ಭದ್ರಾವತಿಯ ವ್ಯಕ್ತಿಗೆ ₹10 ಲಕ್ಷದ ಪರಿಹಾರ ನಿಧಿ ಚೆಕ್‌ ವಿತರಿಸಿದ KSRTC

ಶಿವಮೊಗ್ಗ: ಬಸ್ಸಿನಿಂದ ಕೆಳಗೆ ಬಿದ್ದು ಯುವತಿ ಮೃತಪಟ್ಟಿದ್ದ ಪ್ರಕರಣ ಸಂಬಂಧ ಅವರ ಕುಟುಂದವರಿಗೆ KSRTC ವತಿಯಿಂದ ಅಪಘಾತ ಪರಿಹಾರ ನಿಧಿ ಚೆಕ್‌ ವಿತರಣೆ ಮಾಡಲಾಯಿತು.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

2024ರ ಅಕ್ಟೋಬರ್ 22 ರಂದು ಶಿವಮೊಗ್ಗ – ಭದ್ರಾವತಿ ಮಾರ್ಗದಲ್ಲಿ ಪಯಣಿಸುತ್ತಿದ್ದಾಗ ಭದ್ರಾವತಿ ತಾಲೂಕು ಹಳೇ ಭಂಡಾರಹಳ್ಳಿ ವಾಸಿ ಹೇಮಾವತಿ (19) ಬಸ್‌ನಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸಾರಿಗೆ ನಿಗಮದ ವತಿಯಿಂದ ಹೇಮಾವತಿ ಅವರ ತಂದೆ ರಮೇಶ್‌ ಅವರಿಗೆ ಅಪಘಾತ ಪರಿಹಾರ ನಿಧಿಯ ₹10 ಲಕ್ಷದ ಚೆಕ್‌ ವಿತರಿಸಲಾಯಿತು. ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಟಿ.ಆರ್. ಚೆಕ್‌ ಹಸ್ತಾಂತರ ಮಾಡಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಯಿತು.

KSRTC-issued-cheque-for-Bhadravathi-person

ಇದನ್ನೂ ಓದಿ » ಶಿವಮೊಗ್ಗ ಪೊಲೀಸರಿಂದ 21 ವಾಹನಗಳು ಬಹಿರಂಗ ಹರಾಜು, ದಿನಾಂಕ ಪ್ರಕಟ

Leave a Comment