ಹಿಂದೂ ಮಹಾಸಭಾ ಗಣಪತಿ ಉತ್ಸವದ ಮಹಾದ್ವಾರದ ಎರಡು ಪ್ರೋಮೋ ವೈರಲ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಹಿಂದೂ ಮಹಾಸಭಾ (HINDU MAHASABHA) ಗಣೇಶ ಉತ್ಸವದ ಅಂಗವಾಗಿ ಗಾಂಧಿ ಬಜಾರ್’ನಲ್ಲಿ (GANDHI BAZAAR) ನಿರ್ಮಿಸುವ ಮಹಾದ್ವಾರದ ಪ್ರೋಮೊ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರೋಮೊ ವೈರಲ್ ಆಗಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.

Shimoga Nanjappa Hospital

ಕಲಾವಿದರು ಮಹಾದ್ವಾರದ ಸಿದ್ಧತೆಯಲ್ಲಿರುವ ವಿಡಿಯೋ ಪ್ರೋಮೋ ವೈರಲ್ ಆಗಿದೆ. ಎರಡು ಪ್ರೋಮೋಗಳು ಬಿಡುಗಡೆಯಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.

ವೈರಲ್ ವಿಡಿಯೋದಲ್ಲಿ ಏನೇನಿದೆ?

ಕಳೆದ ಭಾರಿಗಿಂತಲೂ ಈ ಭಾರಿ ಹೆಚ್ಚು ಅದ್ಧೂರಿಯಾದ ಮಹಾದ್ವಾರ ನಿರ್ಮಿಸಲಾಗುತ್ತಿದೆ ಎಂದು ಹಿಂದೂ ಮಹಾಸಭಾ ಗಣಪತಿ ಉತ್ಸವದ ಅಲಂಕಾರ ಸಮಿತಿ ತಿಳಿಸಿದೆ. ಇದು ಶಿವಮೊಗ್ಗ ಜನರ ನಿರೀಕ್ಷೆ ಹೆಚ್ಚಿಸಿದೆ. ಈ ನಡುವೆ ಪ್ರೋಮೋ ವೈರಲ್ ಆಗಿದ್ದು, ಅದರಲ್ಲಿ ಕುದುರುಗಳು, ಪೌರಾಣಿಕ ಕಾನ್ಸೆಪ್ಟ್ ಸಿದ್ಧಪಡಿಸಲಾಗುತ್ತಿದೆ ಎಂಬ ಚರ್ಚೆ ಹುಟ್ಟಿಸಿದೆ.

ಇವತ್ತಿನಿಂದ ಮಹಾದ್ವಾರ ನಿರ್ಮಾಣ

ಗಾಂಧಿ ಬಜಾರ್’ನಲ್ಲಿ ಇವತ್ತಿನಿಂದ ಮಹಾದ್ವಾರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಸತತ ಎರಡು ದಿನ ಮಹಾದ್ವಾರ ನಿರ್ಮಾಣ ಕಾರ್ಯ ನಡೆಯಲಿದೆ. ಹಾಗಾಗಿ ಇವತ್ತಿನಿಂದಲೆ ಗಾಂಧಿ ಬಜಾರ್ ಮುಂದೆ ಹೆಚ್ಚಿನ ಜನ ಸೇರುವ ನಿರೀಕ್ಷೆ ಇದೆ.

ಮಹಾದ್ವಾರದ ಕುರಿತು ಭಾರಿ ನಿರೀಕ್ಷೆ

ಬಿ.ಹೆಚ್.ರಸ್ತೆಯಿಂದ ಗಾಂಧಿ ಬಜಾರ್’ಗೆ ಹೋಗುವಲ್ಲಿ ಮಹಾದ್ವಾರ ನಿರ್ಮಿಸಲಾಗುತ್ತದೆ. ಈ ಹಿಂದೆ ಅಯೋಧ್ಯೆ ರಾಮಮಂದಿರದ ಮಾಡಲ್, ಸಿಂಹಾಸನದ ಮೇಲೆ ಕುಳಿತ ಛತ್ರಪತಿ ಶಿವಾಜಿಯ ಮೂರ್ತಿಯ ಮಹಾದ್ವಾರ ನಿರ್ಮಿಸಲಾಗಿತ್ತು. ಇದು ದೇಶಾದ್ಯಂತ ಭಾರಿ ಸುದ್ದಿ ಮಾಡಿತ್ತು. ಹಾಗಾಗಿ ಈ ಭಾರಿಯ ಮಹಾದ್ವಾರದ ಕುರಿತು ತೀವ್ರ ಕುತೂಹಲ ಮೂಡಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ, ಸಾವರ್ಕರ್ ಪರ ಘೋಷಣೆ

APARTMENT-FOR-SALE

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment