ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 AUGUST 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮರದಿಂದ ಕೆಳಗೆ ಬಿದ್ದು ಬೆನ್ನು ಮುರಿದುಕೊಂಡ ಕೂಲಿ ಕಾರ್ಮಿಕ
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
SHIMOGA : ಮನೆಯೊಂದರ ಮುಂದೆ ಮಾವಿನ ಮರದ ರೆಂಬೆ ಕತ್ತರಿಸುವಾಗ ಆಯಾ ತಪ್ಪಿ ಕೆಳಗೆ ಬಿದ್ದು ಕೂಲಿ ಕಾರ್ಮಿಕನ (Wage labour) ಬೆನ್ನು ಮೂಳೆ ಮರಿದಿದೆ. ಈ ಹಿನ್ನೆಲೆ ಮನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಗೋಪಾಳದಲ್ಲಿ ಘಟನೆ ಸಂಭವಿಸಿದೆ. ಜಾಫರ್ (38) ಬೆನ್ನು ಮೂಳೆ ಮರುದಿದ್ದು ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಜು.30ರಂದು ಗೋಪಾಳದ ಮನೆಯೊಂದರ ಮುಂದೆ ಘಟನೆ ಸಂಭವಿಸಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದ ಹಿನ್ನೆಲೆ ಮನೆ ಮಾಲೀಕನ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಂಟ್ರಲ್ ಜೈಲಿನಲ್ಲಿ ಕೈ ಕೈ ಮಿಲಾಯಿಸಿದ ಕೈದಿಗಳು
SHIMOGA : ಕ್ಷುಲಕ ವಿಚಾರಕ್ಕೆ ಜೈಲಿನಲ್ಲಿ (Jail) ಕೈದಿಗಳು ಬಡಿದಾಡಿಕೊಂಡಿದ್ದು, ಕಲ್ಲಿನಿಂದ ಹೊಡೆದುಕೊಂಡಿದ್ದಾರೆ. ಮೂವರ ವಿರುದ್ಧ ಜೈಲು ಸೂಪರಿಂಟೆಂಡೆಂಟ್ ಡಾ. ಅನಿತಾ ಅವರು ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ಆ.14ರಂದು ಸಂಜೆ 6.30ರ ಹೊತ್ತಿಗೆ ಜೈಲಿನ ಭದ್ರಾ ಬ್ಲಾಕ್‌ನ ಮುಂಭಾಗ ವಿಚಾರಣಾಧೀನ ಕೈದಿಗಳಾದ ಲತೀಫ್ (20), ಶೋಹೇಬ್ ಅಲಿಯಾಸ್ ಸುಹೇಲ್ (21), ಶಮ್‌ಶೀರ್ ಅಲಿಯಾಸ್ ಗೌಸ್ ಖಾನ್ (27) ಬಡಿದಾಡಿಕೊಂಡಿದ್ದಾರೆ. ಜೈಲು ನಿಯಮಗಳನ್ನು ಉಲ್ಲಂಘಿಸಿ ಶಾಂತಿ ಸುವ್ಯವಸ್ಥೆ ಹದಗೆಡಿಸಿದಾರೆ ಎಂದು ಆರೋಪಿಸಿ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ-ಗೃಹ ಜ್ಯೋತಿ ಉಚಿತ ವಿದ್ಯುತ್ ನಿರೀಕ್ಷೆಯಲ್ಲಿದ್ದ ಗ್ರಾಹಕನಿಗೆ ಮೆಸ್ಕಾಂನಿಂದ ಶಾಕ್
ಡಿಸಿಸಿ ಬ್ಯಾಂಕ್ ನೇಮಕಾತಿ ತನಿಖೆಗೆ ಮಧು ಪತ್ರ
SHIMOGA : ಡಿಸಿಸಿ ಬ್ಯಾಂಕ್ (DCC bank) ನೇಮಕಾತಿ ಪರೀಕ್ಷೆ ಮತ್ತು ಮೌಲ್ಯಮಾಪನ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅನೇಕ ಅಭ್ಯರ್ಥಿಗಳು ತಮಗೆ ಅನ್ಯಾಯವಾಗಿದೆ ಎಂದು ಗೋಳು ತೋಡಿಕೊಂಡಿದ್ದರು. ಅವರಿಗೆ ನ್ಯಾಯ ಒದಗಿಸಲು ಸೂಕ್ತ ತನಿಖೆ ಅವಶ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.