‘ಆರೋಪಿ ಬಿಜೆಪಿ ಕಾರ್ಯಕರ್ತನಾಗಿದ್ದರೆ ತುಂಗಾ ನಗರ ಠಾಣೆಯಲ್ಲಿ ಚೌ ಚೌ ಬಾತ್, ಟೀ ತರಿಸಿ ಕೊಡ್ತಾರೆ’

SHIVAMOGGA LIVE NEWS | Politics News | 7 ಏಪ್ರಿಲ್ 2022➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಆರೋಪಿಯೊಬ್ಬ ಬಿಜೆಪಿ ಕಾರ್ಯಕರ್ತನಾಗಿದ್ದರೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಚೌ ಚೌ ಬಾತ್, ಟೀ ತರಿಸಿ, ಕೂರಿಸಿ ಮಾತನಾಡಿಸುತ್ತಾರೆ. ಆದರೆ ದೂರುದಾರನನ್ನು ನಿಲ್ಲಿಸಿ ಮಾತನಾಡಿಸುತ್ತಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಎಂದರೆ ಭಾರಿ ಗೌರವ. ಭಾನುಪ್ರಕಾಶ್ ಅವರು ಇಂಚಾರ್ಜ್ ಎಂದು ಗೊತ್ತಿರಲಿಲ್ಲ. ಆರೋಪಿ ಬಿಜೆಪಿ ಪಕ್ಷಕ್ಕೆ ಸೇರಿದವನಾದರೆ ಟೀ ತರಿಸಿ ಕೂರಿಸಿ ಮಾತನಾಡಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಿ ಮಾಡಿಸಲು ಮುಂದಾಗುತ್ತಾರೆ

ಬಿಜೆಪಿಯವರು ತಪ್ಪು ಮಾಡಿದಲ್ಲೆಲ್ಲ ಪೊಲೀಸರು ರಾಜಿ ಮಾಡಿಸುತ್ತಿದ್ದಾರೆ. ಕಾಂಗ್ರೆಸ್’ನವರು ತಪ್ಪು ಮಾಡಿದರೆ ಕೂಡಲೆ ಪ್ರಕರಣ ದಾಖಲು ಮಾಡಿ, ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ. ಕಲ್ಲು ಕಂಬಗಳನ್ನು ಕದ್ದುಕೊಂಡು ಹೋಗಿರುವ ಕುರಿತು ದೂರು ಕೊಟ್ಟರೆ ಪ್ರಕರಣ ದಾಖಲು ಮಾಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೂ ತಿಳಿಸಲಾಗಿದೆ ಎಂದರು.

ಪೊಲೀಸ್ ಠಾಣೆಯಿಂದ ಕರೆ ಮಾಡಿ, ರಾಜಿ ಮಾಡಿಕೊಳ್ಳುವಂತೆ ದೂರುದಾರರಿಗೆ ತಿಳಿಸುತ್ತಿದ್ದಾರೆ. ಘಟನೆ ಖಂಡಿಸಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ಮಾಡುತ್ತೇನೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಎಚ್ಚರಿಸಿದರು.

Politics News Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

Leave a Comment