ಶಿವಮೊಗ್ಗ : ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಜನ್ಮದಿನವನ್ನು (Birthday) ಅವರ ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸಿದರು. ನಗರದ ಬಂಜಾರ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಎಂ.ಶ್ರೀಕಾಂತ್ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು.
ಇದಕ್ಕೂ ಮುನ್ನ ಬಂಜಾರ ಕನ್ವೆನ್ಷನ್ ಹಾಲ್‌ಗೆ ಎಂ.ಶ್ರೀಕಾಂತ್ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಮೆರವಣಿಗೆ ಮೂಲಕ ಅವರನ್ನು ಸಭಾಂಗಣಕ್ಕೆ ಕರೆತರಲಾಯಿತು. ಬಳಿಕ ನಟ ಪುನಿತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಸಿನಿಮಾದ ಹಾಡಿನ ಮೂಲಕ ಅಭಿಮಾನಿಗಳು ಜನ್ಮದಿನದ ಶುಭಕೋರಿದರು.
ಯಾರೆಲ್ಲ ಏನೆಲ್ಲ ಹೇಳಿದರು?
ನಮ್ಮ ತಂದೆ ಬಂಗಾರಪ್ಪ ಅವರು ನನ್ನನ್ನು ಶಾಸಕನನ್ನಾಗಿ ಮಾಡಬೇಕು ಎಂದು ಕನಸು ಕಂಡಿದ್ದರು. ಅವರಿಲ್ಲದ ಸಂದರ್ಭ ಶ್ರೀಕಾಂತ್ ಅವರ ಅಧ್ಯಕ್ಷತೆಯಲ್ಲಿ ನಾನು ಶಾಸಕನಾಗಿ ವಿಧಾನಸೌಧ ಪ್ರವೇಶಿಸಿದೆ. ನಮ್ಮೊಂದಿಗೆ ಅವರು ಕೂಡ ಅಲ್ಲಿಗೆ ಬರಬೇಕಿತ್ತು. ಮುಂದೆ ಒಳ್ಳೆಯದಾಗಲಿದೆ.
– ಮಧು ಬಂಗಾರಪ್ಪ, ಸಚಿವ
ಎಂ.ಶ್ರೀಕಾಂತ್ ಶಿವಮೊಗ್ಗದ ಮಾಣಿಕ್ಯ. ಎಲ್ಲ ಸಮುದಾಯದವರನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಅವರಿಗಿದೆ. ಲೈಂಗಿಕ ಅಲ್ಪಸಂಖ್ಯಾತರು, ದೇವದಾಸಿಯರ ಮಕ್ಕಳಿಗಾಗಿಯೆ ಒಂದಷ್ಟು ವಿಶೇಷವಾದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ವಯಸ್ಸಾಗಬಾರದು. ನಮ್ಮ ಆಯಸ್ಸಿನಲ್ಲಿಯು ಅವರಿಗೆ ಪಾಲು ಕೊಡಲು ಸಿದ್ದ.
– ಅಕೈ ಪದ್ಮಶಾಲಿ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ
ರಾಜಕಾರಣ ಎಂದರೆ ಜಾತಿ, ಸ್ವಜನಪಕ್ಷಪಾತ ಎಂಬಂತಾಗಿದೆ. ಆದರೆ ಶ್ರೀಕಾಂತ್ ಭಿನ್ನ ದಾರಿಯಲ್ಲಿದ್ದಾರೆ. ಅವರು ಅಧಿಕಾರದಿಂದ ರಾಜಕಾರಣ ಮಾಡಿದವರಲ್ಲ. ಜನರ ಪ್ರೀತಿಯಿಂದ ರಾಜಕೀಯ ಮಾಡುತ್ತಿದ್ದಾರೆ. ಇವರದ್ದು ಮನುಷ್ಯತ್ವದ ರಾಜಕಾರಣವಾಗಿದೆ.
– ಸಿರಾಜ್ ಅಹಮದ್, ಸಹ್ಯಾದ್ರಿ ಕಾಲೇಜು ಉಪನ್ಯಾಸಕ
ಸಾಲು ಸಾಲು ಸನ್ಮಾನ, ಶುಭಾಶಯ
ಇದೇ ವೇಳೆ ರಾಜಕಾರಣಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ವೈಯಕ್ತಿಕವಾಗಿ ಎಂ.ಶ್ರೀಕಾಂತ್ ಅವರಿಗೆ ಶಾಲು ಹೊದಿಸಿ, ಪೇಟೆ ತೊಡಿಸಿ ಸನ್ಮಾನಿಸಿದರು (Birthday).
ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಪ್ರಮುಖರಾದ ಮದನ್, ವಕೀಲ ಕೆ.ಪಿ.ಶ್ರೀಪಾಲ್, ಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪ ಮೇಯರ್ ಪಾಲಾಕ್ಷಿ, ರಂಗನಾಥ್, ವಿನಯ್ ತಾಂದ್ಲೆ, ಶರತ್ ಮರಿಯಪ್ಪ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ » ಭದ್ರಾವತಿ MPM ಕುರಿತು ಬೆಂಗಳೂರಿನಲ್ಲಿ ಮಹತ್ವದ ಮೀಟಿಂಗ್, ಏನೇನು ಚರ್ಚೆಯಾಯ್ತು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200