Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ಸ್ವಾತಂತ್ರ್ಯೋತ್ಸವ, ವಿವಿಧೆಡೆ ಡಿಫರೆಂಟ್‌ ಆಚರಣೆ, ಎಲ್ಲೆಲ್ಲಿ ಹೇಗಿತ್ತು ಸಂಭ್ರಮ?

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ಸ್ವಾತಂತ್ರ್ಯೋತ್ಸವ, ವಿವಿಧೆಡೆ ಡಿಫರೆಂಟ್‌ ಆಚರಣೆ, ಎಲ್ಲೆಲ್ಲಿ ಹೇಗಿತ್ತು ಸಂಭ್ರಮ?

15/08/2023 6:54 PM
ನಿತಿನ್‌ ಕೈದೊಟ್ಲು

SHIVAMOGGA LIVE NEWS | 15 AUGUST 2023

SHIMOGA : ಸೋಗಾನೆ ವಿಮಾನ ನಿಲ್ದಾಣದಲ್ಲಿ ಇದೆ ಮೊದಲ ಬಾರಿಗೆ FATAFAT NEWS 1 jpgಧ್ವಜಾರೋಹಣ ನೆರವೇರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆ (Independence Day) ಅಂಗವಾಗಿ ಇವತ್ತು ಬೆಳಗ್ಗೆ ವಿಮಾನ ನಿಲ್ದಾಣದ ಟರ್ಮಿನಲ್‌ ಮುಂಭಾಗ ತ್ರಿವರ್ಣ ಧ್ವಜ ಹಾರಿಸಲಾಯಿತು. ಎನ್‌ಸಿಸಿ ಕೆಡೆಟ್‌ಗಳು, ರಾಜ್ಯ ಕೈಗಾರಿಕ ಭದ್ರತಾ ಪಡೆ ಸಿಬ್ಬಂದಿ ಪಾಲ್ಗೊಂಡಿದ್ದರು. 20 ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇವತ್ತಿನ ಎಲ್ಲ NEWS
» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

shivamogga live news whatsappa number

independence day in Shimoga Airport

ಆಟೋ ಚಾಲಕರಿಂದ ಅದ್ಧೂರಿ ಆಚರಣೆ

SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮುಂಭಾಗ ಆಟೋ FATAFAT NEWS 2 jpgಚಾಲಕರು ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ (Independence Day) ಆಚರಿಸಿದರು. ಆಟೋಗೆ ಬೃಹತ್‌ ರಾಷ್ಟ್ರಧ್ವಜ ಕಟ್ಟಿ, ರಾಷ್ಟ್ರಭಕ್ತಿ ಗೀತೆಗಳನ್ನು ಹಾಕಿ ಸಿಹಿ ಹಂಚಿ, ಸ್ವಾತಂತ್ರ್ಯ ದಿನಾಚರಣೆ ಮಾಡಿದರು. ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಕುಮಾರ್‌ ಸೇರಿದಂತೆ ಸಿಬ್ಬಂದಿಗಳಿಗೆ ಸಿಹಿ ಹಂಚಿ ಆಟೋ ಚಾಲಕರು ಖುಷಿ ಪಟ್ಟರು.

independence day in Shimoga Auto Drivers at bus stand

ಪೊಲೀಸ್‌ ಕಚೇರಿಯಲ್ಲಿ ಧ್ವಜಾರೋಹಣ

SHIMOGA : ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ FATAFAT NEWS 3 jpgಮಿಥುನ್‌ ಕುಮಾರ್‌ ಅವರು ಧ್ವಜಾರೋಹಣ ಮಾಡಿದರು. ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ, ಹಿರಿಯ ಸಹಾಯಕ ಪೊಲೀಸ್‌ ಅಧೀಕ್ಷಕ ಜಿತೇಂದ್ರ ಕುಮಾರ್‌ ದಯಾಮ, ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಆರ್.ಬಿಂದುಮಣಿ, ಡಿವೈಎಸ್‌ಪಿಗಳಾದ ಬಾಲರಾಜ್‌, ಪ್ರಭು ಡಿ.ಟಿ, ಸುರೇಶ್.ಎಂ ಸೇರಿದಂತೆ ಹಲವು ಸಿಬ್ಬಂದಿ ಇದ್ದರು. ಇದೆ ವೇಳೆ ರಂಗೋಲಿ ಹಬ್ಬ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.

