ಶಿವಮೊಗ್ಗದ ಫ್ಲೈ ಓವರ್ ಬಳಿ ಅಪಘಾತ, ಲಾರಿ ಕೆಳಗೆ ಸಿಲುಕಿದ ಬೈಕ್ ಸವಾರ, ಚಾಲಕ ಎಸ್ಕೇಪ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 9 APRIL 2023

SHIMOGA : ಚಾಲಕ ಲಾರಿಯನ್ನು (Lorry) ದಿಢೀರ್ ತಿರುಗಿಸಿದ್ದರಿಂದ ಬೈಕ್ ಸವಾರ ಲಾರಿ ಕೆಳಗೆ ಸಿಕ್ಕಿಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Crime-News-General-Image

ಪಿಳ್ಳಂಗೆರೆಯ ಹೊಸಮನೆ ತಾಂಡದ ರಮೇಶ್ ಎಂಬುವವರು ಗಾಯಗೊಂಡಿದ್ದಾರೆ. ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ಸರ್ಕಲ್‍ನಲ್ಲಿ ಘಟನೆ ಸಂಭವಿಸಿದೆ. ರಮೇಶ್ ಅವರು ಕೆಇಬಿ ಸರ್ಕಲ್ ಕಡೆಯಿಂದ ಶಂಕರಮಠ ಸರ್ಕಲ್ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಕೆಇಬಿ ಸರ್ಕಲ್‍ ಕಡೆಯಿಂದ ವೇಗವಾಗಿ ಬಂದ ಲಾರಿ, ಸಂಗೊಳ್ಳಿ ರಾಯಣ್ಣ ಸರ್ಕಲ್‍ ಬಳಿ ಫ್ಲೈ ಓವರ್ ಕಡೆಗೆ ತಿರುಗಿದೆ. ಈ ವೇಳೆ ಅಪಘಾತ ಸಂಭವಿಸಿದೆ.

ಇದನ್ನೂ ಓದಿ – ಉಪನ್ಯಾಸಕಿಗೆ ಬಂತು ಫೋನ್ ಕರೆ, 24 ಗಂಟೆಯಲ್ಲಿ ಬ್ಲಾಕ್ ಆಗಲಿದೆ ಎಂದು ಎಚ್ಚರಿಕೆ, ನಂಬಿಸಿ ವಂಚನೆ

ರಮೇಶ್ ಅವರು ಬೈಕ್ ಸಹಿತ ಲಾರಿ ಕೆಳಗೆ ಸಿಲುಕಿದ್ದರು. ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಚಾಲಕ ಲಾರಿ (Lorry) ಬಿಟ್ಟು ಪರಾರಿಯಾಗಿದ್ದಾನೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 9, 2023

Leave a Comment