SHIMOGA | ಹೊಸಮನೆಯಲ್ಲಿ ‘ಮಕ್ಕಳ ನಡಿಗೆ ಅಂಗನವಾಡಿ ಕಡೆಗೆ’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 08 FEBRUARY 2021

ಕೊರೋನಾ ಸಂದರ್ಭದಲ್ಲಿ ಮುಚ್ಚಿದ್ದ ಅಂಗನವಾಡಿ ಕೇಂದ್ರಗಳನ್ನು ಪುನರಾರಂಭ ಮಾಡಲು ಸರ್ಕಾರ ನಿರ್ಧರಿಸಿದೆ.  ಅದರಂತೆ ಸುಪೋಷನ್ ಅರಿವು ಕಾರ್ಯಕ್ರಮದಡಿ ಮಕ್ಕಳ ನಡಿಗೆ ಅಂಗನವಾಡಿ ಕಡೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೊಸಮನೆ ಬಡಾವಣೆಯಲ್ಲಿ  ಮಹಾನಗರ ಪಾಲಿಕೆ ಸದಸ್ಯ ರೇಖಾ ರಂಗನಾಥ್ ಅವರು ಇವತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ರೇಖಾ ರಂಗನಾಥ್, ಸರ್ಕಾರದ ಆದೇಶದಂತೆ ಅಂಗನವಾಡಿ ಕೇಂದ್ರಗಳು ಪುನಾರಂಭವಾಗಿದೆ. ಪ್ರತಿದಿನ ಐದು ಮಕ್ಕಳಂತೆ ಹಾಗೂ ಮಕ್ಕಳ ಪೋಷಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ವಿಜಯಾ, ಸುಷ್ಮಾ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ರೂಪ ಹಾಗೂ ಅಂಗನವಾಡಿ ಕಾರ್ಯಕರ್ತೆ ಶಾಂತಾ, ಸಮಾಧಾನ ಸಹಾಯಕಿ ಗೌರಮ್ಮ ಮತ್ತು ಪೋಷಕರಾದ ಪ್ರಕಾಶ್ ನರಸಿಂಹ ಮಕ್ಕಳು ತಾಯಂದಿರು ಹಾಜರಿದ್ದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment