‘ಹತ್ಯೆಗೂ ಮೊದಲು ಹರ್ಷಾಗೆ ವಿಡಿಯೋ ಕಾಲ್’, ಕೊನೆ ಕ್ಷಣವನ್ನು ವಿವರಿಸಿದ ಸ್ನೇಹಿತ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೂ ಮುನ್ನ ನಡೆದ ಕೆಲವು ಬೆಳವಣಿಗೆ ಕುರಿತು ಆತನ ಸ್ನೇಹಿತ ನವೀನ್ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ನವೀನ್ ಮಹತ್ವದ ವಿಚಾರಗಳನ್ನು ತಿಳಿಸಿದ್ದಾರೆ.

Shimoga Nanjappa hospital Cacner Care Center

ನವೀನ ಹೇಳಿದ ಸಂಗತಿಗಳೇನು?

“ಭಾನುವಾರ ಸಂಜೆ ಹರ್ಷನಿಗೆ ವಿಡಿಯೋ ಕಾಲ್ ಬಂದಿತ್ತು. ಇಬ್ಬರು ಯುವತಿಯವರು ವಿಡಿಯೋ ಕಾಲ್ ಮಾಡಿದ್ದರು. ಆ ಯುವತಿಯರು ‘ನಾವು ನಿಮ್ಮ ಸ್ನೇಹಿತೆಯರು’ ಎಂದು ಹೇಳಿದ್ದಾರೆ. ‘ನನಗೆ ನಿಮ್ಮ ಪರಿಚಯವಿಲ್ಲ’ ಎಂದು ಹರ್ಷ ಕರೆ ಕಟ್ ಮಾಡಿದ್ದ. ಅವರು ಪುನಃ ಕರೆ ಮಾಡಿದಾಗಲೂ ಹರ್ಷ ಕರೆ ಕಟ್ ಮಾಡಿದ್ದ.”

‘ನಾವು ನಡೆದುಕೊಂಡು ಅಮ್ಮ ಕ್ಯಾಂಟೀನ್ ಬಳಿಗೆ ಬಂದೆವು. ಆಗ ಹರ್ಷ, “ಯಾಕೋ ವಾತಾವರಣ ಸರಿ ಅನಿಸುತ್ತಿಲ್ಲ. ಗಾಡಿ ತೆಗೆದುಕೊಂಡು ಬನ್ನಿ” ಎಂದು ತಿಳಿಸಿದ’.

‘ನಾನು, ಮಂಜು, ಆನಂದ ಅವರು ಹರ್ಷ ಜೊತೆಗಿದ್ದವು. ಅಮ್ಮ ಕ್ಯಾಂಟೀನ್ ಬಳಿಯಿಂದ ನಾವು ಗಾಡಿ ತರೋಕೆ ಎಂದು ಬಂದೆವು. ಅಷ್ಟರಲ್ಲಿ ಫೋನ್ ಬಂತು, ‘ಬ್ಯಾಟ್ ಹಿಡಿದುಕೊಂಡು ಹರ್ಷನನ್ನು ಓಡಿಸಿಕೊಂಡು ಹೋಗುತ್ತಿದ್ದಾರೆ’ ಎಂದು ತಿಳಿಸಿದರು. ಕೂಡಲೆ ನಾವು ಸ್ಥಳಕ್ಕೆ ಹೋದೆವು’

‘ನಾವು ಹೋದಾಗ ಆಸಿಫ್ ಬ್ಯಾಟ್ ಹಿಡಿದುಕೊಂಡು ಓಡಿ ಹೋಗುತ್ತಿದ್ದ’

ಇದನ್ನೂ ಓದಿ | ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಕೇಸ್, ಮತ್ತಿಬ್ಬರು ಅರೆಸ್ಟ್

Shimoga Live Age Wise Graphics

Bajarangadal Worker Harsha Murdered

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment