ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಲ್ಯಾಪ್ ಟಾಪ್ ಜೊತೆ ಬಂದ ವಿದ್ಯಾರ್ಥಿನಿಗೆ ಶಾಕ್

SHIVAMOGGA LIVE NEWS | 24 ಮಾರ್ಚ್ 2022

ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಲ್ಯಾಪ್ ಟಾಪ್ ಕಳ್ಳತನ ಪ್ರಕರಣ ಮುಂದುವರೆದಿವೆ. ವಿದ್ಯಾರ್ಥಿನಿಯೊಬ್ಬರಿಗೆ ಸೇರಿದ ಲ್ಯಾಪ್ ಟಾಪ್, ಹಣ ಕಳವಾಗಿದೆ.

Nanjappa Hospital Shimoga

ಬಾಗಲಕೋಟೆ ಜಿಲ್ಲೆಯ ಸೌಮ್ಯ ಎಂಬುವವರಿಗೆ ಸೇರಿದ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೇಗಾಯ್ತು ಕಳ್ಳತನ?

ಸೌಮ್ಯ ಅವರು ಹುನಗುಂದದಿಂದ KSRTC ಬಸ್ಸಿನಲ್ಲಿ ಚಿಕ್ಕಮಗಳೂರಿಗೆ ತೆರಳುತ್ತಿದ್ದರು. ಬೆಳಗಿನ ಜಾವ 3.30ರ ಹೊತ್ತಿಗೆ ಬಸ್ಸು ಶಿವಮೊಗ್ಗ ನಿಲ್ದಾಣಕ್ಕೆ ಬಂದಿದೆ. ಆ ಸಂದರ್ಭ ಸೌಮ್ಯ ಅವರು ಕಂಡಕ್ಟರ್’ಗೆ ತಿಳಿಸಿ ಶೌಚಾಲಯಕ್ಕೆ ತೆರಳಿದ್ದಾರೆ.

ಹಿಂತಿರುಗಿ ಬಸ್ಸು ಹತ್ತಿದಾಗ ಲ್ಯಾಪ್ ಟಾಪ್ ಬ್ಯಾಗ್ ನಾಪತ್ತೆಯಾಗಿತ್ತು. ಗಾಬರಿಗೊಂಡು ಎಲ್ಲರವನ್ನು ವಿಚಾರಿಸಿ, ಎಲ್ಲೆಡೆ ಹುಡುಕಾಡಿದರೂ ಲ್ಯಾಪ್ ಟಾಪ್ ಬ್ಯಾಗ್ ಸಿಗಲಿಲ್ಲ.

ಇದನ್ನೂ ಓದಿ |  ಲ್ಯಾಪ್ ಟಾಪ್ ಇಟ್ಟುಕೊಂಡು ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಬಂದರೆ ಕಾದಿರುತ್ತೆ ಶಾಕ್

ಲ್ಯಾಪ್ ಟಾಪ್ ಬ್ಯಾಗಿನಲ್ಲಿ 25 ಸಾವಿರ ಮೌಲ್ಯದ ACER ಕಂಪನಿಯ ಲ್ಯಾಪ್ ಟಾಪ್, 11 ಸಾವಿರ ರೂ. ನಗದು, ಎಟಿಎಂ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ, ಪೆನ್ ಡ್ರೈವ್ ಇತ್ತು ದೂರಿನಲ್ಲಿ ತಿಳಿಸಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ |  ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

KB Prasanna Kumar

JNNCE College VTU Ranking

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment