ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

Published On : ಮಾರ್ಚ್ 17, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಪ್ರೀತಿಯಿಂದ ಸಾಕಿದ್ದ ಪ್ರಾಣಿ (Fighter Kuri) ಮೃತಪಟ್ಟಾಗ ಅದರ ಸ್ಮರಣಾರ್ಥವಾಗಿ ಸಮಾಜಮುಖಿ ಕಾರ್ಯ ಮಾಡುವ ಮೂಲಕ ನಗರದ ಸೀಗೆಹಟ್ಟಿ ಬಡಾವಣೆಯ ಮಣಿ ಮತ್ತು ಸ್ನೇಹಿತರ ತಂಡ ಮಾದರಿಯಾಗಿದೆ.

ಕುಟುಂಬದ ಸದಸ್ಯನಂತಿದ್ದ ಕುರಿ

ಸೀಗೆಹಟ್ಟಿ ಬಡಾವಣೆಯ ನಿವಾಸಿ ಮಣಿ ಅವರು ಶಿವಚೌಡಿ ಧರಣಿ ಎಂಬ ಹೆಸರಿನ ‘ಫೈಟರ್ ಕುರಿ‘ಯೊಂದನ್ನು ಸಾಕಿದ್ದರು. ಆ ಕುರಿಯನ್ನು ಕೇವಲ ಸಾಕುಪ್ರಾಣಿಯಂತೆ ನೋಡದೆ, ತಮ್ಮ ಕುಟುಂಬ ಸದಸ್ಯನಂತೆ ಪೋಷಿಸಿದ್ದರು. ಮರಿಕುರಿಯಾಗಿದ್ದಾಗಲೆ 12 ಕಣಗಳಲ್ಲಿ ಗೆದ್ದು ಬೀಗಿತ್ತು. ಈತನಕ ಒಟ್ಟು 33 ಕಣಗಳ ಸರದಾರ ಎನಿಸಿಕೊಂಡಿತ್ತು. ಕಳೆದ ಶುಕ್ರವಾರ ಈ ಕುರಿ ಅನಾರೋಗ್ಯದಿಂದ ಮೃತಪಟ್ಟಿತ್ತು.

ritual-for-a-tagaru-at-sigehatti-in-Shimoga-city.

ಕುರಿಯ ಸಾವಿನಿಂದ ಮರುಗಿದ ಮಣಿ ಮತ್ತು ಸ್ನೇಹಿತರು, ಅದಕ್ಕೆ ಸಕಲ ವಿಧಿವಿಧಾನಗಳೊಂದಿಗೆ ಶವಸಂಸ್ಕಾರ ನೆರವೇರಿಸಿದರು. ಅದರ ನೆನಪಿಗಾಗಿ ತಿಥಿ ಕಾರ್ಯವನ್ನು ಹಮ್ಮಿಕೊಂಡಿದ್ದರು.

ಮಕ್ಕಳಿಗೆ ಅನ್ನದಾನ, ಪುಸ್ತಕ ವಿತರಣೆ

ಸಾಮಾನ್ಯವಾಗಿ ಇಂತಹ ಕಾರ್ಯಗಳಲ್ಲಿ ಬಾಡೂಟ ಅಥವಾ ಸತ್ಕಾರ ಕೂಟ ಏರ್ಪಡಿಸುವುದು ವಾಡಿಕೆ. ಆದರೆ ಮಣಿ ಮತ್ತು ಅವರ ಸ್ನೇಹಿತರು ವಿಭಿನ್ನವಾಗಿ ಯೋಚಿಸಿ, ಸರ್ಕಾರಿ ಶಾಲೆಯ ಸುಮಾರು 60 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು. ಅಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು ಉಚಿತವಾಗಿ ಪೆನ್ನು ಮತ್ತು ಪುಸ್ತಕಗಳನ್ನು ವಿತರಿಸಿದರು.

ritual-for-a-tagaru-at-sigehatti-in-Shimoga-city. Fighter Kuri

ತಮ್ಮ ಪ್ರೀತಿಯ ಕುರಿಯ ನೆನಪನ್ನು ಮಕ್ಕಳ ಮುಖದ ನಗು ಹಾಗೂ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಜೀವಂತವಾಗಿರಿಸಿದ ಮಣಿ ಮತ್ತು ಅವರ ಸ್ನೇಹಿತರ ಈ ಕಾರ್ಯಕ್ಕೆ ಬಡಾವಣೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 17, 2026

Leave a Comment