ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 12 MAY 2023
SHIMOGA : ಚೋರಡಿಯ ಕುಮದ್ವತಿ ಸೇತುವೆ ಮೇಲೆ ಭೀಕರ ಅಪಘಾತ (Mishap) ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದೆ. ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಜನರು, ಜನಪ್ರತಿನಿಧಿಗಳು, ಆಸ್ಪತ್ರೆ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ ಹಲವರ ಪ್ರಾಣ ಉಳಿಸಿದೆ. ಸೂಕ್ತ ಸಮಯಕ್ಕೆ ಸಮರ್ಪಕ ಚಿಕಿತ್ಸೆ ಸಿಗುವಂತೆ ಮಾಡಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರೆಲ್ಲ ಹೇಗೆಲ್ಲ ನೆರವಾದರು?
ಅಪಘಾತದಲ್ಲಿ (Mishap) ಗಾಯಗೊಂಡವರಿಗೆ ಸ್ಥಳೀಯರು, ಜನ ಪ್ರತಿನಿಧಿಗಳು, ಅಧಿಕಾರಿಗಳು, ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ತುರ್ತು ನೆರವು ನೀಡಿದ್ದಾರೆ. ಇದರಿಂದ ಹಲವರಿಗೆ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಲಭಿಸಿದೆ.
ಒಂದಾಗಿ ನೆರವಾದ ಸ್ಥಳೀಯರು
ಶಿವಮೊಗ್ಗ ತಾಲೂಕು ಚೋರಡಿಯ ಕುಮದ್ವತಿ ಸೇತುವೆ ಬಳಿ ಗುರುವಾರ ಸಂಜೆ 6.45ರ ಹೊತ್ತಿಗೆ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿಯಾಗಿವೆ. ವಿಚಾರ ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ವಾಹನ ಸವಾರರು ಕೂಡಲೆ ನೆರವಾಗಿದ್ದಾರೆ. ಗಾಯಾಳುಗಳನ್ನು ರಕ್ಷಿಸಿದ್ದಾರೆ. ಖಾಸಗಿ ವಾಹನಗಳಲ್ಲಿಯೇ ಆಯನೂರು ಆರೋಗ್ಯ ಕೇಂದ್ರ ಮತ್ತು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳಿಗೆ ಧೈರ್ಯ ಹೇಳಿದ್ದಾರೆ, ಆತಂಕ ನಿವಾರಿಸಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಜಿ.ಪಂ ಮಾಜಿ ಸದಸ್ಯನ ಸಮಯ ಪ್ರಜ್ಞೆ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್ ಅವರು ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಸಭೆಗೆ ತೆರಳಿದ್ದರು. ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಮೆಗ್ಗಾನ್ ಆಸ್ಪತ್ರೆಗೆ ತೆರಳಿ ವೈದ್ಯರಿಗೆ ಮಾಹಿತಿ ನೀಡಿದರು. ತಕ್ಷಣಕ್ಕೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಅಲ್ಲದೆ ಆಂಬುಲೆನ್ಸ್ ಸಿಬ್ಬಂದಿಯನ್ನು ಚೋರಡಿಗೆ ತೆರಳುವಂತೆ ನೋಡಿಕೊಂಡರು. ಇದರಿಂದ ಸೂಕ್ತ ಸಮಯಕ್ಕೆ ಆಂಬುಲೆನ್ಸ್ಗಳು ಘಟನಾ ಸ್ಥಳಕ್ಕೆ ತಲುಪಲು ಅನುಕೂಲವಾಯಿತು.
ಹರಸಾಹಸ ಪಟ್ಟ ಪೊಲೀಸರು
ಎರಡು ಬಸ್ಸುಗಳು ಒಂದರೊಳಗೆ ಒಂದು ನುಗ್ಗಿದ್ದವು. ಸೀಟಿನಲ್ಲಿಯೇ ಎರಡು ಬಸ್ಸಿನ ಚಾಲಕರು ಸಿಕ್ಕಿಬಿದ್ದಿದ್ದರು. ಅವರ ರಕ್ಷಣೆಗೆ ಹರಸಾಹಸ ಪಡಬೇಕಾಯಿತು. ಸ್ಥಳೀಯರೊಂದಿಗೆ ಪೊಲೀಸರು ಕೂಡ ಹರಸಾಹಸಪಟ್ಟು ಚಾಲಕರನ್ನು ರಕ್ಷಿಸಿದರು. ಜೆಸಿಬಿ ತರಿಸಿ ರಕ್ಷಣಾ ಕಾರ್ಯ ನಡೆಸಿದರು. ಅಪಘಾತದಿಂದಾಗಿ ಶಿವಮೊಗ್ಗ – ಸಾಗರ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಸ್ಸುಗಳನ್ನು ತೆರವು ಮಾಡಿ, ಸಂಚಾರ ದಟ್ಟಣೆ ನಿಯಂತ್ರಿಸಿದರು.
