ 21 ಮತ್ತು 22ರಂದು ಟಗರು ಕಾಳಗ ನಡೆಯಲಿದೆ. ರಾಜ್ಯದ ವಿವಿಧೆಡೆಯ ಟಗರುಗಳು ಇದರಲ್ಲಿ ಭಾಗವಹಿಸಲಿವೆ. ಎನ್‌.ಮಂಜುನಾಥ್‌, ದೇಗುಲ ಸಮಿತಿ ಕಾರ್ಯದರ್ಶಿ

ಇದನ್ನೂ ಓದಿ – ಶಿವಮೊಗ್ಗದ ವಿದ್ಯಾರ್ಥಿನಿ ರಾಜ್ಯಕ್ಕೆ ಫಸ್ಟ್‌, ತಾಯಿಯಂತೆ ರ‍್ಯಾಂಕ್ ಗಳಿಸಿದ ಮಾಜಿ MLA ಮೊಮ್ಮಗಳು

Shivamogga Live reached 2.8 million views in January-2026 - Editor : Nitin Kaidotlu

Leave a Comment