ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಸೆಪ್ಟೆಂಬರ್ 2021
ತೀರ್ಥಹಳ್ಳಿ ಕಾಂಗ್ರೆಸ್’ನ ಒಳ ಬೇಗುದಿ ಮತ್ತೆ ಸ್ಪೋಟಗೊಂಡಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ವೇದಿಕೆಯಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ತಾಲೂಕಿನಲ್ಲಿ ನಡೆದ ಪಾದಯಾತ್ರೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಕಾಂಗ್ರೆಸ್ ಕಚೇರಿಯಲ್ಲಿ ಇವತ್ತು ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಿಮ್ಮನೆ ರತ್ನಾಕರ್ ಅವರು ಹೇಳಿದ್ದೇನು?
ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳಸುವ ಕೆಲಸ ಮಾಡಿದ್ದೇನೆ. ರಾಜಕೀಯ ಅಲೆಮಾರಿಗಳನ್ನು ಕರೆತಂದು ನನ್ನನ್ನು ಮುಗಿಸುತ್ತೇನೆ ಅಂತಾ ಯಾರಾದರೂ ಭಾವಸಿದ್ದರೆ ಅದನ್ನು ಇವತ್ತೇ ಮರೆತುಬಿಡಿ.
ನನಗೆ ಹಣ, ಅಧಿಕಾರ ಬೇಕಾಗಿಲ್ಲ. ಎಲ್ಲವನ್ನು ಕಳೆದುಕೊಳ್ಳಲು ಸಿದ್ಧವಾಗಿದ್ದೇನೆ. ಹತ್ತು ಕಾರು, ಹತ್ತು ಸಂಸಾರ, ಹತ್ತು ಮನೆ ಕಟ್ಟಿಕೊಳ್ಳಬೇಕು ಅನ್ನುವ ಯಾವುದೆ ಆಸೆ ನನಗಿಲ್ಲ. ಎಲ್ಲವನ್ನು ಕಳೆದುಕೊಳ್ಳಲು ಸಿದ್ಧವಾಗಿರುವ ಮನುಷ್ಯ ನಾನು. ಹಣ ಮತ್ತು ಅಧಿಕಾರಕ್ಕಾಗಿ ಬರುವವನು ನಾನಲ್ಲ. ನನ್ನನ್ನು ಮೆಟ್ಟಿ ಅಂತಹವರನ್ನು ಗೆಲ್ಲಿಸುವ ಯೋಚನೆಯನ್ನು ಯಾರಾದರೂ ಮಾಡಿದ್ದರೆ ಅದನ್ನು ಇವತ್ತೇ ಬಿಟ್ಟುಬಿಡಿ.

‘ಅವರು ನಿಂತರೆ ಬಿಜೆಪಿಗೆ ಮತ’
ಸಯ್ಯದ್ ಎಂಬುವವರು ಬೆಜ್ಜವಳ್ಳಿ ಗ್ರಾಮ ಪಂಚಾಯಿತಿಯಲ್ಲಿ 20 ವರ್ಷ ಸದಸ್ಯರಾಗಿದ್ದರು. ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಅವರು. ಅವರನ್ನು ಕೆಟ್ಟ ಪದಗಳಲ್ಲಿ ಬಾಯಿಗೆ ಬಂದ ಹಾಗೆ ಬೈದವರು ಇವತ್ತು ಇಲ್ಲಿ ಬಂದು ಕುಳಿತಿದ್ದಾರೆ. ಸಯ್ಯದ್ ಅವರ ಮನೆಗೆ ಹೋದರೆ, ಈ ಭಾರಿ ಆ ವ್ಯಕ್ತಿ ಚುನಾವಣೆಗೆ ನಿಂತರೆ ನಾವು ಬಿಜೆಪಿಗೆ ಮತ ಹಾಕುತ್ತೇನೆ ಎಂದು ಅವರ ಮಗ ಹೇಳುತ್ತಿದ್ದಾರೆ.
‘ಅಧಿಕಾರಕ್ಕಾಗಿ ಊರೆಲ್ಲ ತಿರುಗುತ್ತಾರೆ’
ಅವರು ಅಧಿಕಾರಕ್ಕಾಗಿ ಊರೆಲ್ಲ ತಿರುಗುತ್ತಾರೆ. ಅಷ್ಟು ಅಲೆಮಾರಿಗಳವರು. ಅಂತಹವರನ್ನು ಪಕ್ಷಕ್ಕೆ ಕರೆತಂದು ನಮಗೇಕೆ ಹಿಂಸೆ ಕೊಡುತ್ತೀರ? ಅವರು ಕಾಂಗ್ರೆಸ ಪಕ್ಷ ಬಿಟ್ಟು ಹೋಗಿದ್ಯಾಕೆ? ನನ್ನನ್ನು ಸೋಲಿಸಲು ಹೋಗಿದ್ದರಾ? ಜೆಡಿಎಸ್ ಪಕ್ಷಕ್ಕೆ ಹೋಗಲು ಕಾರಣವೇನು? ಪಕ್ಷದ ಸಿದ್ಧಾಂತ ಸರಿ ಇರಲಿಲ್ಲವಾ? ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಸರಿ ಇರಲಿಲ್ಲವಾ? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸರಿ ಇರಲಿಲ್ಲವಾ? ಯಾರು ಸರಿ ಇರಲಿಲ್ಲ?