ಮೆಗ್ಗಾನ್ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ
ಭೀಕರ ಅಪಘಾತದ ಮಾಹಿತಿ ಲಭಿಸುತ್ತಿದ್ದಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ತುರ್ತು ಚಿಕಿತ್ಸಾ ವಿಭಿಗದಲ್ಲಿ ವೈದ್ಯರು, ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಯಿತು. ಆಸ್ಪತ್ರೆಯ ನಾಲ್ಕನೆ ಅಂತಸ್ತಿನಲ್ಲಿ ಕೆಲವೇ ನಿಮಿಷದಲ್ಲಿ ವಿಶೇಷ ವಾರ್ಡ್ ಸಿದ್ದಪಡಿಸಿದರು. ಗಾಯಾಳುಗಳು ಬರುತ್ತಿದ್ದಂತೆ ಅವರಿಗೆ ಚಿಕಿತ್ಸೆ ಆರಂಭಿಸಲಾಯಿತು. ವಿಶೇಷ ವಾರ್ಡ್ನ ಬೆಡ್ಗೆ ಒಬ್ಬರಂತೆ ದಾದಿಯರು, ವಾರ್ಡ್ ಬಾಯ್ಗಳು, ವೈದ್ಯರು ಚಿಕಿತ್ಸೆ ನೀಡಿದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಇನ್ನು, ತಮ್ಮವರು ಅಪಘಾತಕ್ಕೀಡಾದ ವಿಚಾರ ತಿಳಿದು ಆಘಾತಕ್ಕೊಳಗಾಗಿ ಬಂದಿದ್ದ ಕುಟುಂಬದವರಿಗೆ ಆಸ್ಪತ್ರೆಯ ಸಿಬ್ಬಂದಿ, ಸೆಕ್ಯೂರಿಟಿಗಳೇ ಸಮಾಧಾನಪಡಿಸಿ, ಧೈರ್ಯ ಹೇಳಿದರು. ಅಪಘಾತದಿಂದ ಶಾಕ್ಗೆ ಒಳಗಾಗಿದ್ದವರಿಗೆ ಕೂಡಲೆ ನೀರು, ಹಾಲು, ಬ್ರೆಡ್ ವ್ಯವಸ್ಥೆ ಮಾಡಿದರು.
ಇದನ್ನೂ ಓದಿ – ಚೋರಡಿ ಬಳಿ ಭೀಕರ ಅಪಘಾತ, ಪ್ರತ್ಯಕ್ಷದರ್ಶಿ ಹೇಳಿದ್ದೇನು? ಹೇಗಾಯ್ತ ಆಕ್ಸಿಡೆಂಟ್?
ಫೋನ್ ಮೂಲಕ ಧೈರ್ಯ ಹೇಳಿದ ಎಂಪಿ
ಘಟನೆ ಮಾಹಿತಿ ಸಿಗುತ್ತಿದ್ದಂತೆ ಸಂಸದ ಬಿ.ವೈ.ರಾಘವೇಂದ್ರ ಮತ್ತು ಸಹೋದರ ಬಿ.ವೈ.ವಿಜಯೇಂದ್ರ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅಲ್ಲದೆ ಅವರ ಕುಟುಂಬದವರಿಗೆ ಕರೆ ಮಾಡಿ, ಅಪಘಾತದ ಮಾಹಿತಿ ತಿಳಿಸಿ, ಧೈರ್ಯ ಹೇಳಿದರು.
ಇದನ್ನೂ ಓದಿ – ಚೋರಡಿ ಅಪಘಾತ ಕೇಸ್, ಆಸ್ಪತ್ರೆಗೆ ಸಂಸದ, ಡಿಸಿ, ಎಸ್ಪಿ, ಅಭ್ಯರ್ಥಿಗಳು ದೌಡು, ಯಾರೆಲ್ಲ ಏನೇನು ಹೇಳಿದರು?