independence day in Shimoga Police office

ವಾರಸುದಾರರಿಗೆ ಮೊಬೈಲ್‌ ಹಸ್ತಾಂತರ

SHIMOGA : ಕಳ್ಳತನವಾಗಿದ್ದ ಮೊಬೈಲ್‌ ಫೋನ್‌ಗಳನ್ನು ಶಿವಮೊಗ್ಗ FATAFAT NEWS 4 jpgಸಿಇಎನ್‌ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಅವುಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು. 33 ಮೊಬೈಲ್‌ ಫೋನ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ನೇತೃತ್ವದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

Mobiles independence day in Shimoga

ಕುವೆಂಪು ವಿವಿಯಲ್ಲಿ ಧ್ವಜಾರೋಹಣ

SHANKARAGHATTA : ಕುವೆಂಪು ವಿಶ್ವವಿದ್ಯಾಲಯದ ಜ್ಞಾನಸಹ್ಯಾದ್ರಿ FATAFAT NEWS 5 jpgಆವರಣದಲ್ಲಿ ಇಂದು ಬೆಳಿಗ್ಗೆ 77ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ.‌ ನವೀನ್ ಕುಮಾರ್ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಹಣಕಾಸು ಅಧಿಕಾರಿ ಪ್ರೊ. ಎಸ್.‌ಕೆ.‌ ನರಸಿಂಹ ಮೂರ್ತಿ, ಡಾ.‌ ಎನ್. ಡಿ.‌ ವಿರೂಪಾಕ್ಷ, ಡಾ.‌ಗಜಾನನ ಪ್ರಭು, ಡಾ.‌ ರವೀಂದ್ರ ಗೌಡ, ವಿವಿಧ ವಿಭಾಗಗಳ‌ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Kuvempu University independence day in Shimoga

ಸ್ವಾತಂತ್ರ್ಯ ಸಂಭ್ರಮದ ವೇಳೆ ಜಾಗೃತಿ

SHIMOGA : ರೋಡ್‌ ಥ್ರಿಲ್ಸ್‌, ಸಮನ್ವಯ ಸಂಸ್ಥೆಯ ಸಹಯೋಗದಲ್ಲಿ FATAFAT NEWS 6 jpgವಿಭಿನ್ನವಾಗಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು. ವಡ್ಡಿನಕೊಪ್ಪ ಸರ್ಕಾರಿ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ, ನಗರದಾದ್ಯಂತ ಬೈಕ್‌ ಜಾಥಾ ನಡೆಸಲಾಯಿತು. ಸಂಚಾರ ನಿಯಮಗಳ ಪಾಲನೆ, ಕಡ್ಡಾಯ ಹೆಲ್ಮೆಟ್‌ ಧಾರಣೆ ಕುರಿತು ಪ್ರಮುಖ ಸರ್ಕಲ್‌ಗಳಲ್ಲಿ ಜಾಗೃತಿ ಮೂಡಿಸಲಾಯಿತು. ಡಿಎಆರ್‌ ಮೈದಾನದಲ್ಲಿ ಸಚಿವ ಮಧು ಬಂಗಾರಪ್ಪ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಅವರು ಜಾಥಾಗೆ ಚಾಲನೆ ನೀಡಿದರು. ಸಂಸ್ಥೆಯ ಅಭಿಷೇಕ್‌ ರಾವ್‌, ಎನ್‌.ಅಭಿಷೇಕ್‌, ಸಚಿನ್‌ ಶೆಟ್ಟಿ, ಆಕಾಶ್‌ ನಾರಾಯಣ್‌ ಸೇರಿದಂತೆ ಹಲವರು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.

Bikers awareness during independence day in Shimoga

ಪೊಲೀಸರು, ಸಾರ್ವಜನಿಕರಿಂದ ರಕ್ತದಾನ ಶಿಬಿರ

HOSANAGARA : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹೊಸನಗರ FATAFAT NEWS 7 jpgಠಾಣೆ ಪೊಲೀಸರು ಮತ್ತು ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. 79 ಮಂದಿ ರಕ್ತದಾನ ಮಾಡಿದರು. ಹೊಸನಗರ ಪೊಲೀಸ್‌ ಠಾಣೆ ನೇತೃತ್ವದಲ್ಲಿ ಪೊಲೀಸ್‌ ಇಲಾಖೆ, ಜೆಸಿಐ ಘಟಕ, ಮೆಗ್ಗಾನ್‌ ಆಸ್ಪತ್ರೆ ರಕ್ತನಿಧಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

