ಶಿವಮೊಗ್ಗದ ಹೊನ್ನಾಳಿ ರಸ್ತೆಯ ಫ್ಲೈ ಓವರ್ ಕೆಳಗೆ ಸುಸ್ತಾಗಿ ಬಿದ್ದಿದ್ದ ಮಹಿಳೆ ಮಗ್ಗಾನ್ ಆಸ್ಪತ್ರೆಯಲ್ಲಿ ಸಾವು

SHIVAMOGGA LIVE NEWS | 14 MARCH 2023

SHIMOGA : ನಗರದ ಹೊನ್ನಾಳಿ ರಸ್ತೆಯ ಫ್ಲೈ ಓವರ್ (Fly Over) ಕೆಳಗೆ ಸುಸ್ತಾಗಿ ಬಿದ್ದಿದ್ದ ಮಹಿಳೆ, ಮೆಗ್ಗಾನ್ ಆಸ್ಪತ್ರೆಯಲ್ಲಿಮೃತಪಟ್ಟಿದ್ದಾರೆ. ಆಕೆಗೆ 60 ರಿಂದ 65 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. (ಈ ಸುದ್ದಿಯನ್ನು ಇನ್ನು 45 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

Banashankari Enterprises

ಫ್ಲೈ ಓವರ್ ಕೆಳಗೆ ಸುಸ್ತಾಗಿ ಬಿದ್ದಿದ್ದ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಮಹಿಳೆಯು 4 ಅಡಿ 9 ಇಂಚು ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈ ಬಣ್ಣ, ಮೈ ಮೇಲೆ ಹಳದಿ ಬಣ್ಣದ ಬಟ್ಟೆ, ಗುಲಾಬಿ, ಹಸಿರು ಮಿಶ್ರಿತ ಬಣ್ಣದ ಬೆಡ್ ಶೀಟ್ ಧರಿಸಿದ್ದರು. ಮಹಿಳೆಯ ವಾರಸುದಾರರು ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು

Shimoga-Honnali-Bridge-near-Railway-Station

Leave a Comment