ತ್ಯಾಗರ್ತಿ ಸಮೀಪ ಬೆಳಗೆದ್ದು ಜಮೀನಿಗೆ ತೆರಳಿದ್ದ ರೈತನಿಗೆ ಕಾದಿತ್ತು ಆಘಾತ

SHIVAMOGGA LIVE NEWS | 15 APRIL 2024

SAGARA : ಜಮೀನಿನಲ್ಲಿ ಇಟ್ಟಿದ್ದ ಸುಮಾರು 20 ಕ್ವಿಂಟಾಲ್‌ ಬೀಜದ ಶುಂಠಿ ಕಳ್ಳತನವಾಗಿದೆ. ಸಾಗರ ತಾಲೂಕು ತ್ಯಾಗರ್ತಿ ಸಮೀಪದ ಮತ್ತಿಕೆರೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸತ್ಯನಾರಾಯಣ ಎಂಬುವವರು ತಮ್ಮ ಜಮೀನಲ್ಲಿ ಸುಮಾರು 20 ಕ್ವಿಂಟಾಲ್‌ ಬೀಜದ ಶುಂಠಿ ಇಟ್ಟಿದ್ದರು. ಏ.13ರಂದು ಬೆಳಗ್ಗೆ ಜಮೀನಿಗೆ ತೆರಳಿದ್ದಾಗ ಶುಂಠಿ ಕಳ್ಳತನವಾಗಿತ್ತು. ಘಟನೆ ಸಂಬಂಧ ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಿಡಿಲಿಗೆ ಎರಡು ದನಗಳು ಸಾವು

tyagarthi sagara graphics

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment