ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 MARCH 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಮಾ.12ರಂದು ತವರು ಮನೆ ಗಾಂಧಿ ಬಜಾರ್ನಲ್ಲಿ ದೇವಿ ದರ್ಶನ ನೀಡಲಿದ್ದಾಳೆ. ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಗಾಂಧಿ ಬಜಾರ್ನಲ್ಲಿ ಹೇಗಿರುತ್ತೆ ವ್ಯವಸ್ಥೆ?
ಬೆಳಗಿನ ಜಾವ 5 ಗಂಟೆಗೆ ಬಿ.ಬಿ.ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ. ಆ ಕುಟುಂಬದ ಮುತ್ತೈದೆಯರು ಮಂಗಳ ವಾದ್ಯಗಳೊಂದಿಗೆ ದೇವಿಯ ತವರು ಮನೆ ಗಾಂಧಿ ಬಜಾರ್ವರೆಗೆ ಮೆರವಣಿಗೆಯಲ್ಲಿ ಆಗಮಿಸುತ್ತಾರೆ. ದೇವಿಗೆ ಬಾಸಿಂಗ ಅರ್ಪಿಸಿ, ಉಡಿ ತುಂಬಿ, ಪೂಜೆ ಸಲ್ಲಿಸುತ್ತಾರೆ. ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸುತ್ತಾರೆ. ಲಕ್ಷಾಂತರ ಮುತ್ತೈದೆಯರು ಶ್ರೀ ಮಾರಿಕಾಂಬೆಗೆ ಮಡಲಕ್ಕಿ ನೀಡಿ, ಉಡಿ ತುಂಬಿ ತಮ್ಮ ಪೂಜೆ ಸಲ್ಲಿಸುತ್ತಾರೆ.
ಗಾಂಧಿ ಬಜಾರ್ ತವರು ಮನೆಯಲ್ಲಿ ದೇವಿ ದರ್ಶನ ನೀಡಲಿದ್ದಾಳೆ. ಶ್ರೀ ಮಾರಿಕಾಂಬೆಯ ದರ್ಶನಕ್ಕೆ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭಾರಿ ಬಿಸಿಲು ಇರುವುದರಿಂದ ಬಿ.ಹೆಚ್.ರಸ್ತೆಯವರೆಗೆ ಪೆಂಡಾಲ್ ಹಾಕಲಾಗಿದೆ. ದಾಹ ನೀಗಿಸಲು ಅಲ್ಲಲ್ಲಿ ನೀರು, ಮಜ್ಜಿಗೆಯ ವ್ಯವಸ್ಥೆ ಇರಲಿದೆ.
ಗಾಂಧಿ ಬಜಾರ್ನಲ್ಲಿ ದೇವಿ ದರ್ಶನಕ್ಕೆ ತೆರಳುವ ಭಕ್ತರಿಗೆ 200 ರೂ. ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಾಂಧಿ ಬಜಾರ್ ಮಹಾದ್ವಾರದ ಬಳಿ ಟಿಕೆಟ್ ದೊರೆಯಲಿದೆ. ಪ್ರತಿ ಟಿಕೆಟ್ಗೆ ಇಬ್ಬರಿಗೆ ದರ್ಶನಕ್ಕೆ ಅವಕಾಶವಿರಲಿದೆ. ‘ಶೇ.30ರಷ್ಟು ಮಂದಿ ಈ ವಿಶೇಷ ದರ್ಶನದ ವ್ಯವಸ್ಥೆ ಅಡಿ ದರ್ಶನ ಪಡೆಯುವ ಸಾಧ್ಯತೆ ಇದೆʼ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಬೆಳಗ್ಗೆ 8 ಗಂಟೆಯಿಂದ ವಿಶೇಷ ದರ್ಶನ ವ್ಯವಸ್ಥೆ ಶುರುವಾಗಲಿದೆ. ಈ ವ್ಯವಸ್ಥೆ ಅಡಿ ವಿಶೇಷ ಚೇತನರು ಮತ್ತು ತುಂಬು ಗರ್ಭಿಣಿಯರಿಗೆ ಉಚಿತ ಪ್ರವೇಶ ನೀಡಲಾಗುತ್ತದೆʼ ಎಂದು ದೇಗುಲ ಸಮಿತಿ ಕಾರ್ಯದರ್ಶಿ ಎನ್.ಮಂಜುನಾಥ್ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ನಾಡ ಹಬ್ಬ ಮಾದರಿ ವಿದ್ಯುತ್ ದೀಪಾಲಂಕಾರ, ಎಲ್ಲೆಲ್ಲಿ ಹೇಗಿದೆ? ಇಲ್ಲಿದೆ ಫೋಟೊ ಮಾಹಿತಿ
ಎಲ್ಲ ಭಕ್ತರು ದೇವಿಯನ್ನು ಕಣ್ತುಂಬಿಕೊಳ್ಳಲು ಅನುವಾಗುವಂತೆ ಈ ಬಾರಿ ವ್ಯವಸ್ಥೆ ಮಾಡಲಾಗಿದೆ. ದೇವಿಯ ಮುಂದೆ ಕೇವಲ ಇಬ್ಬರು ಸೇವಾಕರ್ತರಿಗೆ ಮಾತ್ರ ಅವಕಾಶವಿರಲಿದೆ. ಉಳಿದಂತೆ ಪೊಲೀಸ್ ಭದ್ರತೆ ಇರಲಿದೆ. ಇನ್ನು, ಗಾಂಧಿ ಬಜಾರ್ನಾದ್ಯಂತ ಅಲ್ಲಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮಫ್ತಿಯಲ್ಲಿಯು ಪೊಲೀಸರನ್ನು ನಿಯೋಜಿಸಲಾಗಿದೆ. ‘ಈಗಾಗಲೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಅವರು ಎರಡು ಬಾರಿ ದೇಗುಲಕ್ಕೆ ಭೇಟಿ ನೀಡಿ ಭದ್ರತೆ ಕುರಿತು ಚರ್ಚೆ ನಡೆಸಿದ್ದಾರೆʼ ಎಂದು ಎನ್.ಮಂಜುನಾಥ್ ತಿಳಿಸಿದರು.