ಶಿವಮೊಗ್ಗದಲ್ಲಿ ಕಿಯಾ ಸಂಸ್ಥೆಯ ಜಾಗತಿಕ ಮಾಡೆಲ್‌ ಸೊರೆಂಟೊ ಪ್ರಿ ಲಾಂಚ್‌, ಯಾವಾಗ?

ಶಿವಮೊಗ್ಗ: ಸೆಪ್ಟೆಂಬರ್‌ 8ರ ಸಂಜೆ 6 ಗಂಟೆಗೆ ಜಾನ್ಸಿ ಕಿಯಾ ಶೋರೂಮ್‌ನಲ್ಲಿ ಕಿಯಾ ಸೊರೆಂಟೊ ಎಸ್‌ಯುವಿ ಕಾರು ಪ್ರಿ ಲಾಂಚ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಯಮಿ ಕಿಮ್ಮನೆ ಜಯರಾಂ ಮತ್ತು ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾನ್ಸಿ ಕಿಯಾ ಶೋರೂಮ್‌ ಸಿಎಕ್ಸ್‌ ಮ್ಯಾನೇಜರ್‌ ಎಸ್‌.ಕೆ.ದೀಪಕ್‌, ಕಿಯಾ ಸೊರೆಂಟೊ ಜಾಗತಿಕ ಮಾಡಲ್‌ ಆಗಿದೆ. ಏಳು ಸೀಟರ್ ಸಾಮರ್ಥ್ಯ ಹೊಂದಿದೆ. ಈ ಹೈಬ್ರಿಡ್ ವಾಹನವು ಆಟೋಮ್ಯಾಟಿಕ್ ಆಗಿ ಚಾರ್ಜ್ ಆಗುವ ತಂತ್ರಜ್ಞಾನ ಹೊಂದಿದೆ ಎಂದರು.

Jhasi-Kia-Showroom-CEO-holds-press-meet-about-pre-launch-of-Sorento-SUV

ಜಾನ್ಸಿ ಕಿಯಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಭಾಷ್‌ ಬಿ.ಆರ್‌ ನೇತೃತ್ವದಲ್ಲಿ ಕಳೆದ ಐದು ವರ್ಷದಿಂದ ಸಂಸ್ಥೆಯು ಉತ್ತಮ ಸೇವೆ ಒದಗಿಸುತ್ತಿದೆ. ಸೆ.8ರಂದು ನಡೆಯುವ ಕಾರ್ಯಕ್ರಮಕ್ಕೆ ಕಿಯಾ ಇಂಡಿಯಾದ ಎಎಸ್‌ಎಂ ಸಂತೋಷ್‌ ಕುಮಾರ್.ಬಿ, ಎಎಫ್‌ಎಸ್‌ಎಂ ಗೌರವ್‌ ಅವರು ಭಾಗವಹಿಸಲಿದ್ದಾರೆ ಎಂದರು.

ಆಲ್-ನ್ಯೂ ಕಿಯಾ ಸೊರೆಂಟೊ ಎಸ್‌ಯುವಿಯು ವೈಭವೋಪೇತ ಇಂಟೀರಿಯರ್, ದೃಢವಾದ ರೋಡ್ ಪ್ರೆಸೆಂನ್ಸ್‌ ಹಾಗೂ ಅತ್ಯಾಧುನಿಕ ಸೇಫ್ಟಿ ಫೀಚರ್‌ಗಳನ್ನು ಹೊಂದಿದೆ.

ಸಂತೋಷ್, ಜನರಲ್‌ ಮ್ಯಾನೇಜರ್‌, ಸೇಲ್ಸ್‌ ವಿಭಾಗ

ಜಾನ್ಸಿ ಕಿಯಾ ಸಂಸ್ಥೆಯು ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಸಾಗರ ಸೇರಿ 5 ಪ್ರಮುಖ ಕೇಂದ್ರಗಳಲ್ಲಿ ಜಾಲ ವಿಸ್ತರಿಸಿದೆ. ಗ್ರಾಹಕರ ನಂಬಿಕೆ ಮತ್ತು ಬೆಂಬಲದಿಂದಾಗಿ ಈ ಮಟ್ಟಕ್ಕೆ ಬೆಳೆದಿದೆ. ಜಾಗತಿಕ ಮಟ್ಟದ ಕಿಯಾ ಸೊರೆಂಟೊ ಎಸ್‌ಯುವಿಯನ್ನು ನಮ್ಮ ಭಾಗದ ಜನರಿಗೆ ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ.

ಕೆ.ಕೆ. ಶೆಟ್ಟಿ, ಸಿಇಒ, ಜಾನ್ಸಿ ಕಿಯಾ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