SHIVAMOGGA LIVE | 21 JUNE 2023
SHIMOGA : ರಾಷ್ಟ್ರೀಯ ಶಿಕ್ಷಣ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಮಲೆನಾಡ ವೈಭವ (Malenadu) ವಸ್ತು ಪ್ರದರ್ಶನ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳ ಗಮನ ಸೆಳೆಯಿತು. ಮಲೆನಾಡಿನ ವೈಭವ ಕಂಡು, ವಿವಿಧ ಖಾದ್ಯಗಳನ್ನು ಸವಿದು ಖುಷಿಪಟ್ಟರು.
ನಗರದ ಎನ್‌ಇಎಸ್ ಮೈದಾನದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಇಲ್ಲಿ ಮಲೆನಾಡ ವೈಭವ ಪ್ರದರ್ಶಿನಿ ಆಯೋಜಿಸಲಾಗಿದೆ.
ಪ್ರದರ್ಶಿನಿಯಲ್ಲಿ ಏನೇನೆಲ್ಲ ಇದೆ?
ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಮಲೆನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಮಲೆನಾಡ (Malenadu) ವೈಭವ ಪ್ರದರ್ಶಿನಿ ಆಯೋಜಿಸಲಾಗಿದೆ. ಇದರೊಳಗೆ ಮಲೆನಾಡಿನ ಕಿರುಪರಿಚಯ ಸಿಗಲಿದೆ.
ಶಾರಾವತಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಮಲೆನಾಡು ವಸ್ತುಗಳ ಪ್ರದರ್ಶಿನಿ ಆಯೋಜಿಸಲಾಗಿದೆ. ಮಲೆನಾಡಿನಲ್ಲಿ ನಿತ್ಯ ಬಳಕೆ ವಸ್ತುಗಳನ್ನು ಸಂಗ್ರಹಿಸಿ ಇಲ್ಲಿಡಲಾಗಿದೆ. ಪ್ರತಿ ವಸ್ತುವಿನ ಹೆಸರು ಮತ್ತು ಅದರ ಬಳಕೆ ಕುರಿತು ವಿದ್ಯಾರ್ಥಿಗಳಿಗೆ ವಿವರಣೆ ನೀಡಲಾಯಿತು.
ಹಣ್ಣಿನಲ್ಲಿ ಕಲಾಕೃತಿಗಳ ಸೃಷ್ಟಿಯ ಹಣ್ಣಿನ ಮನೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿತು. ಮಲೆನಾಡಿನ ಅಭರಣ ಮನೆ ವಿದ್ಯಾರ್ಥಿನಿಯರು, ಶಿಕ್ಷಕಿಯರು, ಉಪನ್ಯಾಸಕಿಯರ ಮನ ಸೆಳೆಯಿತು. ವಿವಿಧ ಬಗೆಯ ಮಲೆನಾಡಿನ ಆಭರಣಗಳ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಶಿವಮೊಗ್ಗದ ಲಕ್ಕಿನಕೊಪ್ಪದಲ್ಲಿರುವ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯವು ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲವು ವಸ್ತುಗಳನ್ನು ಪ್ರದರ್ಶನಕ್ಕೆ ಇರಿಸಿದೆ. ಹೆಚ್.ಖಂಡೋಬರಾವ್ ಮತ್ತು ಅವರ ಸಹವರ್ತಿಗಳು ಮಕ್ಕಳಿಗೆ ವಿವಿಧ ವಸ್ತುಗಳ ಕುರಿತು ವಿವರಿಸಿ ಕುತೂಹಲ ತಣಿಸಿದರು.
ಮಲೆನಾಡು ವೈಭವದಲ್ಲಿ ಮಲೆನಾಡಿನ ಖಾದ್ಯಗಳು ಪ್ರಮುಖ ಆಕರ್ಷಣೆಯಾಗಿದ್ದವು. ಗ್ರಾಮ ರಾಜ್ಯ, ಸ್ತ್ರೀ ಶಕ್ತಿ ಮನೆಯಲ್ಲಿ ಮಹಿಳೆಯರು ತಯಾರಿಸಿದ ವಿವಿಧ ಅಡುಗೆ ಸಾಮಗ್ರಿಗಳನ್ನು ಪ್ರದರ್ಶಿಸಿ ರುಚಿ ಸವಿಯಲು ಅವಕಾಶ ಕಲ್ಪಿಸಿದ್ದರು.
ಸಾಂಬಾರು ಪುಡಿಗಳು, ನೆಲ್ಲಿಕಾಯಿ ತೊಕ್ಕು, ಅಗಸೆ ಚಟ್ನಿ, ರವೆ ಉಂಡೆ, ಹಲಸು, ಕುಂಬಳ ಕಾಯಿ ಸಂಡಿಗೆ, ಸೌತೆಕಾಯಿ ಮತ್ತು ಹಲಸಿನ ಕಾಯಿ ಉಪ್ಪಿನ ಕಾಯಿ ರುಚಿ ನೋಡಲು ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಾವಿರ ಸಾವಿರ ವಿದ್ಯಾರ್ಥಿಗಳಿಂದ ಅಮೃತ ನಡಿಗೆ, ಹೇಗಿತ್ತು? ನಡಿಗೆಗೆ ಕಾರಣವೇನು?
ಸಿರಿಮನೆಯಲ್ಲಿ ಸಿರಿ ಧಾನ್ಯಗಳ ಉತ್ಪನ್ನಗಳು, ಮಲ್ನಾಡ್ ಕಿಚನ್‌ನಲ್ಲಿ ಹಾಲುಬಾಯಿ ಅಕ್ಕಿಯ ಸಿಹಿ ಪದಾರ್ಥ, ಒತ್ತು ಶಾವಿಗೆಯ ಖಾರ ಮತ್ತು ಸಿಹಿ ತಿಂಡಿ, ಸಿಹಿ ಕಡಬು ಸೇರಿದಂತೆ ವಿವಿಧ ಖಾದ್ಯಗಳು ಟೇಸ್ಟ್ ಮಾಡಿ ವಿದ್ಯಾರ್ಥಿಗಳು ಖುಷಿಪಟ್ಟರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200