ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 DECEMBER 2022
ಶಿವಮೊಗ್ಗ : ಹಿರಿಯ ನಾಗರಿಕರ ಆರೈಕೆ ಕೇಂದ್ರದಿಂದ ವೃದ್ಧೆಯೊಬ್ಬರು (lady missing) ನಾಪತ್ತೆಯಾಗಿದ್ದಾರೆ. ಮಾನಸಿಕ ಅಸ್ವಸ್ಥರಾಗಿರುವ ಅವರಿಗೆ ಆರೈಕೆ ಕೇಂದ್ರದಲ್ಲಿ ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸಂಗಮ್ಮ ಲೆಕ್ಕಿಹಾಳ್ (65) ನಾಪತ್ತೆಯಾಗಿರುವವರು. ನಂದಿನಿ ಬಡಾವಣೆಯ ಹಿರಿಯ ನಾಗರಿಕರ ಆರೈಕೆ ಕೇಂದ್ರದಿಂದ ನಾಪತ್ತೆಯಾಗಿದ್ದಾರೆ. ಡಿ.14ರಂದು ಬೆಳಗಿನ ಉಪಹಾರದ ಬಳಿಕ ನರ್ಸ್ ಮತ್ತು ಸಿಬ್ಬಂದಿ ಕಣ್ತಪ್ಪಿಸಿ ಹೊರಗೆ ಹೋಗಿದ್ದಾರೆ (lady missing) ಎಂದು ಆರೈಕೆ ಕೇಂದ್ರದ ವೈದ್ಯರು ದೂರಿನಲ್ಲಿ ತಿಳಿಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ದೇಗುಲದ ಆವರಣದಲ್ಲಿ ವೃದ್ಧೆ ಹತ್ಯೆ, ಸಣ್ಣ ಸುಳಿವಿಲ್ಲದ ಕೇಸ್ ಭೇದಿಸಿದ ಭದ್ರಾವತಿ ಪೊಲೀಸ್, ಕೊಲೆಗೇನು ಕಾರಣ?
ಮಾನಸಿಕ ಅಸ್ವಸ್ಥರಾಗಿರುವ ಸಂಗಮ್ಮ ಕಳೆದ 6 ತಿಂಗಳಿಂದ ಆರೈಕೆ ಕೇಂದ್ರದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರ ಗಮನಕ್ಕೆ ಬಂದರೆ ಕೂಡಲೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದಾಗಿದೆ.