ಭರ್ಚಿಯಿಂದ ಕುತ್ತಿಗೆಗೆ ಇರಿದಿದ್ದ ಮೂವರಿಗೆ ಕಠಿಣ ಜೈಲು ಶಿಕ್ಷೆ, ಎಷ್ಟು ವರ್ಷ ಜೈಲು? ದಂಡವೆಷ್ಟು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 7 ಜುಲೈ 2022

ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರಿಗೆ ಭರ್ಚಿಯಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಮೂವರಿಗೆ ನ್ಯಾಯಾಲಯ ಜೈಲು (JAIL) ಶಿಕ್ಷೆ ಪ್ರಕಟಿಸಿದೆ.

Shimoga Nanjappa Hospital

ಗೋಪಾಳ ನಿವಾಸಿ ರಿಚರ್ಡ್ ಸಂತೋಷ್ (32) ಎಂಬುವವರ ಕತ್ತಿಗೆ ಭರ್ಚಿಯಿಂದ ಇರಿಯಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆ ನಿತಿನ್ (22), ಶರಾವತಿ ನಗರದ ದೀಕ್ಷಿತ್ (21), ನವುಲೆಯ ಕಿರಣ್ (23) ಎಂಬುವವರಿಗೆ ಜೈಲು ಶಿಕ್ಷೆಯಾಗಿದೆ.

ಏನಿದು ಪ್ರಕರಣ?

ರಿಚರ್ಡ್ ಸಂತೋಷ್ ಅವರು ಗೋಪಾಳದ ವನಸಿರಿ ಪಾರ್ಕ್ ಬಳಿ ತೆರಳುತ್ತಿದ್ದಾಗ ಘಟನೆ ಸಂಭವಿಸಿತ್ತು. ಡಿಯೋ ಬೈಕಿನಲ್ಲಿ ಬಂದ ನಿತಿನ್, ದೀಕ್ಷಿತ್, ಕಿರಣ್ ಭರ್ಚಿಯಿಂದ ಹಲ್ಲೆ ನಡೆಸಿದ್ದರು. ರಿಚರ್ಡ್ ಸಂತೋಷ್ ಅವರ ಕುತ್ತಿಗೆಗೆ ಗಂಭೀರವಾಗಿ ಹಲ್ಲೆ ನಡೆಸಲಾಗಿತ್ತು. 2018ರ ಆಗಸ್ಟ್ 12ರಂದು ಘಟನೆ ಸಂಭವಿಸಿತ್ತು.

ಜೈಲು ಶಿಕ್ಷೆ ಪ್ರಕಟ

ತನಿಖಾಧಿಕಾರಿಯಾಗಿದ್ದ ತುಂಗಾ ನಗರ ಠಾಣೆ ಪಿಎಸ್ಐ ಅಣ್ಣಯ್ಯ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಅವರು, ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಮೂವರಿಗೂ ಮೂರು ವರ್ಷ ಕಠಿಣ ಜೈಲು (JAIL) ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಲಾಗಿದೆ.

ದಂಡ ಕಟ್ಟಲು ವಿಫಲವಾದರೆ ಎರಡು ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಸರ್ಕಾರಿ ಅಭಿಯೋಜಕರಾಗಿ ರತ್ನಮ್ಮ ಅವರು ವಾದ ಮಂಡಿಸಿದ್ದರು.

ಇದನ್ನೂ ಓದಿ – ನಡುರಸ್ತೆಯಲ್ಲಿ ಏರು ಧ್ವನಿಯಲ್ಲಿ ಮಾತಾಡುತ್ತಿದ್ದವನಿಗೆ ವೈದ್ಯಕೀಯ ಪರೀಕ್ಷೆ, ಕೂಡಲೆ ಅರೆಸ್ಟ್

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment