ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 DECEMBER 2022
ಶಿವಮೊಗ್ಗ : ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಶಿವಮೊಗ್ಗ ನಗರದ ಐದು ಪ್ರಮುಖ ರಸ್ತೆಗಳಲ್ಲಿ ಬೆಳಗಿನ ಹೊತ್ತು ಭಾರಿ ವಾಹನಗಳ (heavy vehicles) ಸಂಚಾರ ನಿಷೇಧಿಸಲು ಯೋಜಿಸಲಾಗಿದೆ. ಈ ಸಂಬಂಧ ಮುಂದಿನ ತಿಂಗಳು ಅಧಿಸೂಚನೆ ಪ್ರಕಟಿಸಲು ನಿರ್ಧರಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಭಾರಿ ವಾಹನ (heavy vehicles) ಸಂಚಾರಕ್ಕೆ ನಿರ್ಬಂಧ ವಿಧಿಸಲು ಯೋಜಿಸಲಾಗಿದೆ.
ಯಾವೆಲ್ಲ ರಸ್ತೆಯಲ್ಲಿ ನಿರ್ಬಂಧ?
ರಸ್ತೆ 1 – ಎನ್.ಟಿ.ರಸ್ತೆಯಲ್ಲಿ ಸಂದೇಶ ಮೋರ್ಟರ್ಸ್ ಬಳಿಯಿಂದ ಎಪಿಎಂಸಿವರೆಗೆ
ರಸ್ತೆ 2 – ಸರ್ಕಿಟ್ ಹೌಸ್ ನಿಂದ ಕುವೆಂಪು ರಸ್ತೆಯ ಮೂಲಕ ಶಿವಮೂರ್ತಿ ಸರ್ಕಲ್ ವರೆಗೆ
ರಸ್ತೆ 3 – ಅಶೋಕ ಸರ್ಕಲ್ ನಿಂದ ಅಮೀರ್ ಅಹಮದ್ ಸರ್ಕಲ್ ವರೆಗೆ
ರಸ್ತೆ 4 – ಅಮೀರ್ ಅಹಮದ್ ಸರ್ಕಲ್ ನಿಂದ ಗೋಪಿ ಸರ್ಕಲ್ ವರೆಗೆ, ಸವಾರ್ ಲೈನ್ ರಸ್ತೆ, ಎಲ್ಎಲ್ಆರ್ ರಸ್ತೆಗಳು
ರಸ್ತೆ 5 – ಬಿ.ಹೆಚ್.ರಸ್ತೆಯಿಂದ ಸವಳಂಗ ರಸ್ತೆಯಲ್ಲಿ ಉಷಾ ನರ್ಸಿಂಗ್ ಹೋಮ್ ಸರ್ಕಲ್ ವರೆಗೆ
ನಿರ್ಬಂಧಕ್ಕೆ ಕಾರಣವೇನು?
ಶಿವಮೊಗ್ಗ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಈ ಹಿನ್ನೆಲೆ ಬೆಳಗಿನ ಅವಧಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುಗಮ ಸಂಚಾರ ಮತ್ತು ಸಂಚಾರ ನಿಯಂತ್ರಣ ವ್ಯವಸ್ಥೆ ಕುರಿತ ಸಭೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಈ ನಿರ್ಧಾರ ಪ್ರಕಟಿಸಿದರು.
ಈ ಮೊದಲು ಅಧಿಸೂಚನೆಯಾಗಿತ್ತು
ನಗರ ವ್ಯಾಪ್ತಿಯ ಕೆಲವು ರಸ್ತೆಗಳಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಿ 1994ರಲ್ಲೆ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ನಿಷೇಧಿವಿತ್ತು. ಈಗ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ 2 ಪೊಲೀಸ್ ಉಪ ವಿಭಾಗ ರಚನೆ, ಯಾವ್ಯಾವ ಠಾಣೆ ಯಾವ ಉಪ ವಿಭಾಗಕ್ಕೆ ಒಳಪಡಲಿದೆ?
ಜನವರಿ ತಿಂಗಳಲ್ಲಿ ಅಧಿಸೂಚನೆ ಪ್ರಕಟಿಸಲಾಗುತ್ತದೆ. ಅದಕ್ಕೂ ಮೊದಲು ಅಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422