ಶಿವಮೊಗ್ಗ LIVE
ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಪ್ರಕಟಿಸಲಾಗಿದ್ದ ಆಂಗ್ಲ ಭಾಷೆಯ (English ads) ಜಾಹೀರಾತುಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಿಂಹಸೇನೆ ಸಂಘಟನೆ ಕಾರ್ಯಕರ್ತರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಗುಟ್ಕಾ ಜಾಹೀರಾತುಗಳಿಗೆ ಪೋಸ್ ನೀಡಿದ್ದ ಬಾಲಿವುಡ್ ನಟರ ಫೋಟೊಗಳಿಗೆ ಚಪ್ಪಲಿ ಏಟು ನೀಡಿದರು.
ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ಗಳ ಮೇಲಿದ್ದ ಅನ್ಯಭಾಷೆ ಮತ್ತು ಗುಟ್ಕಾ ಜಾಹೀರಾತುಗಳಿಗೆ ಕರವೇ ಸಿಂಹಸೇನೆ ಕಾರ್ಯಕರ್ತರು ಮಸಿ ಬಳಿದು, ಪ್ರತಿಭಟನೆ ನಡೆಸಿದರು.

ಕರ್ನಾಟಕ ಸರ್ಕಾರ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಮತ್ತು ಶೇ.40ರಷ್ಟು ಅನ್ಯ ಭಾಷೆಯ ನಿಯಮ ಪಾಲಿಸುವಂತೆ ಆದೇಶಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಈ ನಿಯಮ ಉಲ್ಲಂಘಿಸಿವೆ. ಬಸ್ಸುಗಳ ಮೇಲೆ ಕನ್ನಡೇತರ ಭಾಷೆಗಳ ಜಾಹೀರಾತುಗಳನ್ನು ಅಧಿಕವಾಗಿ ಪ್ರಕಟಿಸಲಾಗಿದೆ. ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳ ಜಾಹೀರಾತುಗಳನ್ನು ಪ್ರಕಟಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ » ತಾಳಗುಪ್ಪ – ಬೆಂಗಳೂರು ರೈಲು ಅರಸೀಕೆರೆವರೆಗೆ ಮಾತ್ರ, ಯಶವಂತಪುರ ಎಕ್ಸ್‌ಪ್ರೆಸ್‌ಗೆ ಬದಲಿ ಮಾರ್ಗ
ನಿಯಮ ಉಲ್ಲಂಘಿಸಿರುವ ಮತ್ತು ಆರೋಗ್ಯಕ್ಕೆ ಹಾನಿಕಾರಕ ಎನಿಸುವ ಜಾಹೀರಾತುಗಳನ್ನು ಕೂಡಲೆ ತೆರವು ಮಾಡಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದರು.
LATEST NEWS
- ಮಾಚೇನಹಳ್ಳಿ ಸುತ್ತಮುತ್ತ ಜನವರಿ 17ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಲಿಸ್ಟ್

- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು





