ಶಿವಮೊಗ್ಗದಲ್ಲಿ ಹೆಲ್ಮೆಟ್‌ಗೆ ಡಿಮಾಂಡಪ್ಪೋ ಡಿಮಾಂಡ್‌, ನಾಲ್ಕೈದು ಪಟ್ಟು ಏರಿದ ಸೇಲ್ಸ್‌, ಯಾವ ಹೆಲ್ಮೆಟ್‌ಗೆ ಹೆಚ್ಚಿದೆ ಬೇಡಿಕೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

SHIVAMOGGA LIVE | 1 AUGUST 2023

SHIMOGA : ಹಾಫ್‌ ಹೆಲ್ಮೆಟ್‌ ವಿರುದ್ಧ ಸಂಚಾರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾಗಾಗಿ ವಾಹನ ಸವಾರರು ಫುಲ್‌ ಹೆಲ್ಮೆಟ್‌ (Helmet) ಖರೀದಿಗೆ ಮುಗಿಬಿದ್ದಿದ್ದಾರೆ. ಐಎಸ್‌ಐ ಗುರುತಿನ ಹೆಲ್ಮೆಟ್‌ಗಳ ಮಾರಾಟ ನಾಲ್ಕು ಪಟ್ಟು ಹೆಚ್ಚಾಗಿದೆ.

➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

Full Helmet Sales in Shimoga

ಅಸುರಕ್ಷಿತ ಹಾಫ್‌ ಹೆಲ್ಮೆಟ್‌ ವಿರುದ್ಧ ಶಿವಮೊಗ್ಗ ಸಂಚಾರ ಠಾಣೆ ಪೊಲೀಸರು ಕಳೆದ ವಾರ ದಿಢೀರ್‌ ಕಾರ್ಯಾಚರಣೆ ನಡೆಸಿದ್ದರು. ದ್ವಿಚಕ್ರ ವಾಹನ ಸವಾರರಿಂದ ಹಾಫ್‌ ಹೆಲ್ಮೆಟ್‌ಗಳನ್ನು (Helmet) ಕಸಿದುಕೊಂಡು ಕಳುಹಿಸುತ್ತಿದ್ದರು. ಅಲ್ಲದೆ ಅಂಗಡಿಗಳ ಮೇಲೆ ದಾಳಿ ನಡೆಸಿ ಹಾಫ್‌ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದಿದ್ದರು.

Half Helmets Seized

ಫುಲ್‌ ಹೆಲ್ಮೆಟ್‌ಗೆ ಫುಲ್‌ ಡಿಮಾಂಡ್‌

ಪೊಲೀಸರ ಕಾರ್ಯಾಚರಣೆ ಬೆನ್ನಿಗೆ ಫುಲ್‌ ಹೆಲ್ಮೆಟ್‌ಗೆ ಶಿವಮೊಗ್ಗದಲ್ಲಿ ಫುಲ್‌ ಡಿಮಾಂಡ್‌ ಸೃಷ್ಟಿಯಾಗಿದೆ. ವಾಹನ ಸವಾರರು ಐಎಸ್‌ಐ ಗುರುತಿನ ಫುಲ್‌ ಹೆಲ್ಮೆಟ್‌ ಖರೀದಿಗೆ ಮುಗಿಬಿದ್ದಿದ್ದಾರೆ. ಹೆಲ್ಮೆಟ್‌ ಅಂಗಡಿಗಳು, ರಸ್ತೆ ಬದಿಯಲ್ಲಿ ಹೆಲ್ಮೆಟ್‌ ಮಾರಾಟಗಾರರ ಬಳಿ ಜನ ಗುಂಪುಗೂಡಿ ಖರೀದಿ ಮಾಡುತ್ತಿದ್ದಾರೆ.

ನಾಲ್ಕು ಪಟ್ಟು ಹೆಚ್ಚಾದ ಮಾರಾಟ

ಶಿವಮೊಗ್ಗ ನಗರದಲ್ಲಿ ಐಎಸ್‌ಐ ಗುರುತಿನ ಹೆಲ್ಮೆಟ್‌ ಮಾರಾಟ ನಾಲ್ಕೈದು ಪಟ್ಟು ಹೆಚ್ಚಾಗಿದೆ. ಈ ಮೊದಲು ಪ್ರತಿದಿನ 5 ರಿಂದ 10 ಹೆಲ್ಮೆಟ್‌ ಮಾರಾಟವಾಗುತ್ತಿದ್ದ ಮಳಿಗೆಗಳಲ್ಲಿ ಈಗ 50ಕ್ಕೂ ಹೆಚ್ಚು ಹೆಲ್ಮೆಟ್‌ಗಳು ಸೇಲ್‌ ಆಗುತ್ತಿವೆ. ವಾಹನಗಳ ಬಿಡಿ ಭಾಗಗಳ ಮಾರಾಟ ಮಳಿಗೆಗಳ ಮುಂದೆ ಹೆಲ್ಮೆಟ್‌ಗಳೆ ರಾರಾಜಿಸುತ್ತಿವೆ. ಗ್ರಾಹಕರನ್ನು ಸೆಳೆಯಲು ಬಗೆಬಗೆ ಹೆಲ್ಮೆಟ್‌ಗಳನ್ನು ಅಂಗಡಿಗಳ ಮುಂದ ಜೋತು ಹಾಕಲಾಗಿದೆ.