Hosanagara Police blood donation independence day in Shimoga

ಸೈನಿಕ್‌ ಪಾರ್ಕ್‌ನಲ್ಲಿ ಧ್ವಜಾರೋಹಣ

SHIMOGA : ನಗರದ ಸೈನಿಕ ಪಾರ್ಕ್‌ನಲ್ಲಿ ಜಿಲ್ಲಾ ಮಾಜಿ ಸೈನಿಕರ FATAFAT NEWS 8 jpgಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಧ್ವಜಾರೋಹಣ ಮಾಡಲಾಯಿತು. ನಿವೃತ್ತ ಕರ್ನಲ್‌ ರಘುನಾಥ್‌, ಕರ್ನಲ್‌ ಆನಂದರಾವ್‌, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರಾದ ಡಾ. ಸಿ.ಎ ಹಿರೇಮಠ ಮಾತನಾಡಿದರು. ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಿ.ವಿ ಕೃಷ್ಣರೆಡ್ಡಿ, ಕಾರ್ಯದರ್ಶಿ ಉಮೇಶ್ ಬಾಪಟ್, ಪದಾಧಿಕಾರಿಗಳಾದ ರಘುನಾಥ್, ಎಸ್, ಕೆ.ಎಸ್, ಉದಯ, ವಿ. ಎನ್ ಮೂರ್ತಿ, ಅನಿಲ್ ಪಿ.ಜಿ, ಶ್ರೀನಾಥ್ ಜಿ.ಆರ್, ಉಮೇಶ ಜಿ, ರಾಜೇಶ್ ಭಟ್, ಜಗದೀಶ್ ಭಟ್, ಸಮೀವುಲ್ಲಾ, ಭಾನುಪ್ರಕಾಶ್, ದಿನೇಶ್, ಮಹೇಶ್ ಡಿ.ಕೆ ಹಾಗೂ ಸಂಘದ ಎಲ್ಲಾ ಮಾಜಿ ಸೈನಿಕರು ಮತ್ತು ಮಾಜಿ ಸೈನಿಕರ ಅವಲಂಬಿತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Fomer Armymen independence day in Shimoga

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಮಿನಿಸ್ಟರ್‌, ಇಲ್ಲಿದೆ 6 ಪ್ರಮುಖ ಪಾಯಿಂಟ್‌

ಹರಿಗೆಯಲ್ಲಿ ಅದ್ಭುತ ಮಹಿಳೆ ಕಾರ್ಯಕ್ರಮಕ್ಕೆ ಚಾಲನೆ

SHIMOGA : ಹರಿಗೆ ಶ್ರೀ ಕಾಲಭೈರವೇಶ್ವರ ವೃದ್ಧಾಶ್ರಮದ ಆವರಣದಲ್ಲಿ FATAFAT NEWS 9 jpgಮಹಿಳೆಯರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಉತ್ತರ ಬ್ಲಾಕ್‌ ಕಾಂಗ್ರೆಸ್‌ ಪಕ್ಷದ ವತಿಯಿಂದ ಅದ್ಭುತ ಮಹಿಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಿಳೆಯ ಸಬಲೀಕರಣಕ್ಕಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್ ನೇತೃತ್ವ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಪದಾಧಿಕಾರಿಗಳಾದ ಎಸ್.ಕುಮಾರೇಶ್, ಎಂ.ರಾಹುಲ್, ರಾಕೇಶ್, ಪವನ್, ಮೋಹನ್, ಸಂತೋಷ್ ಇನ್ಶಾಲ್ , ನರಸಿಂಹ, ಗೌತಮ್  ಹಾಗೂ ಯುವ ಕಾಂಗ್ರೆಸ್‌ನ ಕಾರ್ಯಕರ್ತರು ಉಪಸ್ಥಿತರಿದ್ದರು.

North Block Congress

ಇದನ್ನೂ ಓದಿ – ಶಿವಮೊಗ್ಗದಲ್ಲಿ ಪಥ ಸಂಚಲನಕ್ಕೆ ಮಹಿಳಾ ಐಪಿಎಸ್‌ ಅಧಿಕಾರಿ ನೇತೃತ್ವ, ಇದೇ ಮೊದಲು ಕನ್ನಡದಲ್ಲಿ ಆದೇಶ

ರೈಲ್ವೆ ನಿಲ್ದಾಣದ ಬಳಿ ಆಟೋಗೆ ವಿಭಿನ್ನ ಅಲಂಕಾರ

SHIMOGA : ರೈಲ್ವೆ ಸ್ಟೇಷನ್ ಆಟೋ ಚಾಲಕರ ಮತ್ತು ಮಾಲೀಕರ FATAFAT NEWS 10 jpgಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು. ಆಟೋಗೆ ವಿಭಿನ್ನವಾಗಿ ಅಲಂಕಾರ ಮಾಡಿ ಆಚರಣೆ ಮಾಡಲಾಯಿತು. ಪ್ರಮುಖರಾದ ಸಂತೋಷ ಎ.ಎನ್, ನಸೀರ್ ಅಹಮ್ಮದ್, ಮುಸ್ತು, ಜಾಬೀರ್, ಶಬೀರ್, ಅತ್ತು, ನಾಗರಾಜ, ದೀಪು  ಇದ್ದರು.