‘ಕೆಜೆಪಿ ಮತ್ತೆ ರೆಡಿಯಾಗುತ್ತಿದೆ’
ಈಗೊಂದು ಹೊಸ ಸುದ್ದಿ ಇದೆ. ಮತ್ತೆ ಕೆಜೆಪಿ ಪುನರ್ ಸ್ಥಾಪನೆ ಆಗ್ತಾ ಇದೆ. ಜೆಡಿಎಸ್ ಜೊತೆ ಸೇರಿಕೊಂಡು ಹೊಸತಾಗಿ ಸಿದ್ಧವಾಗುತ್ತಿದ್ದೆ. ನಾನು ಇವರನ್ನು ಇಲ್ಲಿ ಕರೆದುಕೊಂಡು ಊರೆಲ್ಲ ತಿರುಗಾಡುತ್ತೇನೆ. ಆಮೇಲೆ ಇವರು ಅಲ್ಲಿಗೆ ಹೋದರೆ ನಾವೇನು ಮಾಡಲಿ?
ಇದನ್ನು ಓದಿ | ತೀರ್ಥಹಳ್ಳಿಯಲ್ಲಿ ಮಾಜಿ ಸಚಿವರ ಲೆಟರ್ ವೈರಲ್, ಕಾಂಗ್ರೆಸ್’ಗೆ ಬಿಸಿ ತುಪ್ಪವಾದ ಮುಸುಕಿನ ಗುದ್ದಾಟ, ಪತ್ರದಲ್ಲಿ ಏನಿದೆ?
ಬಂಗಾರಪ್ಪ ನನ್ನ ನಾಯಕರು ಎಂದು ಹೋದರು. ಕುಮಾರಸ್ವಾಮಿ ನನ್ನ ನಾಯಕರು ಎಂದು ಹೋದರು. ಯಾರೆಲ್ಲ ಮುಖ್ಯಮಂತ್ರಿಯಾದರೋ ಅವರೆಲ್ಲ ನಾಯಕರೆಂದರು.

‘ಚುನಾವಣೆಗೆ ವರ್ಷ ಇರುವಾಗ ಪಕ್ಷಕ್ಕೆ ಬರ್ತಾರೆ’
ಯಾವ ಪಕ್ಷಕ್ಕೆ ಹೋದರೂ ನಾನು ಹಣ ಕೊಟ್ಟಿದ್ದೇನೆ ಅಂತಾರೆ. ಒಂದು ದಿನ ಕ್ಯಾನ್ವಾಸ್’ಗೆ ಬರುವುದಿಲ್ಲ. ಚುನಾವಣೆಗೆ ಒಂದು ವರ್ಷ ಇರುವಾಗ ಪಕ್ಷಕ್ಕೆ ಬಂದರೆ ಪಾರ್ಟಿ ಕಟ್ಟುವುದು ಹೇಗೆ. ಪಾರ್ಟಿ ಕಟ್ಟುವವರು ರಾತ್ರಿ ಹಗಲು ಕೆಲಸ ಮಾಡುತ್ತೇವೆ. ಸಾಲ ಮಾಡಿ ಜನರಿಗೆ ದುಡ್ಡು ಕೊಟ್ಟಿದ್ದೇವೆ. ನನ್ನ ಮನೆ ಮಾರಿ ಸಾಲ ಕೊಟ್ಟಿದ್ದೇನೆ. ಈ ರಾಜಕೀಯ ಅಲೆಮಾರಿಗಳು ಬಂದು ನನ್ನೆ ಸೋಲಿಸುತ್ತೇನೆ ಎಂದು ಯೋಚನೆ ಮಾಡಿದ್ದಾರೆ. ಈ ಪ್ರಪಂಚದ ಯಾವ ಶಕ್ತಿಯು ನನ್ನನ್ನು ಕೊಂಡುಕೊಳ್ಳಲು ಆಗುವುದಿಲ್ಲ.
