BREAKING NEWS – ಶಿವಮೊಗ್ಗದಲ್ಲಿ ಮರಿ ಹಾಕಿತು ಜಂಬೂ ಸವಾರಿಗೆ ಬಂದಿದ್ದ ಆನೆ..!

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 24 OCTOBER 2023

SHIMOGA : ದಸರಾ ಜಂಬೂ ಸವಾರಿಗೆ (Jamboo Savari) ಆಗಮಿಸಿದ್ದ ಸಕ್ರೆಬೈಲಿನ ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಕಳೆದ ರಾತ್ರಿ ವಾಸವಿ ಶಾಲೆ ಆವರಣದಲ್ಲಿ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಆನೆ ಮತ್ತು ಮರಿ ಆರೋಗ್ಯವಾಗಿವೆ.

ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಸಕ್ರೆಬೈಲಿನ ಮೂರು ಆನೆಗಳನ್ನು ಕರೆತರಲಾಗಿತ್ತು. ವಾಸವಿ ಶಾಲೆ ಆವರಣದಲ್ಲಿ ಆನೆಗಳು ತಂಗಿದ್ದವು. ರಾತ್ರಿ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ವಿಷಯ ತಿಳಿಯುತ್ತಿದ್ದಂತೆ ವೈದ್ಯರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಯಾರೆಲ್ಲ ಏನೇನು ಹೇಳಿದರು?

ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ನವರಾತ್ರಿ ಸಂದರ್ಭ ಹೆಣ್ಣು ಮರಿಗೆ ಜನ್ಮ ನೀಡಿರುವು ಖುಷಿಯ ವಿಚಾರ. ಈ ಆನೆಯನ್ನು ಮೆರವಣಿಗೆಗೆ ಕರೆದೊಯ್ಯಲು ಸಾಧ್ಯವಿಲ್ಲ. ಇನ್ನೊ೦ದು ಹೆಣ್ಣಾನೆ ಕೂಡ ಜೊತೆಗಿರಲಿದೆ. ಅದನ್ನು ಬೇರ್ಪಡಿಸುವುದು ಕಷ್ಟ. ಆನೆಗಳನ್ನು ಕ್ಯಾಂಪ್‌ಗೆ ವಾಪಸ್‌ ಕರೆದೊಯ್ಯಲಿದ್ದೇವೆ.ಪ್ರಸನ್ನ ಕೃಷ್ಣ ಪಟಗಾರ್, ವನ್ಯಜೀವಿ ವಿಭಾಗದ ಡಿಸಿಎಫ್
  ರಾತ್ರಿ 10 ಗಂಟೆಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಯ ಪರೀಕ್ಷೆ ಮಾಡಿದ್ದೇವೆ. 15 ನಿಮಿಷದಲ್ಲಿ ಮರಿ ಆನೆ ಎದ್ದು ನಿಂತಿದೆ. 70-80 ಕೆ.ಜಿ ಇದೆ. ಬಳಿಕ 30 ನಿಮಿಷ ಚಲನವಲನ ಗಮನಿಸಿದೆವು. ಯಾವುದೇ ಆನೆ ಮರಿ ಹಾಕಿದಾಗ ಮತ್ತೊಂದು ಹೆಣ್ಣಾನೆ ಜೊತೆಗಿರಬೇಕು. ಹೇಮಾವತಿ ಆನೆ ಕೂಡ ಕರೆತಂದಿದ್ದೇವೆ. ಅದು ಕೂಡ ಈಗ ಜೊತೆಯಲ್ಲಿದೆ. ಈಗ ಮರಿ ಹಾಲು ಕುಡಿಯುತ್ತಿದೆ. ಡಾ.ವಿನಯ್‌, ವನ್ಯಜೀವಿ ವಿಭಾಗದ ವೈದ್ಯ

ಪ್ರೆಗ್ನೆನ್ಸಿ ಟೆಸ್ಟ್‌ನಲ್ಲಿ ಗೊತ್ತಾಗಿರಲಿಲ್ಲ

ನೇತ್ರಾವತಿ ಆನೆ ಗರ್ಭವತಿ ಅನ್ನುವುದು ಸಕ್ರೆಬೈಲು ಬಿಡಾರದ ಸಿಬ್ಬಂದಿ, ವೈದ್ಯರಿಗೆ ಗೊತ್ತಿರಲಿಲ್ಲ. ಮೈಸೂರು ದಸರಾ ಜಂಬೂ ಸವಾರಿಗೆ (Jamboo Savari) ಆನೆಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಈ ಸಂದರ್ಭ ನೇತ್ರಾವತಿ ಆನೆಯ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿಸಲಾಗಿತ್ತು. ಆಗ ನೇತ್ರಾವತಿ ಗರ್ಭವತಿ ಅನ್ನವುದು ಗೊತ್ತಾಗಿರಲಿಲ್ಲ. ಶಿವಮೊಗ್ಗ ದಸರಾ ಹಿನ್ನೆಲೆ ನೇತ್ರಾವತಿಯನ್ನು ಮೈಸೂರಿಗೆ ಕಳುಹಿಸಿರಲಿಲ್ಲ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಟ್ರಾಫಿಕ್‌ ರೂಲ್ಸ್‌ ಪಾಲಿಸಿದ ದಸರಾ ಆನೆಗಳು, ಫೋಟೊ ವೈರಲ್, ಆಗಿದ್ದೇನು?

ಶಿವಮೊಗ್ಗಕ್ಕೆ ನೇತ್ರಾವತಿಯನ್ನು ಕರೆತರಲಾಗಿತ್ತು. ಇಲ್ಲಿ ಜಂಬೂ ಸವಾರಿಯ ತಾಲೀಮು ನಡೆಸಲಾಗಿತ್ತು. ಸೋಮವಾರ ಸಂಜೆ ಅಂತಿಮ ಹಂತದ ತಾಲೀಮು ಕೂಡ ನಡೆಸಲಾಗಿತ್ತು. ತಾಲೀಮು ಮುಗಿಸಿ ವಾಸವಿ ಶಾಲೆ ಆವರಣಕ್ಕೆ ತೆರಳಿದ ಬಳಿಕ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment