SHIVAMOGGA LIVE NEWS
ಶಿವಮೊಗ್ಗ | ಧ್ವಜ ಬದಲಾಯಿಸುತ್ತೇವೆ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದವರೆ ಈಗ ಹರ್ ಘರ್ ತಿರಂಗ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಏನೆಲ್ಲ ಹೇಳಿದರು?
ಧ್ವಜವನ್ನು, ಸಂವಿಧಾನವನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಬಿಜೆಪಿ ಮುಖಂಡರುಗಳು ಹೇಳುತ್ತಿದ್ದರು. ಈಗ ಅವರೆ ಹರ್ ಘರ್ ತಿರಂಗ ಕಾರ್ಯಕ್ರಮ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರ ಪಾಲು ಏನು ಇಲ್ಲ.
ಬಿಜೆಪಿಯವರಿಗೆ ಧ್ವಜ ಮತ್ತು ಸ್ವಾತಂತ್ರ್ಯದ ಕುರಿತು ಮಾತನಾಡುವ ಅರ್ಹತೆ ಇಲ್ಲ. ಧ್ವಜ ಹಿಡಿಯುವ ಶಕ್ತಿಯನ್ನು ಕೊಟ್ಟಿದ್ದೆ ಮಹಾತ್ಮ ಗಾಂಧೀಜಿ ಮತ್ತು ಕಾಂಗ್ರೆಸ್ ಪಕ್ಷ. ಆದರೆ ಬಿಜೆಪಿಯವರು ಕಾಶ್ಮೀರಿ ಫೈಲ್ಸ್ ಚಿತ್ರ ಉಚಿತವಾಗಿ ತೋರಿಸುತ್ತಾರೆ. ಧ್ವಜಕ್ಕೆ ದುಡ್ಡು ಪಡೆಯುತ್ತಿದ್ದಾರೆ
ಜಡೆ ಭಾಗದಲ್ಲಿ ಭಾರಿ ಮಳೆಗೆ ಮನೆಗೆ ಕುಸಿದಿದೆ. ಆದರೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಮನೆ ಬಿದ್ದಿಲ್ಲ, ಜನರೆ ಕೆಡವಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಮನೆ ಇಲ್ಲದೆ ಬದುಕೋದು ಹೇಗೆ? ಯಾರಾದರೂ ಮನೆ ಕೆಡವಿಕೊಳ್ಳುತ್ತಾರಾ?
ಮೂರು ವರ್ಷದಲ್ಲಿ ಒಂದೇ ಒಂದು ಮನೆ ಕೊಡಲು ಸಾಧ್ಯವಾಗಿಲ್ಲ. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯರು ಮನೆ ಮನೆಗೆ ಹೋಗಿ ಧ್ವಜ ಹಂಚಲು ಆಗುತ್ತಿಲ್ಲ. ಅಂತಹ ಪರಿಸ್ಥಿತಿ ನಿರ್ಮಾವಣಾಗಿದೆ.
ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರ ರಕ್ತ ಬಿದ್ದ ಮೇಲೆಯೆ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕಿದೆ. ಹಿಂದೂ ರಾಷ್ಟ್ರ ಮಾಡುತ್ತೇವೆ, ಭಗವಾಧ್ವಜ ಹಾರಿಸುತ್ತೇವೆ ಅನ್ನುತ್ತಿದ್ದಾರೆ. ಆಡಳಿತ ನಡೆಸುವವರು ಹೀಗೆ ಹೇಳಬಾರದು.
ಇನ್ನೆಷ್ಟು ಸ್ಮಾರ್ಟ್ ಮಾಡುತ್ತಾರೋ?
ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಮೂಲಕ ನಗರದಲ್ಲಿ ನೀರು ನಿಲ್ಲಿವಂತೆ ಮಾಡಲಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಇನ್ನೆಷ್ಟು ಸ್ಮಾರ್ಟ್ ಮಾಡುತ್ತಾರೋ ಗೊತ್ತಿಲ್ಲ.
ಕೋವಿಡ್ ಪರಿಹಾರ ವಿತರಿಸಿಲ್ಲ
ಕೋವಿಡ್ನಿಂದ ಮೃತರ ಕುಟುಂಬದವರಿಗೆ ಸರಿಯಾಗಿ ಪರಿಹಾರ ವಿತರಣೆ ಮಾಡಿಲ್ಲ. ಸೊರಬ ಕ್ಷೇತ್ರ ವ್ಯಾಪ್ತಿಯಲ್ಲಿ ಓಡಾಡುವಾಗ ಇಂತಹ ಹಲವು ಪ್ರಕರಣಗಳು ಗೊತ್ತಾಗುತ್ತಿದೆ. ಈರಮ್ಮ ಎಂಬುವವರ ಮಗ ಬಂದು ತಾಯಿ ಕಳೆದುಕೊಂಡಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ. ಕೋವಿಡ್ ಮೃತರ ಪಟ್ಟಿಯಲ್ಲಿ ಇವರ ಹೆಸರೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಆತ ಕಣ್ಣೀರು ಹಾಕುತ್ತಿದ್ದಾರೆ.
ಸ್ಲೇಟ್ ಹಿಡಿದು ನಿಲ್ಲಿಸಿದ್ದರು
ಅರಣ್ಯದಲ್ಲಿ ಮನೆ ಕಟ್ಟಿಕೊಂಡವರು ಇನ್ಮುಂದೆ ನೊಟೀಸ್ ಕೊಡುವುದಿಲ್ಲ ಎಂದು ಶಿವಮೊಗ್ಗಕ್ಕೆ ಬಂದಾಗ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಅದಾದ ಮೇಲೂ ಹಲವು ರೈತರಿಗೆ ‘ಭೂಗಳ್ಳರು’ ಎಂದು ನೊಟೀಸ್ ನೀಡಲಾಗಿದೆ. ಕಾರ್ಗಲ್ ಬಳಿ ಯುವಕರನ್ನು ಸ್ಲೇಟ್ ಹಿಡಿದು ನಿಲ್ಲಿಸಿದ್ದರು. ಅಂತಹ ಅಪರಾಧ ಅವರೇನು ಮಾಡಿದ್ದಾರೆ.
ಡಬಲ್ ಎಂಜಿನ್ ಸರ್ಕಾರವಿದೆ. ಆದರೂ ರಾಜ್ಯದ ಬಿಜೆಪಿ ಸಂಸದರು ಅಲ್ಲಿ ಮಾತನಾಡಲು ಧೈರ್ಯ ತೋರಿಸುತ್ತಿಲ್ಲ. ಇಲ್ಲಿನ ಸಂಸದರು ‘ಇನ್ನೊಂದು ವರ್ಷದ ಯಾವುದೆ ಸಮಸ್ಯೆ ಇಲ್ಲ’ ಎಂದು ಹೇಳುತ್ತಿದ್ದಾರೆ. ಇನ್ನೊಂದು ವರ್ಷಕ್ಕೆ ಚುನಾವಣೆ ಬರಲಿದೆ ಅನ್ನುವುದಕ್ಕಾಗಿ ಈ ಹೇಳಿಕೆ ನೀಡುತ್ತಿದ್ದೀರಾ?
ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಇದರ ವಿರುದ್ಧ ಹೋರಾಟ ತೀವ್ರಗೊಳಿಸಲಾಗುತ್ತದೆ.
ರೈತರನ್ನು ಕಂಡರೆ ಬಿಜೆಪಿಗೆ ಸಿಟ್ಟು
ಬಿಜೆಪಿಯವರಿಗೆ ರೈತರನ್ನು ಕಂಡರೆ ಸಿಟ್ಟು ಇದ್ದಂತೆ ತೋರುತ್ತದೆ. ಈಗ ವಿದ್ಯುತ್ ಪೂರೈಕೆ ವಿಚಾರದಲ್ಲಿ ಹೊಸ ನಿಯಮ ಜಾರಿಗೆ ತರಲು ಮುಂದಾಗಿದ್ದಾರೆ. ಯಾರಿಗೆ ಯಾವ ಪ್ಲಾನ್ನಲ್ಲಿ ವಿದ್ಯುತ್ ಬೇಕೋ ಹಾಗೆ ಪೂರೈಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ರೈತರಿಗೆ ಉಚಿತವಾಗಿ ಪೂರೈಕೆ ಆಗುತ್ತಿರುವ ವಿದ್ಯುತ್ ಯೋಜನೆ ಕಡಿತಕ್ಕೆ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.
ಜಿಲ್ಲೆಗೊಂದು ಪ್ರಣಾಳಿಕೆ
ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷರಾಗಿ ಪಕ್ಷ ಜವಾಬ್ದಾರಿ ನೀಡಲಾಗಿದೆ. ಸಿದ್ದರಾಮಯ್ಯ ಅವರು ಸರ್ಕಾರದ ಭಾಗ್ಯಗಳು ಮುಂದುವರೆಸುವ ಭರವಸೆ ಇರಲಿದೆ. ಇನ್ನು, ರಾಜ್ಯ ಮಟ್ಟದ ಪ್ರಣಾಳಿಕೆ ಜೊತೆಗೆ ಜಿಲ್ಲಾವಾರು ಪ್ರಣಾಳಿಕೆ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಮಲೆನಾಡು ಭಾಗಕ್ಕೆ ಕಸ್ತೂರಿ ರಂಗನ್ ವರದಿಗೆ ವಿರೋಧ, ರಸ್ತೆ ಸಂಪರ್ಕ ಸೇರಿದಂತೆ ಹಲವು ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುತ್ತದೆ.
ಒಂಭತ್ತು ತಿಂಗಳು ಮೊದಲೆ ಪ್ರಣಾಳಿಕೆ ಸಿದ್ದಪಡಿಸುವ ಜವಾಬ್ದಾರಿ ನೀಡಲಾಗಿದೆ. ಚರ್ಚೆ ನಡೆಸಿ, ವಿವಿಧೆಡೆ ಪ್ರವಾಸ ನಡೆಸಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ.
ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮದಿಂದ ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ನೀಡಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ವಿಧಾನಸಭೆ ಕ್ಷೇತ್ರ ವ್ಯಪ್ತಿಯಲ್ಲಿ ಪಾದಯಾತ್ರೆ ನಡೆಸಲು ನಿರ್ಣಯಿಸಲಾಗಿದೆ. ಸೊರಬದಲ್ಲಿ ಅ.11ರಂದು ಪಾದಯಾತ್ರೆ ಮಾಡಲಿದ್ದೇನೆ.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕರಾದ ಆರ್.ಪ್ರಸನ್ನ ಕುಮಾರ್, ಕೆ.ಬಿ.ಪ್ರಸನ್ನಕುಮಾರ್ ಸೇರಿದಂತೆ ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ – ಹೊಸನಗರದಲ್ಲಿ ಮಳೆ ಜೊತೆ ಗಾಳಿ ಅಬ್ಬರ, ಮಾಸ್ತಿಕಟ್ಟೆಯಲ್ಲಿ ಹೆಚ್ಚು ವರ್ಷಧಾರೆ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
shivamoggalive@gmail.com
» Whatsapp Number
7411700200
