ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | HOME MINISTER | 07 ಮೇ 2022
ಶಿವಮೊಗ್ಗದ ಸೂಳೆಬೈಲಿನಲ್ಲಿ ಕಾರಿನ ಮೇಲೆ ದಾಳಿ ಪ್ರಕರಣದ ಹಿನ್ನೆಲೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳೀಯರೊಬ್ಬರಿಗೆ ವಾರ್ನಿಂಗ್ ನೀಡಿದ್ದಾರೆ. ಇಲ್ಲಿರುವ ಹುಡುಗರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು.
ಮತ್ತೂರು ಗ್ರಾಮಕ್ಕೆ ತೆರಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸೂಳೆಬೈಲು ಮೂಲಕ ಶಿವಮೊಗ್ಗಕ್ಕೆ ಆಗಮಿಸಿದರು. ಈ ಸಂದರ್ಭ ಕಾರಿನ ಮೇಲೆ ದಾಳಿಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಈಗ ಎಲ್ಲವೂ ಬದಲಾಗಿದೆ’
ಈ ವೇಳೆ ಸ್ಥಳೀಯರೊಬ್ಬರನ್ನು ಕರೆದು ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಾರ್ನಿಂಗ್ ನೀಡಿದರು.
‘ನಿಮ್ಮ ಹುಡುಗರಿಗೆಲ್ಲ ಕರೆದು ಹೇಳಿ. ಈಗ ಮುಂಚಿನ ಹಾಗೆಲ್ಲ ಇಲ್ಲ. ಹೀಗೆ ಮುಂದುವರೆದರೆ ಬಿಡೋದಿಲ್ಲ. ಹೇಗೆ ಬುದ್ದಿ ಕಲಿಸಬೇಕೋ ಹಾಗೆ ಕಲಿಸುತ್ತಾರೆ. ಗಲಾಟೆ ಮಾಡಿದವರು ಅನುಭವಿಸುತ್ತಾರೆ. ಈವರೆಗೂ ಜನ ತಾಳ್ಮೆಯಿಂದ ಇದ್ದರು. ಹರ್ಷನ ಕೊಲೆ ನಂತರ ಒಂದಿಲ್ಲೊಂದು ಘಟನೆ ನಡೆಯುತ್ತಿದೆ. ಕಾನೂನ ಕೈಗೆತ್ತಿಕೊಂಡರೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಾರೆ’ ಎಂದು ವಾರ್ನಿಂಗ್ ನೀಡಿದರು.
VIDEO NEWS
ಇದನ್ನೂ ಓದಿ – ಕಾರು ಗಾಜು ಪೀಸ್ ಪೀಸ್ ಕೇಸ್, ಮತ್ತೂರಿಗೆ ಗೃಹ ಸಚಿವರ ಭೇಟಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422