ಶಿವಮೊಗ್ಗದಲ್ಲಿ ಬಸ್‌ ಮೇಲಿನ ಗುಟ್ಕಾ ಜಾಹೀರಾತು ಕಿತ್ತೆಸೆದು ಆಕ್ರೋಶ, ಪಟಾಕಿ ಸಿಡಿಸಿ ಸಂಭ್ರಮ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲಿನ ಗುಟ್ಕಾ ಕಂಪನಿ ಜಾಹೀರಾತುಗಳನ್ನು (Advertisements) ತೆರವುಗೊಳಿಸಿದ ಕರವೇ ಸಿಂಹಸೇನೆ ಸದಸ್ಯರು ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿಹಂಚಿದರು.

ಸಂಘಟನೆಯ ಅಧ್ಯಕ್ಷ ಎಂ.ರವಿಪ್ರಸಾದ್ ಮಾತನಾಡಿ, ಎರಡು ತಿಂಗಳ ಹಿಂದೆಯೇ ಕೆಎಸ್ಆರ್‌ಟಿಸಿ ಬಸ್‌ ಮೇಲಿನ ಗುಟ್ಕಾ ಮತ್ತಿತರ ಮಾದಕ ವಸ್ತುಗಳ ಜಾಹೀರಾತು ಹಾಗೂ ಆಂಗ್ಲ ಭಾಷೆಯಲ್ಲಿರುವ ಜಾಹೀರಾತುಗಳನ್ನು ತೆರವು ಮಾಡುವಂತೆ ಶಿವಮೊಗ್ಗದಿಂದಲೇ ಹೋರಾಟ ಆರಂಭಿಸಿದ್ದೆವು ಎಂದರು.

ಇದನ್ನೂ ಓದಿ – ಸಕ್ರೆಬೈಲು ಬಳಿ ಬಸ್ಸು ಕಾರು ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಬೆಂಗಳೂರಿನಲ್ಲೂ ಇದೇ ವಿಷಯದಲ್ಲಿ ಹೋರಾಟ ಮಾಡಲಾಗಿತ್ತು. ಈ ಸಂಬಂಧ ಸಾರಿಗೆ ಸಚಿವರಿಗೂ ಮನವಿ ನೀಡಲಾಗಿತ್ತು. ಈ ಹಿನ್ನೆಲೆ ಸರ್ಕಾರ ಎಚ್ಚೆತ್ತುಕೊಂಡು ಸರ್ಕಾರಿ ಬಸ್‌ಗಳ ಮೇಲಿನ ಮಾದಕ ವಸ್ತುಗಳು, ಒಳ ಉಡುಪುಗಳು, ಇಂಗ್ಲಿಷ್ ಬರಹದ ಜಾಹೀರಾತುಗಳನ್ನು ತೆರವು ಮಾಡುವಂತೆ ಆದೇಶ ಮಾಡಿತ್ತು ಎಂದು ತಿಳಿಸಿದರು.

Karave-workers-remove-advertisements-from-ksrtc-buses.

ಕೆಲವು ಬಸ್‌ಗಳಲ್ಲಿ ಇನ್ನೂ ಆಕ್ಷೇಪಾರ್ಹ ಜಾಹೀರಾತುಗಳು ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲ ಜಾಹೀರಾತುಗಳನ್ನು ತೆರವು ಮಾಡಿದ್ದೇವೆ. ಸಂಬಂಧಿಸಿದವರು ಇನ್ನು ಮುಂದಾದರೂ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸಂಘಟನೆಯ ಪ್ರಮುಖರಾದ ಮಧುಸೂದನ್, ನೂರುಲ್ಲಾ, ಅಭಿಜಿತ್ ನವುಲೆ, ರಫೀಕ್ ಇತರರಿದ್ದರು.

JNNCE-COLLEGE-ADVT.

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment