ಶಿವಮೊಗ್ಗ ಲೈವ್.ಕಾಂ | SHIMOGA | 15 ಮಾರ್ಚ್ 2020
ಶಿವಮೊಗ್ಗದಲ್ಲಿ ಸ್ಥಾಪಿಸಲಾಗಿರುವ ರಾಜ್ಯದ ಮೊದಲ ಸೈನಿಕ ಪಾರ್ಕ್ ದುಸ್ಥಿತಿ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಸೈನಿಕ ಪಾರ್ಕಿನ ನಿರ್ವಹಣೆಯನ್ನು ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಇದೇ ಯೋಜನೆಯಲ್ಲಿ ಅನುದಾನವನ್ನು ಬಿಡುಗಡೆ ಮಾಡಿ, ಪಾರ್ಕಿಗೆ ಹೊಸ ರೂಪ ಕೊಡಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎಂಬ ಶೀರ್ಷಿಕೆ ಅಡಿಯಲ್ಲಿ, ಫೆಬ್ರವರಿ 27ರಂದು ವರದಿ ಪ್ರಟಕವಾಗಿತ್ತು.
ಈಗ ಪಾರ್ಕ್’ನಲ್ಲಿ ಏನೇನೆಲ್ಲ ಅಭಿವೃದ್ಧಿ ಆಗುತ್ತಿದೆ?
ಸೈನಿಕ ಪಾರ್ಕ್’ಗೆ ನೀರು ಪೂರೈಕೆ ಸ್ಥಗಿತವಾಗಿತ್ತು. ಗಿಡಮರಗಳು, ಲಾನ್’ಗೆ ನೀರಿಲ್ಲದೆ ಒಣಗಿ ಹೋಗಿದ್ದವು. ಶಿವಮೊಗ್ಗ ಲೈವ್.ಕಾಂನಲ್ಲಿ ವರದಿಯಾಗುತ್ತಿದ್ದಂತೆ, ನೀರಿನ ಸಂಪರ್ಕ ಕೊಡಲಾಯಿತು. ಈಗ ಪ್ರತಿದಿನ ಗಿಡ, ಮರ, ಲಾನ್’ಗೆ ನೀರುಣಿಸಲಾಗುತ್ತಿದೆ.
ಇಲ್ಲಿದ್ದ ಅಲಂಕಾರಿಕ ಲೈಟ್’ಗಳು ಒಡೆದು ಹೋಗಿದ್ದವು. ಕೆಲವು ಧೂಳು ಹಿಡಿದು ಪಾರ್ಕ್’ನ ದುಸ್ಥಿತಿಗೆ ಸಾಕ್ಷಿಯಂತಾಗಿದ್ದವು. ವರದಿ ಪ್ರಕಟವಾಗುತ್ತಿದ್ದಂತೆ, ಲೈಟ್’ಗಳನ್ನೇ ಬದಲಾಯಿಸಲಾಗಿದೆ. ಹೊಸ ಬಗೆಯ ವಿದ್ಯುತ್ ಅಲಂಕಾರಿಕ ಲೈಟ್ ಕಂಬಗಳನ್ನು ಅಳವಡಿಸಿ ಪಾರ್ಕ್’ಗೆ ಹೊಸ ಲುಕ್ ನೀಡಲಾಗುತ್ತಿದೆ.
ಸದ್ಯ ಪಾರ್ಕ್’ಗೆ ಹೊಸ ಕಳೆ ಬಂದಿದೆ. ಸಾರ್ವಜನಿಕರು ಕೂಡ ಇಲ್ಲಿಗೆ ಬರಲು ಆರಂಭಿಸಿದ್ದಾರೆ. ಪಾರ್ಕ್ ಅಭಿವೃದ್ಧಿಯತ್ತ ಜಿಲ್ಲಾಡಳಿತ ಗಮನ ಹರಿಸಿ, ಸೈನಿಕರು ಹೆಮ್ಮೆ ಪಡುವಂತೆ ಮಾಡಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]