ಶಿವಮೊಗ್ಗದಲ್ಲಿ ಶಂಕಿತರ ವಿಚಾರಣೆ ತೀವ್ರ, ಗುಪ್ತಚರ ಅಧಿಕಾರಿಗಳು ದೌಡು, ಹೈಟೆಕ್ ಕಂಪ್ಯೂಟರ್ ಆಗಮನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಐಸಿಸ್ ಜೊತೆ ನಂಟು ಹೊಂದಿರುವ ಶಂಕಿತ ಉಗ್ರರ ವಿಚಾರಣೆ ಬಿರುಸುಗೊಂಡಿದೆ. ರಾಜ್ಯ, ರಾಷ್ಟ್ರೀಯ ಮಟ್ಟದ ತನಿಖಾ (INTELLIGENCE) ಸಂಸ್ಥೆಗಳು ಶಿವಮೊಗ್ಗದತ್ತ ಕಣ್ಣು ನೆಟ್ಟಿವೆ. ಒಬ್ಬರಾದ ನಂತರ ಒಬ್ಬರು ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Shimoga Nanjappa Hospital

ಶಿವಮೊಗ್ಗದ ಸಯ್ಯದ್ ಯಾಸೀನ್ (21) ಮತ್ತು ಮಂಗಳೂರಿನ ಮಾಜ್ ಮನೀರ್ ಅಹಮದ್ (22) ಬಂಧಿತ ಶಂಕಿತ ಉಗ್ರರು. ಇವರ ವಿಚಾರಣೆ ತೀವ್ರಗೊಂಡಿದೆ. ತನಿಖಾ ಸಂಸ್ಥೆಗಳು ಇವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿವೆ.

ತನಿಖಾ ಸಂಸ್ಥೆಗಳು ದೌಡು

ಶಂಕಿತ ಉಗ್ರರನ್ನು ಶಿವಮೊಗ್ಗದ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೆ ಶಿವಮೊಗ್ಗ ಪೊಲೀಸರು ಶಂಕಿತರಿಂದ ಹೇಳಿಕೆ ಪಡೆದಿದ್ದಾರೆ. ಶಿವಮೊಗ್ಗ, ಮಂಗಳೂರು ಸೇರಿ 11 ಕಡೆ ಮಹಜರ್ ನಡೆಸಿದ್ದಾರೆ. ಲಭ್ಯವಾದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ವಿಚಾರಣೆ ತೀವ್ರಗೊಂಡಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಉಗ್ರ ಸಂಘಟನೆ ನಂಟು, ಸ್ಪೋಟಕ ಹೊಂದಿದ್ದರಾ ಶಂಕಿತರು? ರಾಷ್ಟ್ರಧ್ವಜವನ್ನು ಸುಟ್ಟಿದ್ದರಾ?

ಕೇಂದ್ರ ಮತ್ತು ರಾಜ್ಯದ ಗುಪ್ತಚರ (INTELLIGENCE) ಇಲಾಖೆ ಅಧಿಕಾರಿಗಳು ಯಾಸೀನ್ ಮತ್ತು ಮಾಜ್’ನ ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರಿಗು ಅಧಿಕಾರಿಗಳು ನಿರಂತರವಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಸ್ಪೋಟಕಗಳು, ಹಣಕಾಸು ನೆರವು, ಯಾರೆಲ್ಲ ಭಾಗಿಯಾಗಿದ್ದರು, ಯೋಜನಗಳೇನು ಎಂಬುದರ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಠಾಣೆಯೊಳಗೆ ಉಳಿದವರಿಗೆ ಪ್ರವೇಶವಿಲ್ಲ

