ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 3 FEBRUARY 2023
SHIMOGA : ಬಾಕಿ ಇರುವ ಟ್ರಾಫಿಕ್ ದಂಡ ಪಾವತಿಸಿದರೆ ಶೇ.50ರಷ್ಟು ರಿಯಾಯಿತಿ (Fine Discount) ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಫೆ.11ರವರೆಗೆ ಈ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿಯು ಬಾಕಿ ಇರುವ ದಂಡ ಕಟ್ಟಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗದಲ್ಲಿ ಎಲ್ಲೆಲ್ಲಿ ದಂಡ ಕಟ್ಟಬಹುದು?
ಕರ್ನಾಟಕ ಒನ್ ವೆಬ್ ಸೈಟ್ : ವಾಹನದ ನೋಂದಣಿ ಸಂಖ್ಯೆ / ನೊಟೀಸ್ ನಂಬರ್ ನಮೂದಿಸಿ ವಿವರ ಪಡೆದು ಬಾಕಿ ಇರುವ ದಂಡ ಪಾವತಿ ಮಾಡಬಹುದು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶಿವಮೊಗ್ಗ ಒನ್ ಕೇಂದ್ರ : ಇಲ್ಲಿಯು ಬಾಕಿ ಇರುವ ದಂಡ ಪಾವತಿ ಮಾಡಬಹುದು.
ಪಶ್ಚಿಮ ಸಂಚಾರ ಠಾಣೆ : ಶಿವಮೊಗ್ಗ ನಗರದ ಪಶ್ಚಿಮ ಸಂಚಾರ ಠಾಣೆಯ ಮೊದಲನೆ ಮಹಡಿಯಲ್ಲಿ ಟ್ರಾಫಿಕ್ ಆಟೋಮೇಷನ್ ಸೆಂಟರ್ ನಲ್ಲಿ ವಾಹನದ ನೋಂದಣಿ ಸಂಖ್ಯೆ ವಿವರ ನೀಡಿ ದಂಡ ಕಟ್ಟಬಹುದು.
ಸಂಚಾರ ಠಾಣೆ : ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ವಾಹನದ ನೋಂದಣಿ ಸಂಖ್ಯೆ ನೀಡಿ ದಂಡ ಪಾವತಿ ಮಾಡಬಹುದು.
ಸಂಚಾರ ಪೊಲೀಸ್ : ಕರ್ತವ್ಯ ನಿರತ ಸಂಚಾರ ಠಾಣೆ ಎಎಸ್ಐ, ಪಿಎಸ್ಐ, ಸಿಪಿಐ ಬಳಿ ಟ್ರಾಫಿಕ್ ಸ್ಪಾಟ್ ಫೈನ್ ಡಿವೈಸ್ ಗಳಲ್ಲಿ ಬಾಕಿ ದಂಡ ಪಾವತಿಸಲು ಅವಕಾಶವಿದೆ. ದಂಡ ಕಟ್ಟಿ ರಶೀದಿ ಪಡೆಯಬಹುದು.
ಇದನ್ನೂ ಓದಿ – ಟ್ರಾಫಿಕ್ ಬಾಕಿ ದಂಡ ಶೇ.50ರಷ್ಟು ರಿಯಾಯಿತಿ, ಯಾರಿಗೆ ಈ ನಿಯಮ ಅನ್ವಯ? ಇಲ್ಲಿದೆ ಡಿಟೇಲ್ಸ್
ಹೆಚ್ಚಿನ ಮಾಹಿತಿಗೆ ಪೂರ್ವ ಸಂಚಾರ ಪೊಲೀಸ್ ಠಾಣೆ ದೂ. 08182 240666, ಪಶ್ಚಿಮ ಸಂಚಾರ ಠಾಣೆ ದೂ. 08182 261417, ಭದ್ರಾವತಿ ಸಂಚಾರ ಠಾಣೆ 08181 276314 ಸಂಪರ್ಕಿಸಬಹುದು.