ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಕೋಟೆ ಮಾರಿಕಾಂಬ ದೇವಿ ಜಾತ್ರೆ ಹಿನ್ನಲೆ ಗಾಂಧಿ ಬಜಾರ್ ಆರಂಭದಲ್ಲಿ ನಿರ್ಮಿಸಲಾಗಿರುವ ಮಹಾದ್ವಾರ (Mahakali idol) ಜನರ ಗಮನ ಸೆಳೆಯುತ್ತಿದೆ. ಕಳೆದ ರಾತ್ರಿ ಮಹಾದ್ವಾರ ನಿರ್ಮಿಸಲಾಗಿದ್ದು, ಬೆಳಗ್ಗೆಯಿಂದಲೇ ಜನರು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಈ ಬಾರಿಯ ಥೀಮ್ ಏನು?
ಈ ಬಾರಿ ಬೃಹತ್ ಮಹಾಕಾಳಿಯ ಕಲಾಕೃತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶಿಲ್ಪಿ ಜೀವನ್ ಮತ್ತು ಅವರ ತಂಡ ಓತಿಘಟ್ಟದ ಜೀವನ್ ಕಲಾ ಕೇಂದ್ರದಲ್ಲಿ ಈ ಕಲಾಕೃತಿಯನ್ನು ಸಿದ್ಧಪಡಿಸಿದ್ದಾರೆ. ಇಲ್ಲಿದೆ ಇದರ ವಿಶೇಷತೆ.

ಬೃಹತ್ ಗಾತ್ರ: ನೆಲಮಟ್ಟದಿಂದ ಈ ಕಲಾಕೃತಿಯು ಒಟ್ಟು 48 ಅಡಿ ಎತ್ತರವಿದೆ. ಇದರಲ್ಲಿ 20 ಅಡಿಗಳ ಜನರು ಅಡಿಯಿಂದ ಸಂಚರಿಸಲು ಅನುಕೂಲವಾಗುವಂತೆ ಸ್ಕ್ಯಾಫೋಲ್ಡಿಂಗ್ ಇದೆ. ಅದರ ಮೇಲೆ 28 ಅಡಿ ಎತ್ತರದ ಮಹಾಕಾಳಿಯ ವಿಗ್ರಹವನ್ನು ಕೂರಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ವಾಹನಗಳ ಸಂಚಾರ ಮಾರ್ಗ ಬದಲಾವಣೆ, ಯಾವ್ಯಾವ ರಸ್ತೆ?
ತೂಕ ಮತ್ತು ವಿನ್ಯಾಸ: ಫೈಬರ್ ಮೆಟೀರಿಯಲ್ ಬಳಸಿ ತಯಾರಿಸಲಾದ ಈ ವಿಗ್ರಹವು ಸುಮಾರು 1000 ಕೆಜಿ ತೂಕ ಹೊಂದಿದೆ. ಎಂಟು ಕೈಗಳಲ್ಲಿ ವಿವಿಧ ಆಯುಧಗಳನ್ನು ಹಿಡಿದಿರುವ ಭೀಕರ ಹಾಗೂ ಶಕ್ತಿಯುತ ರೂಪದಲ್ಲಿ ಮಹಾಕಾಳಿಯನ್ನು ಸಿದ್ಧಪಡಿಸಲಾಗಿದೆ.
ತಾಂತ್ರಿಕತೆಯ ಬಳಕೆ: ಈ ಬಾರಿ ಹಳೆಯ ಪದ್ಧತಿಯ ಬಟನ್ ಸಿಸ್ಟಮ್ ಬದಲಿಗೆ ಆಧುನಿಕ ತಂತ್ರಜ್ಞಾನ ಬಳಸಲಾಗಿದೆ. ಮೊಬೈಲ್ ಮೂಲಕವೇ ವಿಗ್ರಹದ ಚಲನವಲನ ಮತ್ತು ಲೈಟಿಂಗ್ ವ್ಯವಸ್ಥೆ ನಿಯಂತ್ರಿಸಬಹುದಾಗಿದೆ. ಕರ್ನಾಟಕದಲ್ಲೇ ಇಷ್ಟು ಎತ್ತರದ ಕೂತಿರುವ ಭಂಗಿಯ ಚಲಿಸುವ ಮಹಾಕಾಳಿ ವಿಗ್ರಹ ಇದೇ ಮೊದಲು ಎಂದು ಶಿಲ್ಪಿ ಜೀವನ್ ತಿಳಿಸಿದ್ದಾರೆ.

ಸೆಲ್ಫಿ, ಫೋಟೊ ಕ್ರೇಜ್
ಬೆಳಗ್ಗೆಯಿಂದಲೇ ಜನರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಮಹಾಕಾಳಿಯ ಬೃಹತ್ ಕಲಾಕೃತಿಯತ್ತು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಕಲಾಕೃತಿಯ ಮುಂದೆ ನಿಂತು ಸೆಲ್ಫಿ, ಫೋಟೊ ಕ್ಲಿಕ್ಕಿಸಿಕಳ್ಳುತ್ತಿದ್ದಾರೆ. ಶಿಪ್ಪನಾಯಕ ಸರ್ಕಲ್ ಬಳಿ ಇಂದು ಸಂಜೆ ವೇಳೆಗೆ ದೊಡ್ಡ ಸಂಖ್ಯೆಯ ಜನರು ಸೇರುವ ನಿರೀಕ್ಷೆ ಇದೆ.
LATEST NEWS
- ಮಾರಿಕಾಂಬ ಜಾತ್ರೆಗೆ ಕ್ಷಣಗಣನೆ, ಗಾಂಧಿ ಬಜಾರ್ನಲ್ಲಿ ದೇವಿ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

- ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಶಿವಮೊಗ್ಗದ ಐವರು ವಿದ್ಯಾರ್ಥಿಗಳಿಗೆ ಬಹುಮಾನ, ಯಾರೆಲ್ಲ ಗೆದ್ದಿದ್ದಾರೆ?

- ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಮಾರುಕಟ್ಟೆಗಳಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? | 23 ಫೆಬ್ರವರಿ 2026

- ಒಂದು ಗಂಟೆ ಬಿಟ್ಟು ನೆಹರೂ ರಸ್ತೆಗೆ ಬಂದ ಖಾಸಗಿ ಸಂಸ್ಥೆ ಉದ್ಯೋಗಿಗೆ ಕಾದಿತ್ತು ಶಾಕ್

- ಗೋಪಿ ಸರ್ಕಲ್ ಬಳಿ ಬಸ್ ಅಡ್ಡಗಟ್ಟಿ ಡ್ರೈವರ್ನನ್ನು ಕೆಳಗೆಳೆದು ಹಲ್ಲೆ, ಪೆಟ್ರೋಲ್ ಹಾಕಿ ಸುಡುವ ಬೆದರಿಕೆ

About The Editor
ನಿತಿನ್ ಆರ್.ಕೈದೊಟ್ಲು





