ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 1 AUGUST 2023
SHIMOGA : ಜಿಲ್ಲೆಯಾದ್ಯಂತ ಮಳೆ ಕಾಣೆಯಾಗಿದ್ದು (Less Rainfall) ಬಿಸಿಲು ಆವರಿಸಿದೆ. ಸದ್ಯ ಶಿವಮೊಗ್ಗದಲ್ಲಿ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಜೋರು ಮಳೆಯಾಗಬೇಕಿದ್ದ ಸಂದರ್ಭ ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲು ಆವರಿಸಿದೆ. ಮಳೆ ಸಂಪೂರ್ಣ ಕ್ಷೀಣಿಸಿದ್ದು (Less Rainfall) ಅಲ್ಲಲ್ಲಿ ಚದುರಿದಂತೆ ಸುರಿಯುತ್ತಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 8.97 ಮಿ.ಮೀ ಮಳೆಯಾಗಿದೆ. ಭದ್ರಾವತಿ ತಾಲೂಕಿನಲ್ಲಿ ಒಂದು ಮಿ.ಮೀ.ಗಿಂತಲೂ ಕಡಿಮೆಯಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
PHOTO : ಶಿವಮೊಗ್ಗದ ತುಂಗಾ ನದಿ ಸೇತುವೆ ಮೇಲೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮಹಿಳೆಯೊಬ್ಬರು ಛತ್ರಿ ಹಿಡಿದು ನಡೆದು ಸಾಗುತ್ತಿರುವುದು.
ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ತಾಲೂಕಿನಲ್ಲಿ 5.20 ಮಿ.ಮೀ, ಭದ್ರಾವತಿ 0.90 ಮಿ.ಮೀ, ತೀರ್ಥಹಳ್ಳಿ 15.90 ಮಿ.ಮೀ, ಸಾಗರ 16.20 ಮಿ.ಮೀ, ಶಿಕಾರಿಪುರ 2.90 ಮಿ.ಮೀ, ಸೊರಬ 5.20 ಮಿ.ಮೀ, ಹೊಸನಗರ 16.50 ಮಿ.ಮೀ ಮಳೆಯಾಗಿದೆ.
ಹೆಚ್ಚಾಯ್ತು ತಾಪಮಾನ
ಜಿಲ್ಲೆಯ ಅಲ್ಲಲ್ಲಿ ಚದುರಿದ ಹಾಗೆ ಮಳೆ ಸುರಿಯುತ್ತಿದೆ. ಕೆಲವು ಕ್ಷಣ ಮಳೆ ಜೋರಾಗಿ ಬಂದು ಮರೆಯಾಗುತ್ತಿದೆ. ಬಿಸಿಲ ಝಳ ಜೋರಾಗಿದ್ದು, ತಾಪಮಾನ ಏರಿಕೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಕನಿಷ್ಠ 26 ಡಿಗ್ರಿಯಿಂದ ಗರಿಷ್ಠ 28 ಡಿಗ್ರಿವೆರೆಗೆ ತಾಪಮಾನ ಇದೆ. ಮಳೆಗಾಲದಲ್ಲಿ ಮಳೆಯಿಂದ ರಕ್ಷಣೆಗೆ ಛತ್ರಿ ಬಳಸುವ ಬದಲು ಜನ ಬಿಸಿಲಿನ ತಾಪದಿಂದ ಕಾಪಾಡಿಕೊಳ್ಳಲು ಬಳಕೆ ಮಾಡುತ್ತಿದ್ದಾರೆ.
ಜಲಾಯಶಯಗಳ ಒಳ ಹರಿವು ಕುಸಿತ
ಮಳೆ ಕಡಿಮೆ ಆಗಿರುವುದರಿಂದ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಕುಸಿತ ಕಂಡಿದೆ. ಲಿಂಗನಮಕ್ಕಿ ಜಲಾಶಯಕ್ಕೆ 13,660 ಕ್ಯೂಸೆಕ್ ಮಾತ್ರ ಒಳ ಹರಿವು ಇದೆ. ನೀರಿನ ಮಟ್ಟ 1787.9 ಅಡಿಗೆ ತಲುಪಿದೆ. ಭದ್ರಾ ಜಲಾಶಯಕ್ಕೆ 5756 ಕ್ಯೂಸೆಕ್ ಒಳ ಹರಿವು ಇದ್ದು, ನೀರಿನ ಮಟ್ಟ 162.8 ಅಡಿಗೆ ಏರಿಕೆಯಾಗಿದೆ. ತುಂಗಾ ಜಲಾಶಯ ಭರ್ತಿಯಾಗಿದ್ದು 10,493 ಕ್ಯೂಸೆಕ್ ಒಳ ಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.