ಬೆಂಗಳೂರಿನ ತಜ್ಞ ವೈದ್ಯರಿಂದ ಶಿವಮೊಗ್ಗದಲ್ಲಿ ಸೆ.19ರಂದು ಶಿಬಿರ, ಈಗಲೆ ಹೆಸರು ನೋಂದಣಿಗೆ ಸೂಚನೆ

ಶಿವಮೊಗ್ಗ: ಬೆಂಗಳೂರಿನ ಕಾವೇರಿ ಆಸ್ಪತ್ರೆ ವತಿಯಿಂದ ಶಿವಮೊಗ್ಗದಲ್ಲಿ ಯಕೃತ್ ಆರೈಕೆ ಹಾಗೂ ಚಿಕಿತ್ಸೆಗಾಗಿ ವೈದ್ಯಕೀಯ ಶಿಬಿರ ಆಯೋಜಿಸಲಾಗಿದೆ.

ಯಕೃತ್ತಿನ ವೈಫಲ್ಯ, ಸಿರೋಸಿಸ್, ಕಾಮಾಲೆ, ಕೊಬ್ಬಿನ ಯಕೃತ್ ಕಾಯಿಲೆ, ಅಗ್ನ್ಯಾಶಯದ ಸಮಸ್ಯೆಗಳು ಹಾಗೂ ಯಕೃತ್, ಅಗ್ನ್ಯಾಶಯ ಮತ್ತು ಪಿತ್ತಕೋಶದ ಕ್ಯಾನ್ಸರ್‌ಗಳಂತಹ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿರಲಿದೆ. ಬೆಂಗಳೂರಿನ ಖ್ಯಾತ ಯಕೃತ್ತು ಮತ್ತು ಅಗ್ನ್ಯಾಶಯ ತಜ್ಞ ಹಾಗೂ ಯಕೃತ್ತು ಪ್ರತಿರೋಪಣ ಶಸ್ತ್ರಚಿಕಿತ್ಸಕ ಡಾ. ಶ್ರೀನಿವಾಸ್ ಬೋಜನಪು ಅವರು ರೋಗಿಗಳನ್ನು ತಪಾಸಣೆ ನಡೆಸಲಿದ್ದಾರೆ.

Just-Mahithi-Update-Shimoga-News

ಸೆಪ್ಟೆಂಬರ್ 19 ರ ಶನಿವಾರ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:00 ರವರೆಗೆ ಈ ಶಿಬಿರ ನಡೆಯಲಿದೆ. ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸೈನ್ಸ್ ಫೀಲ್ಡ್ ಎದುರಿನ ಅಶೋಕ ಸಂಜೀವಿನಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಣಿಗಾಗಿ 94496 96954 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.