ಹಬ್ಬಕ್ಕೆಂದು ಮಾವನ ಮನೆಗೆ ಹೋಗಿದ್ದವರು ಮನೆಗೆ ಮರಳಿದಾಗ ಕಾದಿತ್ತು ಆಘಾತ

SHIVAMOGGA LIVE NEWS | 8 FEBRURARY 2023

SHIMOGA : ಮನೆಯವರೆಲ್ಲ ಹಬ್ಬಕ್ಕೆ ಸಂಬಂಧಿಕರ ಮನೆಗೆ ತೆರಳಿದ್ದಾಗ ಮನೆಯ ಬಾಗಿಲ ಬೀಗ ಮುರಿದು ಕಳ್ಳತನ (house theft) ಮಾಡಲಾಗಿದೆ. ಮತ್ತೋಡು ಗ್ರಾಮದಲ್ಲಿ ಘಟನೆ ಸಂಭವಿಸಿದೆ.➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Crime-News-General-Image

ಮಲ್ಲೇಶಪ್ಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮಲ್ಲೇಶಪ್ಪ ಅವರ ಮಾವನ ಮನೆಯಲ್ಲಿ ಕಂತೆ ಭಿಕ್ಷೆ ಹಬ್ಬದಲ್ಲಿ ಪಾಲ್ಗೊಳ್ಳಲು ಎಲ್ಲರು ಫೆ.6ರಂದು ಸಂಜೆ ತೆರಳಿದ್ದರು. ಮರುದಿನ ಬೆಳಗ್ಗೆ ಮನೆ ಬಳಿಗೆ ಬಂದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ.

ಇದನ್ನೂ ಓದಿ – ಹೆಣ್ಣು ಒಪ್ಪಿಸುವ ಶಾಸ್ತ್ರ ಪೂರ್ಣ, ತವರು ಮನೆಯಿಂದ ರಾತ್ರಿ ಗಂಡನೆ ಮನೆಗೆ ಮಾರಿಕಾಂಬೆ, ಹೇಗಿತ್ತು ಮೆರವಣಿಗೆ?

ಮನೆಯಲ್ಲಿದ್ದ 1 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನಾಭರಣ, 43 ಸಾವಿರ ರೂ. ಮೌಲ್ಯದ 1 ಕೆಜಿ 240 ಗ್ರಾಂ ಬೆಳ್ಳಿ ಆಭರಣಗಳು, 40 ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೊಮ್ಮನಕಟ್ಟೆಯಲ್ಲಿ ಮನೆ ಕಳ್ಳತನ

ಬೊಮ್ಮನಕಟ್ಟೆಯಲ್ಲಿ ಫಾಜಲ್ ಉನ್ನೀಸ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿ (house theft). ಫಾಜಲ್ ಉನ್ನೀಸ್ ಅವರು ತಮ್ಮ ಅಣ್ಣನ ಮನೆಗೆ ಹೋಗಿದ್ದಾಗ ಘಟನೆ ಸಂಭವಿಸಿದೆ. ಮನೆಯ ಬೀರುವಿನಲ್ಲಿದ್ದ 4 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಗಾಡಿಕೊಪ್ಪ, ಆಲ್ಕೊಳದಲ್ಲಿ ಒಂದೇ ರಾತ್ರಿ 2 ಮನೆ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನ

Leave a Comment