‘ಇನ್ಮುಂದೆ ದೇಶದಲ್ಲಿ ಚುನಾವಣೆಗಳನ್ನು ನಿಷೇಧಗೊಳಿಸಲಿ, ಲೋಕಸಭೆಯಲ್ಲಿ ಬಿಲ್ ಪಾಸ್ ಮಾಡಿಸಲಿ’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 26 ಜೂನ್ 2022

ದೇಶದಲ್ಲಿ ಇನ್ಮುಂದೆ ಚುನಾವಣೆ (ELECTION) ನಡೆಸುವುದೆ ಬೇಡ. ಈ ಕುರಿತು ಲೋಕಸಭೆಯಲ್ಲಿ ಬಿಲ್ ಪಾಸ್ ಮಾಡಿಬಿಡಿ. ಬೇರೆಯವರು ನೆಮ್ಮದಿಯಿಂದ ಬದುಕಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD KUMARASWAMY) ಆಕ್ರೋಶ ವ್ಯಕ್ತಪಡಿಸಿದರು.

shimoga nanjappa hospital

ಶಿವಮೊಗ್ಗ ಹೆಲಿಪ್ಯಾಡ್’ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ಸ್ಪಷ್ಟ ಬಹುಮತ ಇದ್ದರೂ ಸರ್ಕಾರ ಉಳಿಯುತ್ತದೆಯೋ, ಇಲ್ಲವೋ ಅನ್ನುವ ಅನುಮಾನ ಪ್ರಾರಂಭವಾಗಿದೆ. ಇದರ ಬದಲು ನೀವು ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ತಿಳಿಸಿದರೆ. ಹಣ, ಆರೋಗ್ಯ ಹಾಳು ಮಾಡಿಕೊಳ್ಳುವುದು ತಪ್ಪಲಿದೆ. ರಾಜಕೀಯ ಪಕ್ಷಗಳು ಬೀದಿ ಪಾಲಾಗುವುದು ತಪ್ಪುತ್ತದೆ. ಬಿಜೆಪಿಯಲ್ಲಿದ್ದರೆ ಮಾತ್ರ ಉಳಿಗಾಲ. ಇನ್ನುಳಿದವರಿಗೆ ಉಳಿಗಾಲ ಇಲ್ಲ. ಹಾಗಾಗಿ ಚುನಾವಣೆಯನ್ನ ನಿಷೇಧ ಮಾಡುವ ಬಿಲ್ ಪಾಸ್ ಮಾಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲೂ ಹೀಗೆ ಆಗಿತ್ತು

ಮಹಾರಾಷ್ಟ್ರದಲ್ಲಿ (MAHARASHTRA) ಆಪರೇಷನ್ ನಡೆಯುತ್ತಿರುವ ಕುರಿತು ಯಾವುದೆ ಸಂಶಯವಿಲ್ಲ. ರಾಜ್ಯದಲ್ಲಿಯು ಆವತ್ತಿನ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡು, ಕೆಲ ಕಾಂಗ್ರೆಸ್ ನಾಯಕರ ಸಹಕಾರದೊಂದಿಗೆ ರಾಜ್ಯದಲ್ಲಿ ಅಮಿತ್ ಷಾ ಅವರ ನೇತೃತ್ವದಲ್ಲಿ ಪ್ರಹಸನ ಮಾಡಿದ್ದರು. ಆವತ್ತು ಕರ್ನಾಟಕ ಟು ಮುಂಬೈ. ಇವತ್ತು ಮುಂಬೈ ಟು ಸೂರತ್, ಸೂರತ್ ಟು ಗುವಾಹಟಿ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಟಕದ ಪರಿಸ್ಥಿತಿ ಬೇರೆ, ಮುಂಬೈನ ಸ್ಥಿತಿ ಬೇರೆ ಇದೆ. ಬಂಡಾಯ ಸಾರಿರುವ ಶಿವಸೇನೆ ಶಾಸಕರ ಕಚೇರಿ ಧ್ವಂಸ ಮಾಡಿ, ಗಲಭೆ ಮಾಡಲಾಗುತ್ತಿದೆ. ದೇಶದಲ್ಲಿ ಬಿಜೆಪಿ ಮುಖಂಡರು ಉಪದೇಶ ಮಾಡುತ್ತಾರೆ. ಆದರೆ ವಿರೋಧ ಪಕ್ಷಗಳನ್ನು ದಮನ ಮಾಡಲು ಹೊರಟಿದ್ದಾರೆ. 2008ರಲ್ಲಿ ರಾಜ್ಯದಲ್ಲಿ ಪ್ರಾರಂಭವಾದ ಆಪರೇಷನ್ 2014ರ ನಂತರ ದೇಶಾದ್ಯಂತ ವಿಸ್ತರಿಸಿದ್ದಾರೆ. ಗೋವಾದಲ್ಲಿ ಹೈಜಾಕ್ ಮಾಡಿ ಸರ್ಕಾರ ರಚಿಸಿದರು. ರಾಜಸ್ಥಾನದಲ್ಲಿ ಪ್ರಯತ್ನ ಮಾಡಿದರು. ಆದರೆ ಅಲ್ಲಿ ಯಶ ಕಾಣಲಿಲ್ಲ. ಮುಂದೆ ರಾಜಸ್ಥಾನ ಅಥವಾ ಜಾರ್ಖಂಡ್ ರಾಜ್ಯಗಳಲ್ಲಿ ಆಪರೇಷನ್ ಆಗಬುಹುದು ಎಂದು ಭವಿಷ್ಯ ನುಡಿದರು.

ಪ್ರಾದೇಶಿಕ ಪಕ್ಷ ಮುಕ್ತಗೊಳಿಸಲು ಹೊರಟಿದ್ದಾರೆ

ದೇಶದಲ್ಲಿ ಬಿಜೆಪಿಯೇತರ ಸರ್ಕಾರ ಇರಬಾರದು ಎಂದು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಮುಕ್ತ ಆಗಿದೆ. ಈಗ ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ಪ್ರಯತ್ನ ನಡೆಯಿತು. ಆದರೆ ಮಮತಾ ಬ್ಯಾನರ್ಜಿ ಅವರು ಸರ್ಕಾರ ಉಳಿಸಿಕೊಂಡರು. ಇ.ಡಿ ಸೇರಿದಂತೆ ಬೇರೆ ಬೇರೆ ಸಂಸ್ಥೆ ಬಳಸಿಕೊಂಡು ಆತಂಕ ಸೃಷ್ಟಿ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಆದಾಯ ತೆರಿಗೆ ಕಚೇರಿ ಮುಂದೆ ಪ್ರತಿಭಟನೆ, ಬಂಧನ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment