ಸಿಹಿ ತಿನಿಸು ಪ್ರಿಯರಿಗೆ ಗುಡ್‌ ನ್ಯೂಸ್‌, ಶಿವಮೊಗ್ಗದಲ್ಲಿ ಕಾಂತಿ ಸ್ವೀಟ್ಸ್‌ ಶಾಖೆ, ಭರ್ಜರಿ ಡಿಸ್ಕೌಂಟ್‌

ಶಿವಮೊಗ್ಗ: ಪ್ರಸಿದ್ಧ ಸಿಹಿ ತಿಂಡಿ ತಯಾರಿಕಾ ಸಂಸ್ಥೆ ಕಾಂತಿ ಸ್ವೀಟ್ಸ್‌ ಶಿವಮೊಗ್ಗದಲ್ಲಿಯು ತನ್ನ ಶಾಖೆ ಆರಂಭಿಸಿದೆ. ಮಲೆನಾಡಿನ ಗ್ರಾಹಕರಿಗೆ ಆರಂಭಿಕ ಕೊಡುಗೆಯಾಗಿ ಎಲ್ಲಾ ಖರೀದಿಗಳ ಮೇಲೆ ಶೇ.15 ರಷ್ಟು ರಿಯಾಯಿತಿ ಘೋಷಿಸಿದೆ. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ದುರ್ಗಿಗುಡಿಯ ಜ್ಯುವೆಲ್ ರಾಕ್ ಹೋಟೆಲ್ ಎದುರಿನ M3 ಸ್ಕ್ವೇರ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಕಾಂತಿ ಸ್ವೀಟ್ಸ್‌ ಮಳಿಗೆ ಆರಂಭವಾಗಿದೆ. ಅಕ್ಟೋಬರ್ 5, 6 ಮತ್ತು 7ರವರೆಗೆ ಎಲ್ಲಾ ಉತ್ಪನ್ನಗಳ ಮೇಲೆ ಶೇ.15 ರಿಯಾಯಿತಿ ಕಲ್ಪಿಸಲಾಗಿದೆ. ಕಾಂತಿ ಸ್ವೀಟ್ಸ್ ಸಂಸ್ಥೆಯು 1957ರಿಂದ ಸಿಹಿ ತಿನಿಸುಗಳ ಮಾರಾಟಕ್ಕೆ ಹೆಸರಾಗಿದೆ.

Kanti-Sweets-in-Shivamogga

ಹಾಲು, ತುಪ್ಪ, ಡ್ರೈ ಫ್ರೂಟ್ಸ್‌ಗಳಿಂದ ತಯಾರಿಸಿದ ವಿವಿಧ ಸಿಹಿ ತಿಂಡಿಗಳು, ಸಕ್ಕರೆ ರಹಿತ ಸಿಹಿ ತಿನಿಸು, ಬೆಂಗಾಲಿ ತಿನಿಸುಗಳು, ವೆರೈಟಿ ಲಡ್ಡು, ಪೇಟಾ ಸಿಹಿ, ವಿವಿಧ ಬಗೆಯ ನಮ್ಕೀನ್‌, ಬಿಸ್ಕೇಟ್‌, ಚಾಕ್ಲೇಟ್‌ಗಳು, ಸಿಹಿ ತಿನಿಸುಗಳ ಗಿಫ್ಟ್‌ ಬಾಕ್ಸ್‌ಗಳಿಗೆ ಕಾಂತಿ ಸ್ವೀಟ್ಸ್‌ ಪ್ರಖ್ಯಾತಿ. ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಹಾಸನ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ನಗರಗಳಲ್ಲಿ ಮಳಿಗೆಗಳನ್ನು ಹೊಂದಿದೆ. ಈಗ ಶಿವಮೊಗ್ಗ ನಗರದಲ್ಲಿ ಶಾಖೆ ಆರಂಭಿಸಿದೆ.