ಶಿವಮೊಗ್ಗ ಲೈವ್.ಕಾಂ | SHIMOGA NEWS | 25 MAY 2021
ಕರೋನ ನಿಯಂತ್ರಿಸಲು ಸ್ಥಳೀಯರೆ ತಮ್ಮ ಏರಿಯಾವನ್ನು ಲಾಕ್ ಡೌನ್ ಮಾಡಿದ್ದಾರೆ. ಸೋಂಕು ಹರಡುವುದನ್ನು ತಡೆಯಲು ಈ ಕ್ರಮ ಕೈಗೊಂಡಿದ್ದಾರೆ.
ಶಿವಮೊಗ್ಗದ ಕಾಶಿಪುರ ಬಡಾವಣೆಯಲ್ಲಿ ಸ್ಥಳೀಯರೆ ತಮ್ಮ ಏರಿಯಾವನ್ನು ಲಾಕ್ ಡೌನ್ ಮಾಡಿದ್ದಾರೆ. ರಸ್ತೆಗೆ ಅಡ್ಡಲಾಗಿ ಬೊಂಬುಗಳನ್ನು ಕಟ್ಟಿ, ವಾಹನ ಮತ್ತು ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕಾಶಿಪುರದಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಇಲ್ಲಿ ಸುತ್ತಮುತ್ತಲು ಸುಮಾರು 200 ಮಂದಿಗೆ ಪಾಸಿಟಿವ್ ಬಂದಿದೆ. ಏಳು ಮಂದಿಗೆ ಕೋವಿಡ್‍ಗೆ ಬಲಿಯಾಗಿದ್ದಾರೆ. ಇದೆ ಕಾರಣಕ್ಕೆ ಸ್ಥಳೀಯರು ತಮ್ಮ ಸುರಕ್ಷತೆಗಾಗಿ ವಿಭಿನ್ನ ಪ್ರಯತ್ನ ಮಾಡಿದ್ದಾರೆ.
ರೋಡ್ ಬಂದ್, ಅನಗತ್ಯ ಸಂಚಾರ ಬ್ರೇಕ್
ಕಾಶಿಪುರ ಬಡಾವಣೆಯ ಅಂತರಘಟ್ಟಮ್ಮ ದೇವಸ್ಥಾನದ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಹೊರಗಿನವರು ಅನಗತ್ಯವಾಗಿ ಏರಿಯಾದೊಳಗೆ ಪ್ರವೇಶಿಸಬಾರದು ಮತ್ತು ಸ್ಥಳೀಯರು ಅನಗತ್ಯವಾಗಿ ರಸ್ತೆಗಿಳಿಯಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸೋಂಕು ಹರಡುವುದನ್ನು ತಡೆಗಟ್ಟಲು ಸ್ಥಳೀಯರೆ ಈ ನಿರ್ಧಾರ ಕೈಗೊಂಡಿದ್ದಾರೆ. ಇದು ಉಳಿದವರಿಗೆ ಮಾದರಿ ಕಾರ್ಯವಾಗಿದೆ.
ಜನ ಜಂಗುಳಿ ಇಲ್ಲದೆ, ಸುರಕ್ಷಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ | ಫೋನ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]