ಕರ್ನಾಟಕ ಸಂಘದಿಂದ ಪುಸ್ತಕಗಳಿಗೆ ಬಹುಮಾನ, ಕೃತಿಗಳಿಗೆ ಆಹ್ವಾನ, ಇಲ್ಲಿದೆ ಕಂಪ್ಲೀಟ್‌ ವಿವರ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಕರ್ನಾಟಕ ಸಂಘವು ಪ್ರತಿ ವರ್ಷದಂತೆ 2025ನೆಯ ಸಾಲಿನಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನ ನೀಡಲು ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ. ಆಯ್ದ ಅತ್ಯುತ್ತಮ ಕೃತಿಗಳಿಗೆ ₹10,000 ನಗದು ಬಹುಮಾನ ಮತ್ತು ಫಲಕವನ್ನು (Awards) ನೀಡಿ ಗೌರವಿಸಲಾಗುವುದು.

ನಿಯಮಗಳು ಏನು?

2025ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡ ಕನ್ನಡ ಪುಸ್ತಕಗಳಿಗೆ ಮಾತ್ರ ಬಹುಮಾನ. ಮರುಮುದ್ರಣ, ಹಸ್ತಪ್ರತಿ, ಸಂಪಾದಿತ ಕೃತಿಗಳು ಅಥವಾ ಒಬ್ಬರಿಗಿಂತ ಹೆಚ್ಚು ಲೇಖಕರಿರುವ ಪುಸ್ತಕಗಳಿಗೆ ಅವಕಾಶವಿಲ್ಲ. ಒಂದು ಪ್ರಕಾರಕ್ಕೆ ಕನಿಷ್ಠ 5 ಕೃತಿಗಳು ಬರದಿದ್ದರೆ ಆ ವಿಭಾಗವನ್ನು ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.

ಇದನ್ನೂ ಓದಿ – KFD ಸೋಂಕಿಗೆ ಮೊದಲ ಬಲಿ, ತೀರ್ಥಹಳ್ಳಿಯ ಯುವಕ ಮಣಿಪಾಲದಲ್ಲಿ ಸಾವು

ಕರ್ನಾಟಕ ಸಂಘದ ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಈ ಹಿಂದೆ ಸಂಘದ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಮತ್ತೊಮ್ಮೆ ಸ್ಪರ್ಧಿಸುವಂತಿಲ್ಲ.

Total-Readers-of-Shivamogga-Live

ಏನೆಲ್ಲ ವಿವರ ಸಲ್ಲಿಸಬೇಕು?

ಪ್ರತಿ ಪ್ರಕಾರದ ಪುಸ್ತಕದ 4 ಪ್ರತಿಗಳನ್ನು ಸಲ್ಲಿಸಬೇಕು. ಲೇಖಕರು ಅಥವಾ ಪ್ರಕಾಶಕರು ತಮ್ಮ ಸ್ವವಿವರ, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಕೃತಿಯ ಪ್ರಕಾರದ ಬಗ್ಗೆ ಲಿಖಿತ ಮಾಹಿತಿಯನ್ನು ಲಗತ್ತಿಸಬೇಕು. ಅಂಕಣ ಬರಹಗಳಾಗಿದ್ದಲ್ಲಿ, ಅವು ಪತ್ರಿಕೆಯಲ್ಲಿ ಪ್ರಕಟವಾಗಿರುವ ಬಗ್ಗೆ ದಾಖಲೆ ನೀಡುವುದು ಕಡ್ಡಾಯ.

ಪ್ರಮುಖ ದಿನಾಂಕ ಮತ್ತು ವಿಳಾಸ

ಪುಸ್ತಕಗಳನ್ನು ಕಳುಹಿಸಲು ಮಾರ್ಚ್‌ 31ರಂದು ಕೊನೆಯ ದಿನಾಂಕ. ಕಾರ್ಯದರ್ಶಿಗಳು, ಕರ್ನಾಟಕ ಸಂಘ, ಬಿ.ಹೆಚ್. ರಸ್ತೆ, ಶಿವಮೊಗ್ಗ-577201 ಇಲ್ಲಿ ಪುಸ್ತಕಗಳನ್ನು ಕಳುಹಿಸಬೇಕು. ಹೆಚ್ಚಿನ ವಿವರಗಳಿಗಾಗಿ ಸಂಘದ ಕಚೇರಿ ಅಥವಾ ಮೊಬೈಲ್ ಸಂಖ್ಯೆ 9980159696 / 8310876277 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್‌ ಶಿವಮೊಗ್ಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shimoga-karnataka-Sangha-gets-Rajyotsava-Award.webp

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 28, 2026

ಉಷಾ ನರ್ಸಿಂಗ್‌ ಹೋಂ ಬಳಿ ಅಂಬ್ಯುಲೆನ್ಸ್‌ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

ಉಷಾ ನರ್ಸಿಂಗ್‌ ಹೋಂ ಬಳಿ ಅಂಬ್ಯುಲೆನ್ಸ್‌ ಡಿಕ್ಕಿ, ಕಾರು ಪಲ್ಟಿ, ಹೇಗಾಯ್ತು ಘಟನೆ?

ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

ಗಾಜನೂರಿನಲ್ಲಿ ಭೀಕರ ಅಪಘಾತ, ಆಟೋ ನಜ್ಜುಗುಜ್ಜು, ಶಿವಮೊಗ್ಗದ ಯುವಕ ಸಾವು, ಆಗಿದ್ದೇನು?

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್‌ ಹಾರಾಟ, ಕಾರಣವೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್‌, ಕಾರಣವೇನು?

ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್‌, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇಲ್ಲಿದೆ ಡಿಟೇಲ್ಸ್‌

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 18 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? – 18 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

ಶಿವಮೊಗ್ಗ ಸಿಟಿಯಲ್ಲಿ ಆಲಿಕಲ್ಲು ಸಹಿತ ಮಳೆ, ಜೋರು ಗಾಳಿ, ಗುಡುಗಿನ ಅಬ್ಬರ

Leave a Comment