ಶಂಕಿತ ಉಗ್ರರ ವಿಚಾರಣೆ ಹಿನ್ನೆಲೆ ಶಿವಮೊಗ್ಗ ಗ್ರಾಮಾಂತರ ಠಾಣೆಯೊಳಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ದೂರು ನೀಡಲು ಬರುವವರು, ವಿವಿಧ ಪ್ರಕರಣಗಳ ಕುರಿತು ಮಾಹಿತಿ ಕೇಳಿಕೊಂಡು ಬರುವವರನ್ನು ಠಾಣೆಯ ಹೊರಗೆ ನಿಲ್ಲಿಸಿ, ಪೊಲೀಸರು ಮಾಹಿತಿ ಪಡೆದು, ದೂರು ಸ್ವೀಕರಿಸಿ ಕಳುಹಿಸುತ್ತಿದ್ದಾರೆ. ಓರ್ವ ಪಿಎಸ್ಐ ಮತ್ತು ಸಿಬ್ಬಂದಿ ಠಾಣೆಯಿಂದ ಹೊರಗೆ ನಿಂತು ಜನರನ್ನು ಮಾತನಾಡಿಸಿ ಕಳುಹಿಸುತ್ತಿದ್ದಾರೆ.

ಮೊಬೈಲ್ ತಲಾಷ್ ಆರಂಭ

ಶಂಕಿತರು ಬಳಕೆ ಮಾಡುತ್ತಿದ್ದ ಮೊಬೈಲ್ ಫೋನುಗಳನ್ನು ಪೊಲೀಸರು ಈಗಾಗಲೆ ವಶಕ್ಕೆ ಪಡೆದಿದ್ದಾರೆ. ಅವುಗಳಲ್ಲಿರುವ ಮಾಹಿತಿ ಸಂಗ್ರಹ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ. ಸೈಬರ್ ಅಪರಾಧ ಠಾಣೆ ಪೊಲೀಸರ ನೆರವಿನೊಂದಿಗೆ ಅತ್ಯಾಧುನಿಕ ಕಂಪ್ಯೂಟರ್ ಮತ್ತು ಉಪಕರಣ ಬಳಕೆ ಮಾಡಿಕೊಂಡು ಮೊಬೈಲ್ ಡಾಟಾ ರಿಕವರಿ ಮಾಡಲಾಗುತ್ತಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಎನ್ಐಎ ದಾಳಿ, ಓರ್ವ ಮುಖಂಡ ವಶಕ್ಕೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 22, 2022

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಗದರ್ಶನ, ದೊಡ್ಡ ಸಂಖ್ಯೆಯ ಭಕ್ತರು ಭಾಗಿ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಟಾಟಾ ಏಸ್‌, ಆಟೋ ಡಿಕ್ಕಿ, ಮಗು ಸೇರಿ ಹಲವರಿಗೆ ಗಾಯ

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

ಮೀನು ಮಾರುಕಟ್ಟೆ ಬಳಿ ಕಿರಿಕ್‌, ಕಾರಿನ ಬೀಗದಿಂದ ವ್ಯಕ್ತಿಯ ಕಣ್ಣಿಗೆ ಹೊಡೆದು ಜೀವ ಬೆದರಿಕೆ, ಕಾರಣವೇನು?

ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

ಮಂಚಿಯ ಪುರಾಣ ಪ್ರಸಿದ್ಧ ಜಾತ್ರೆ, ಬುಡ ಸಹಿತ ಬಿಲ್ವಪತ್ರೆ ಮರ ಕಿತ್ತು ತಂದ ದಾಸರ ಕುಟುಂಬ

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ಅಡಿಕೆ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ತಂದೆ ಸಾವಿನಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ, ಕಾರಿನಲ್ಲಿ ಕರೆದೊಯ್ದು ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ಅಧಿಕಾರಿ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

ಮದುವೆ ಮುಗಿಸಿ ಭದ್ರಾವತಿಯ ನಾಗತಿಬೆಳಗಲು ತಾಂಡಾದ ಮನೆಗೆ ಮರಳಿದವರಿಗೆ ಕಾದಿತ್ತು ಆಘಾತ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ JDS ಕಾರ್ಯಕರ್ತರ ಸಭೆ, MLA ಮಹತ್ವದ ಸೂಚನೆ, ಏನದು?

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ JDS ಕಾರ್ಯಕರ್ತರ ಸಭೆ, MLA ಮಹತ್ವದ ಸೂಚನೆ, ಏನದು?

ATNC, ಕಮಲಾ ನೆಹರು ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಮನವಿ, ಏನಿದು?

ATNC, ಕಮಲಾ ನೆಹರು ಕಾಲೇಜು ವಿದ್ಯಾರ್ಥಿಗಳಿಂದ ವಿಭಿನ್ನ ಮನವಿ, ಏನಿದು?

Leave a Comment