‘ನಾನು ಸುಮ್ಮನಿರಲು ಸಾಧ್ಯವಿಲ್ಲ’
ರಾಜಕೀಯ ಅಲೆಮಾರಿಗಳಿಗೆ ನೀವು ಸಪೋರ್ಟ್ ಮಾಡುವುದಾದರೆ ಹಂಡ್ರೆಡ್ ಪರ್ಸೆಂಟ್ ನಾನು ಸುಮ್ಮನಿರಲು ಆಗುವುದಿಲ್ಲ. ನಾನು ಈ ಸಭೆಗೆ ಬರುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಒಬ್ಬರು ಕಳ್ಳರು ಇಲ್ಲಿಗೆ ಬರ್ತಾರೆ ಅನ್ನೋದು ಗೊತ್ತಾಯ್ತು. ಅದಕ್ಕೆ ಬಂದೆ.

‘ಶ್ರೀಕಾಂತ್ ಅವರು ಖಾಯಂ ಎದುರಾಳಿ’
ಶ್ರೀಕಾಂತ್ ಅವರು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ. ನಮ್ಮ ಅಭ್ಯರ್ಥಿ ಪ್ರಸನ್ನ ಕುಮಾರ್ ಅವರ ವಿರುದ್ಧ ಅವರು ಸ್ಪರ್ಧಿಸಿದ್ದರು. ಅವರನ್ನು ಕಾರ್ಯಕ್ರಮಕ್ಕೆ ಕರೆದಿದ್ದು ಯಾಕೆ? (ತೀರ್ಥಹಳ್ಳಿಯಲ್ಲಿ ನಡೆದ ಪಾದಯಾತ್ರೆಯ ಸಮಾರೋಪದಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಪಾಲ್ಗೊಂಡಿದ್ದರು)
ಯಾರೂ ಜೆಡಿಎಸ್’ನವರನ್ನು ಕರೆದಿದ್ದಾರೋ ಅವರ ವಿರುದ್ಧ ನೀವು ಕ್ರಮ ತಗೊಬೇಕು. ಕ್ರಮ ಕೈಗೊಳ್ಳದಿದ್ದರೆ ಎಲ್ಲಾ ಸಭೆಗೂ ಬರುತ್ತೇನೆ ನಾನು ಪ್ರೊಟೆಸ್ಟ್ ಮಾಡುತ್ತೇನೆ. ಜೆಡಿಎಸ್’ನವನರನ್ನು ಯಾಕೆ ಕರೆದಿದ್ದು ಅನ್ನುವುದಕ್ಕೆ ಉತ್ತರ ಪಡೆಯಬೇಕು. ಶ್ರೀಕಾಂತ್ ಅವರು ನಮ್ಮ ಖಾಯಂ ಎದುರಾಳಿಯಾಗಿದ್ದಾರೆ.

ರೇವಣ್ಣನ ಮಗನನ್ನು ಕರೆಯುತ್ತೇನೆ ಬರ್ತೀರಾ?
ಖಾಸಗಿ ಕಾರ್ಯಕ್ರಮ ಎಂದು ಹೇಳುತ್ತಿದ್ದಾರೆ. ಹೋಗಬೇಡಿ ಎಂದು ಮನವಿ ಮಾಡಿದ್ದೆ. ನಾಳೆ ನಾನೊಂದು ಕಾರ್ಯಕ್ರಮ ಮಾಡುತ್ತೇನೆ. ರೇವಣ್ಣ ಅವರ ಮಗನನ್ನು ಕರೆಯುತ್ತೇನೆ. ಬರ್ತೀರಾ? ದೇವೇಗೌಡರು, ಕುಮಾರಸ್ವಾಮಿ ಅವರ ಫೋಟೊ ಬಳಸಿ ಪಕ್ಷಾತೀತ ಅಂತಾ ಈಗ ಹೇಳಲು ಆಗುತ್ತದೆಯೇ?
ವೇದಿಕೆಯಿಂದ ಹೊರ ನಡೆದ ಕಿಮ್ಮನೆ
ಇನ್ನು, ಕಿಮ್ಮನೆ ರತ್ನಾಕರ್ ಅವರ ಮಾತಿಗೆ ಕೆಲವರು ವಿರೋಧ ವ್ಯಕ್ತಪಡಿಸಿದರು.ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಯಿತು. ಮಾತು ಮುಗಿಸಿದ ಕಿಮ್ಮನೆ ರತ್ನಾಕರ್ ಅವರು ಸಭೆಯಿಂದ ನಿರ್ಗಮಿಸಿದರು.
ಕೆಪಿಸಿಸಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ವಿಭಾಗದ ರಾಜ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ, ರಾಜ್ಯಸಂಚಾಲಕರು ವಿಜಯಸಿಂಗ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200






