ಶಿವಮೊಗ್ಗ |ಪ್ರೊಫೆಸರ್‌ ಬಳಿ ಸಿಕ್ತು ಕೋಟಿ ಕೋಟಿಯ ಆಸ್ತಿ, ಲಕ್ಷ ಲಕ್ಷದ ಬ್ಯಾಂಕ್‌ ಬ್ಯಾಲೆನ್ಸ್‌, ದುಬಾರಿ ವಾಚುಗಳು, ರಾಶಿ ರಾಶಿ ಶೂಗಳು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ಆದಾಯಕ್ಕು ಮೀರಿದ ಆಸ್ತಿ ಸಂಪಾದನೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧೆಡೆ 8 ಅಧಿಕಾರಿಗಳಿಗೆ ಸಂಬಂಧಿಸಿದ 45 ಕಡೆಗಳಲ್ಲಿ ದಾಳಿ ನಡೆಸಿದರು. ಏಕಕಾಲಕ್ಕೆ ಶೋಧ ಕಾರ್ಯ ನಡೆಸಿ ಕೋಟ್ಯಂತರ ರೂ. ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ (Asset) ಪತ್ತೆ ಹಚ್ಚಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಎಡಿಆರ್‌ ಕೋಆರ್ಡಿನೇಟರ್‌, ಪ್ರಾಧ್ಯಾಪಕ ಡಾ. ಪ್ರದೀಪ್‌ ಅವರಿಗೆ ಸೇರಿದ 6 ಕಡೆಗಳಲ್ಲಿ ದಾಳಿ ನಡೆಸಿ, ಶೋಧ ಕಾರ್ಯ ನಡೆಸಲಾಗಿದೆ. ಒಟ್ಟು ₹6.34 ಕೋಟಿ ಮೊತ್ತದ ಆಸ್ತಿ ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Lokayukta-raid-gold-found-at-Professors-house.

ಡಾ. ಪ್ರದೀಪ್‌ ಬಳಿ ಏನೇನೆಲ್ಲ ಪತ್ತೆಯಾಯ್ತು?

ಒಟ್ಟು 5 ನಿವೇಶನ, 1 ವಾಸದ ಮನೆ, 16.7 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. ಇವುಗಳ ಮೌಲ್ಯ ₹4.45 ಕೋಟಿ.₹29.75 ಲಕ್ಷ ಬ್ಯಾಂಕ್‌ ಬ್ಯಾಲೆನ್ಸ್‌, ದಾಳಿ ವೇಳೆ ₹10 ಸಾವಿರ ನಗದು ಪತ್ತೆ, ₹25 ಸಾವಿರ ವಿದೇಶ ಕರೆನ್ಸಿ ಸಿಕ್ಕಿದೆ.  

₹34.75 ಲಕ್ಷ ಚಿನ್ನಾಭರಣ, ₹30 ಲಕ್ಷದ ವಾಹನಗಳು, ₹15.50 ಲಕ್ಷದ ಮೇಕೆ ಮತ್ತು ಹಸುಗಳು, ₹50 ಲಕ್ಷದ ಫಾರ್ಮ್‌ ಹೌಸ್‌, ₹28.75 ಲಕ್ಷದ ಇತರೆ ವಸ್ತುಗಳು ಪತ್ತೆಯಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Lokayukta-raid-at-Shimoga-hosanagara-and-shikaripura.

ಜವಾರಿ ಕೋಳಿ ಫಾರಂ, ಬಾತು ಕೋಳಿ, ಪಾರಿವಾಳ ಫಾರಂ, ಕುರಿ ಮತ್ತು ಗೋವುಗಳ ಫಾರಂಗಳು ಇವೆ. ಚಿನ್ನ 400 ಗ್ರಾಂ, ಬೆಳ್ಳಿ 3 ಕೆ.ಜಿ, 20 ವಾಚುಗಳು ಈ ಪೈಕಿ ಕೆಲವು ವಿದೇಶಿ ಬ್ರಾಂಡ್‌ಗಳಿವೆ, 50 ಶೂಗಳು, ಮೂರು ಕಾರು, ಮೂರು ಬೈಕ್‌ಗಳು ಪತ್ತೆಯಾಗಿವೆ.

ಈ ಸಂಬಂಧ ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

https://chat.whatsapp.com/JPJ0lTQsTKf365Fqu6Q7cd

ಇದನ್ನೂ ಓದಿ » ತುರ್ತು ಪರಿಸ್ಥಿತಿಗೆ 50 ವರ್ಷ, ಶಿವಮೊಗ್ಗದಲ್ಲಿ ಕರಾಳ ದಿನ, ಯಾವಾಗ? ಏನೆಲ್ಲ ಕಾರ್ಯಕ್ರಮ ಇರುತ್ತೆ?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಜಾಹೀರಾತಿನ ಮೇಲೆ ಕ್ಲಿಕ್‌ ಮಾಡಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment