ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 29 APRIL 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಲಾಕ್ ಡೌನ್ ಮಾದರಿ ಕರ್ಫ್ಯೂ ಜಾರಿಯಲ್ಲಿರುವಾಗಲೇ ಖಾಸಗಿ ಬಸ್ ನಿಲ್ದಾಣದಲ್ಲಿ ಎರಡು ಅನಧಿಕೃತ ಮಳಿಗೆಗಳು ತಲೆ ಎತ್ತಿವೆ. ಇದನ್ನು ಪರಿಶೀಲಿಸಿದ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು ಕೂಡಲೆ ಅವುಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.
ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ 64 ಮಳಿಗೆಗಳಿವೆ. ರಾತ್ರೋರಾತ್ರಿ ಎರಡು ಅನಧಿಕೃತ ಮಳಿಗೆಗಳು ಆರಂಭಾಗಿದ್ದವು. ಈ ಹಿನ್ನೆಲೆ ಸ್ಥಳ ಪರಿಶೀಲಿಸಿದ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅನಿತಾ ರವಿಶಂಕರ್ ಮತ್ತು ಧೀರಾಜ್ ಹೊನ್ನವಿಲೆ ಅವರು, ಮಳೆಗೆಗಳನ್ನು ಕೂಡಲೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೋಲಿಂಗ್ ಶಟರ್ ಹಾಕಿದ್ದರು
ಖಾಸಗಿ ಬಸ್ ನಿಲ್ದಾಣದ ಪ್ರತಿ ಹತ್ತು ಮಳಿಗೆಗಳ ನಡುವೆ ಗಾಳಿ, ಬೆಳಕಿಗೆ ಅನುಕೂಲವಾಗಲಿ ಎಂದು ಖಾಲಿ ಜಾಗ ಬಿಡಲಾಗಿತ್ತು. ಹೀಗೆ ಖಾಲಿ ಇದ್ದ ಎರಡು ಕಡೆಯಲ್ಲಿ ರೋಲಿಂಗ್ ಶಟರ್ ಹಾಕಿ, ಅನಧಿಕೃತವಾಗಿ ಮಳಿಗೆ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಕುರಿತು ಮೇಯರ್ ಮತ್ತು ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಮಳಿಗೆ ತೆರವುಗೊಳಿಸಲು ಸೂಚಿಸಿದರು. ಕೆಲವೆ ನಿಮಿಷದಲ್ಲಿ ಮಳಿಗೆಗಳನ್ನು ತೆರವು ಮಾಡಲಾಯಿತು.
ಕಾನೂನು ಕ್ರಮದ ಎಚ್ಚರಿಕೆ
ಅನಧಿಕೃತವಾಗಿ ಮಳಿಗೆಳನ್ನು ನಿರ್ಮಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಸೂಚಿಸಿದ್ದಾರೆ. ಇದರ ವಿಡಿಯೋ ವರದಿ ಇಲ್ಲಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]