Shimoga Railway Station Auto Drivers Independence day.

PARISHRAMA neet academy

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article Swift-Car-near-Shimoga-Sahyadri-College-in-Mattur-Road ಸಹ್ಯಾದ್ರಿ ಕಾಲೇಜು ಬಳಿ ತಪ್ಪಿದ ಅನಾಹುತ, ಕಾರಿನಲ್ಲಿದ್ದವರು ತಕ್ಷಣ ಎಸ್ಕೇಪ್‌
Next Article 150823 Nandini Sihi Utsava By Shimul in Shimoga ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಲ್ಲಿ ನಂದಿನಿ ಸಿಹಿ ಉತ್ಸವ, ಇವತ್ತಿನಿಂದ ಶುರು, ಏನಿದು ಉತ್ಸವ?

ಇದನ್ನೂ ಓದಿ

BJP-City-president-Mohan-Reddy-press-meet.
SHIVAMOGGA CITY

ತುರ್ತು ಪರಿಸ್ಥಿತಿಗೆ 50 ವರ್ಷ, ಶಿವಮೊಗ್ಗದಲ್ಲಿ ಕರಾಳ ದಿನ, ಯಾವಾಗ? ಏನೆಲ್ಲ ಕಾರ್ಯಕ್ರಮ ಇರುತ್ತೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
power cut mescom ELECTRICITY
SHIVAMOGGA CITY

ಶಿವಮೊಗ್ಗ ಸಿಟಿಯ ಅರ್ಧಕ್ಕರ್ಧ ಭಾಗದಲ್ಲಿ ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
Traffic-Police-checks-School-vans-in-Shimoga-city
SHIVAMOGGA CITY

ಶಿವಮೊಗ್ಗ ಸಿಟಿಯಲ್ಲಿ ಶಾಲಾ ವಾಹನಗಳ ದಿಢೀರ್‌ ತಪಾಸಣೆ, ನಾಲ್ಕು ಡ್ರಂಕ್‌ ಅಂಡ್‌ ಡ್ರೈವ್‌ ಕೇಸ್‌ ಪತ್ತೆ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
Former-Minister-MP-Renukacharya-at-Shimoga-DAR-Police-ground
SHIVAMOGGA CITY

ಶಿವಮೊಗ್ಗದಲ್ಲಿ ದಾವಣಗೆರೆ ಸಿಟಿ ಬಂದ್‌ಗೆ ದಿನಾಂಕ ಘೋಷಿಸಿದ ಮಾಜಿ ಸಚಿವ ರೇಣುಕಾಚಾರ್ಯಾ, ಯಾವಾಗ? ಯಾಕೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
Beluru-Gopalakrishna-Speaks-to-media-about-BJP-Leaders
SHIVAMOGGA CITY

‘ಆಗ ಬೀದಿ ರಂಪಾಟ ಮಾಡಿದ್ದ ಬಿಜೆಪಿ ನಾಯಕರ ಬಾಯಿ ಈಗ ಒಣಗಿ ಹೋಗಿದೆಯೇ?ʼ, ಬೇಳೂರು ಗರಂ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
Beluru-Gopalakrishna-speaks-to-media-in-Shimoga
SHIVAMOGGA CITY

‘ಮಿನಿಸ್ಟರ್‌ ರಾಜೀನಾಮೆ ನೀಡಲಿ, ತನಿಖೆ ಎದುರಿಸಲಿʼ, ಬೇಳೂರು ಗೋಪಾಲಕೃಷ್ಣ ಸಲಹೆ, ಕಾಂಗ್ರೆಸ್‌ನಲ್ಲಿ ಸಂಚಲನ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
23/06/2025
Previous Next

ಶಿವಮೊಗ್ಗ ಲೈವ್ ಗ್ರೂಪ್ ಸೇರಲು ಕ್ಲಿಕ್ ಮಾಡಿ

🟢 shivamoggalive.com

whatsapp-logo
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?