ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 APRIL 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ, ಜರ್ಮನಿ ಸೇರಿದಂತೆ ದೇಶ ವಿದೇಶದ ಜನರು ಬಾಯಿ ಚಪ್ಪರಿಸುವಂತಹ ಹೋಳಿಗೆ ತಯಾರಿಸುತ್ತಿದ್ದ ಶಿವಮೊಗ್ಗದ ಹೋಳಿಗೆ ಗೌರಮ್ಮ ನಿಧನರಾಗಿದ್ದಾರೆ. ಶಿವಮೊಗ್ಗದ ದೊಡ್ಡ ಬ್ರಾಹ್ಮಣರ ಬೀದಿಯ ನಿವಾಸಿಯಾಗಿದ್ದ ಗೌರಮ್ಮ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.
ಗೌರಮ್ಮ ಬಗ್ಗೆ ಗೊತ್ತಿರಬೇಕಾದ 3 ಸಂಗತಿ
1934ರಲ್ಲಿ ತೀರ್ಥಹಳ್ಳಿ ತಾಲೂಕು ಚಕ್ಕೋಡಬೈಲಿನಲ್ಲಿ ಗೌರಮ್ಮ ಜನನ. ಸಿಟಿ ಕೋ ಆಪರೇಟಿವ್ ಬ್ಯಾಂಕ್ ಉದ್ಯೋಗಿ ಗುರುಮೂರ್ತಿ ಶಾಸ್ತ್ರಿ ಅವರೊಂದಿಗೆ ವಿವಾಹ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಜನನ. ಕೆಲವೇ ವರ್ಷದಲ್ಲಿ ಪತಿ ತೀರಿಕೊಂಡರು. ಸಂಸಾರದ ನೊಗ ಹೊತ್ತ ಗೌರಮ್ಮ, ನೆರೆಹೊರೆ ಮನೆಗಳಿಗೆ ಸಾಂಬಾರ್ ಪುಡಿ, ಚಟ್ನಿ ಪುಡಿ ಸೇರಿದಂತೆ ವಿವಿಧ ಸಾಂಬಾರು ಪದಾರ್ಥ ತಯಾರಿಸಿಕೊಟ್ಟು ಜೀವನ ಸಾಗಿಸಿದರು.
ಚಕ್ಕುಲಿ, ಕೋಡುಬಳೆ ಸೇರಿದಂತೆ ವಿವಿಧ ತಿಂಡಿ, ತಿನಿಸು ತಯಾರಿಸಿ ಮಾರಾಟ ಆರಂಭಿಸಿದರು. ಅವು ಅಷ್ಟೇನು ಆದಾಯ ತಂದು ಕೊಡಲಿಲ್ಲ. ಹೋಳಿಗೆ ತಯಾರಿಸಿ ಮಾರಾಟ ಮಾಡಲು ಗೌರಮ್ಮ ಮುಂದಾದರು. ಮೊದಲು ಹೋಳಿಗೆ ಮಾರಾಟ ಆರಂಭಿಸಿದ ಕೀರ್ತಿಯು ಇವರದ್ದೇ. ಇವರ ಕೈ ರುಚಿಗೆ ಶಿವಮೊಗ್ಗ ನಗರದ ಜನರು ಮಾರು ಹೋದರು. ಹಂತ ಹಂತವಾಗಿ ಬೇಡಿಕೆ ಹೆಚ್ಚಿತು.
ಗೌರಮ್ಮ ಅವರು 50ಕ್ಕೂ ಹೆಚ್ಚು ವೆರೈಟಿ ಹೋಳಿಗೆ ಸಿದ್ಧಪಡಿಸುತ್ತಿದ್ದರು. ದೇಶ, ವಿದೇಶದಲ್ಲಿ ನೆಲೆಸಿರುವ ಶಿವಮೊಗ್ಗದ ಜನರು ಗೌರಮ್ಮ ಅವರ ಹೋಳಿಗೆ ತರಿಸಿಕೊಳ್ಳಲು ಆರಂಭಿಸಿದರು. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಆಸ್ಪ್ರೇಲಿಯ ಸೇರಿದಂತೆ ಹಲವು ದೇಶಗಳು, ಭಾರತದ ವಿವಿಧ ರಾಜ್ಯಗಳಲ್ಲಿರುವ ಮಲೆನಾಡಿಗರ ಮಧ್ಯೆ ಗೌರಮ್ಮ ಹೋಳಿಗೆ ಫೇಮಸ್ ಆಯಿತು. ಹಲವು ಮಹಿಳೆಯರಿಗೆ ಕೆಲಸ ಕೊಟ್ಟರು. ಇವರ ಗರಡಿಯಲ್ಲಿ ಪಳಗಿದ ಮಹಿಳೆಯರು ಈಗ ರುಚಿ ರುಚಿಯಾದ ಹೋಳಿಗೆ ತಯಾರಿಸಿ ಸ್ವಂತ ಉದ್ಯಮ ಸ್ಥಾಪಿಸಿಕೊಂಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗಲ್ಲಿ ಮತ್ತೆ ಬಿಸಿಲಿನ ಪ್ರತಾಪ, ಇವತ್ತು ಎಷ್ಟಿರುತ್ತೆ ತಾಪಮಾನ?