ಶಿವಮೊಗ್ಗ ಲೈವ್.ಕಾಂ | SHIMOGA NEWS | 29 MARCH 2021
ಕರೋನ ಆತಂಕದ ನಡುವೆಯು ಶಿವಮೊಗ್ಗದಲ್ಲಿ ಹೋಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಹೆಚ್ಚು ಜನ ಸೇರಬಾರದು ಎಂಬ ನಿಯಮ ಇರುವುದರಿಂದ ಸಂಭ್ರಮಕ್ಕೆ ಸ್ವಲ್ಪ ಬ್ರೇಕ್ ಬಿದ್ದಿತ್ತು.
ಶಿವಮೊಗ್ಗ ನಗರದಲ್ಲಿ ಇವತ್ತು ಹೋಳಿ ಹಬ್ಬ ಆಚರಿಸಲಾಯಿತು. ವಿವಿಧ ಬಡಾವಣೆಗಳಲ್ಲಿ ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದರು. ಕುಟುಂಬದವರು, ಸ್ನೇಹಿತರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು.
ಗಾಂಧಿ ಬಜಾರ್‍ನಲ್ಲಿ ಹಬ್ಬ ಜೋರು
ಗಾಂಧಿ ಬಜಾರ್‍ನ ತುಳಜಾ ಭವಾನಿ ದೇವಸ್ಥಾನದ ಸಮೀಪ, ಬಸವೇಶ್ವರ ದೇಗುಲ, ಯಲ್ಲಮ್ಮ ದೇವಸ್ಥಾನದ ಬಳಿ ಸಂಭ್ರಮದಿಂದ ಹೋಳಿ ಆಚರಿಸಲಾಯಿತು. ರಸ್ತೆಯಲ್ಲಿ ಬಂದವರಿಗೆಲ್ಲ ಬಣ್ಣ ಹಚ್ಚಿ ಯುವಕರು ಖುಷಿ ಪಟ್ಟರು.
ಬಣ್ಣ ಹಚ್ಚಿಕೊಂಡು ಬೈಕ್ ರೈಡ್
ಬಣ್ಣದ ಒಕುಳಿಯಲ್ಲಿ ಮಿಂದಿದ್ದ ಯುವಕರು ಶಿವಮೊಗ್ಗ ಗನರದ ವಿವಿಧೆಡೆ ಬೈಕ್ ರೈಡ್ ಮಾಡಿದರು. ನಗರದಾದ್ಯಂತ ಬೈಕ್‍ನಲ್ಲಿ ಸುತ್ತಾಡಿದ ಯುವಕರು, ಬಣ್ಣ ಎರಚಿದರು.
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]