Helmet Sales in Dalal

ನಮ್ಮ ಅಂಗಡಿಯಲ್ಲಿ ಈ ಮೊದಲು ನಿತ್ಯ 10 ರಿಂದ 15 ಹೆಲ್ಮೆಟ್‌ಗಳು ಮಾರಾಟವಾಗುತ್ತಿದ್ದವು. ಈಗ ಸುಮಾರು 50 ಹೆಲ್ಮೆಟ್‌ಗಳು ದಿನ ಮಾರಾಟವಾಗುತ್ತಿವೆ. 800 ರೂ. ನಿಂದ 900 ರೂ.ವರೆಗಿನ ಹೆಲ್ಮೆಟ್‌ಗಳಿಗೆ ಹೆಚ್ಚು ಬೇಡಿಕೆ ಇದೆ.ಚನ್ನಬಸಪ್ಪ, ದಲಾಲ್‌ ಆಟೋ ಸ್ಪೇರ್ಸ್‌, ಬಿ.ಹೆಚ್.ರಸ್ತೆ
ಮೊದಲೆಲ್ಲ ಪ್ರತಿದಿನ ಒಂದೆರಡು ಹೆಲ್ಮೆಟ್‌ ಮಾರಾಟವಾಗುತ್ತಿತ್ತು. ಈಗ 5 ರಿಂದ 10 ಮಾರಾಟವಾಗುತ್ತಿದೆ. ರಸ್ತೆ ಬದಿ ಮಾರಾಟ ಮಾಡುತ್ತಿದ್ದೇವೆ ಅನ್ನುವ ಕಾರಣಕ್ಕೆ ಜನರು ತೀರ ಕಡಿಮೆ ದರಕ್ಕೆ ಕೇಳುತ್ತಾರೆ. ಅಂಗಡಿಗಳಲ್ಲಿ ಇದೆ ಹೆಲ್ಮೆಟ್‌ಗೆ ದುಬಾರಿ ಬೆಲೆ ಕೊಡುತ್ತಾರೆ. ಆದರೂ ಅನಿವಾರ್ಯ ಎಂದು ನಮ್ಮ ಲಾಭ ನೋಡಿಕೊಂಡು ಮಾರಾಟ ಮಾಡುತ್ತಿದ್ದೇವೆ.ಅಮರ್‌, ಹೆಲ್ಮೆಟ್‌ ಮಾರಾಟಗಾರ

ಹೆಲ್ಮೆಟ್‌ ಕಳ್ಳರ ಹಾವಳಿ

ಹಾಫ್‌ ಹೆಲ್ಮೆಟ್‌ ಕಾರ್ಯಾಚರಣೆ ನಂತರ ಹೆಲ್ಮೆಟ್‌ ಕಳ್ಳರ ಹಾವಳಿ ಹೆಚ್ಚಾಗಿದೆ. ವಾಹನ ನಿಲ್ಲಿಸಿ ಹ್ಯಾಂಡಲ್‌ಗೆ ಹೆಲ್ಮೆಟ್‌ ತೂಗು ಹಾಕಿ ಹೋದರೆ ಕಳ್ಳತನವಾಗುತ್ತಿವೆ. ಹಾಗಾಗಿ ಹೆಲ್ಮೆಟ್‌ ಲಾಕ್‌ಗು ಈಗ ಡಿಮಾಂಡ್‌ ಸೃಷ್ಟಿಯಾಗಿದೆ. ಅಂಗಡಿಗಳಲ್ಲಿ ಹೆಲ್ಮೆಟ್‌ ಜೊತೆಗೆ ಲಾಕ್‌ ಖರೀದಿಸುವವರ ಸಂಖ್ಯೆಯು ಹೆಚ್ಚಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಟ್ರಾಫಿಕ್‌ ಪೊಲೀಸರಿಂದ ದಿಢೀರ್‌ ಕಾರ್ಯಾಚರಣೆ, ರಾಶಿ ರಾಶಿ ಹಾಫ್‌ ಹೆಲ್ಮೆಟ್‌ ವಶಕ್ಕೆ, ವಿಡಿಯೋಗಳು ವೈರಲ್

ಹಾಫ್‌ ಹೆಲ್ಮೆಟ್‌ ವಿರುದ್ಧ ಕಾರ್ಯಾಚರಣೆ ಮತ್ತು ಪೊಲೀಸರು ದಂಡ ವಿಧಿಸುತ್ತಿರುವುದರಿಂದ ವಾಹನ ಸವಾರರು ತಪ್ಪದೆ ಹೆಲ್ಮೆಟ್‌ ಧರಿಸಲು ಆರಂಭಿಸಿದ್ದಾರೆ.

Leave a Comment