ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 7 JULY 2023
SHIMOGA : ತುಂಗಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಕೋರ್ಪಲಯ್ಯ ಛತ್ರ ಮಂಟಪದ (Mantapa) ಬಹುಭಾಗ ಮುಳುಗಿದೆ.

ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಹಿನ್ನೀರು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು ಜಲಾಶಯದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಆದ್ದರಿಂದ ಶಿವಮೊಗ್ಗದ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.

ಮಂಟಪ ಮುಳುಗಲು ಮೂರಡಿ ಬಾಕಿ
ತುಂಗಾ ನದಿಯಲ್ಲಿರುವ ಕೋರ್ಪಲಯ್ಯ ಛತ್ರ ಮಂಟಪ (Mantapa) ಮುಕ್ಕಾಲು ಭಾಗ ಮುಳುಗಿದೆ. ಮಂಟಪ ಸಂಪೂರ್ಣ ಮುಳುಗಲು ಇನ್ನು ಮೂರು ಅಡಿ ಬಾಕಿ ಇದೆ. ಜನರು ಶಿವಮೊಗ್ಗದ ಹಳೆ ಸೇತುವೆ ಮೇಲೆ ನಿಂತು ಮುಕ್ಕಾಲು ಮುಳುಗಿರುವ ಮಂಟಪವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರ ಫೋಟೋ, ವಿಡಿಯೋಗಳನ್ನು ಕ್ಲಿಕ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಸಂಭ್ರಮಿಸುತ್ತಿದ್ದಾರೆ.ʼ
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್ 10 ಜಾಗಗಳು ಇಲ್ಲಿದೆ – ಕಳೆದ 24 ಗಂಟೆಯ ರಿಪೋರ್ಟ್

ಮಂಟಪದ ಬಳಿ ಹೋಗಲು ಅವಕಾಶವಿಲ್ಲ
ಪ್ರತಿ ಬಾರಿ ಮಂಟಪ ಮುಳುಗಿದಾಗಲು ಜನರು ಕೋಟೆ ರಸ್ತೆ ಮೂಲಕ ಮಂಟಪದ ಬಳಿಗೆ ಹೋಗಿ ವೀಕ್ಷಿಸುತ್ತಿದ್ದರು. ಆದರೆ ಎರಡು ವರ್ಷದಿಂದ ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆ ಮಂಟಪದ ಬಳಿ ಹೋಗಲು ಜನರಿಗೆ ಅವಕಾಶವಿಲ್ಲದಾಗಿದೆ. ನದಿ ದಂಡೆ ಮೇಲೆ ವಾಕಿಂಗ್ ಪಾತ್ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಹಿನ್ನೆಲೆ ಮಂಟಪದ ಬಳಿಗೆ ಹೋಗುವ ಎಲ್ಲಾ ಮಾರ್ಗದಲ್ಲಿಯು ಗೇಟ್‌ಗಳನ್ನು ನಿರ್ಮಿಸಿ, ಬೀಗ ಹಾಕಲಾಗಿದೆ. ಕೆಲಸದ ಸಿಬ್ಬಂದಿ ಹೊರತು ಉಳಿದವರಿಗೆ ಪ್ರವೇಶ ನಿರಾಕರಿಸಲಾಗಿದೆ. ಕಳೆದ ಮಳೆಗಾಲದಲ್ಲೂ ಇದೆ ಪರಿಸ್ಥಿತಿ ಇತ್ತು. ಆಗಲು ಜನರು ಮಂಟಪದ ಬಳಿ ಹೋಗಲು ನಿರ್ಬಂಧ ವಿಧಿಸಲಾಗಿತ್ತು.
ಇದನ್ನೂ ಓದಿ – ಗಾಜನೂರು ತುಂಗಾ ಡ್ಯಾಂನ 12 ಗೇಟ್ ಓಪನ್, ಒಳ ಹರಿವು ಎಷ್ಟಿದೆ? ಹೊರ ಹೋಗುತ್ತಿರುವ ನೀರೆಷ್ಟು?

LATEST NEWS
- Three killed, several injured in soil cave-in at Hulikal Ghat

- BREAKING NEWS – ಹುಲಿಕಲ್ ಘಾಟಿಯಲ್ಲಿ ಘೋರ ದುರ್ಘಟನೆ, ಕಾರ್ಮಿಕರು ಸಾವು

- PU RESULT: ಶಿವಮೊಗ್ಗದ ಮಹೀನ್ ಖಾನಮ್ ಅಫ್ರಿದಿ ಮನೆಯಲ್ಲಿ ಸಂಭ್ರಮ, ಪಡೆದ ಅಂಕಗಳೆಷ್ಟು?

- ಇವತ್ತಿನ ಅಡಿಕೆ ರೇಟ್, ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿಯಲ್ಲಿ ಎಷ್ಟಿದೆ ಅಡಿಕೆ ಧಾರಣೆ?

- ಶಿವಮೊಗ್ಗ ಜಿಲ್ಲೆಯಲ್ಲಿ ಯುವನಿಧಿ ಪ್ರಚಾರ, ಯಾವ್ಯಾವ ದಿನ ಯಾವ್ಯಾವ ಕಾಲೇಜಿನಲ್ಲಿ ಕಾರ್ಯಕ್ರಮ?

About The Editor
ನಿತಿನ್ ಆರ್.ಕೈದೊಟ್ಲು












