ಶಿವಮೊಗ್ಗ ಬಿ.ಹೆಚ್ ರಸ್ತೆಯ ಫುಟ್ ಪಾತ್ ಮೇಲೆ ಬಿದ್ದಿದ್ದ ವ್ಯಕ್ತಿ ಸಾವು, ಗುರುತು ಪತ್ತೆಗೆ ಮನವಿ

SHIVAMOGGA LIVE NEWS | DEATH | 06 ಮೇ 2022

ಸುಸ್ತಾಗಿ ಫುಟ್ ಪಾತ್ ಮೇಲೆ ಬಿದ್ದಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಅವರ ಗುರತು ಪತ್ತೆಗೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಏಪ್ರಿಲ್ 22 ರಂದು ನಗರದ ಬಿ.ಹೆಚ್ ರಸ್ತೆಯ ಪಿಂಗಾರ ಬಾರ್ ಎದುರಿನ ಫುಟ್‍ಪಾತ್‍ನಲ್ಲಿ ಸುಮಾರು 40 ರಿಂದ 45 ವಯಸಿನ ವ್ಯಕ್ತಿ ಸುಸ್ತಾಗಿ ಬಿದ್ದು ಮೃತಪಟ್ಟಿದ್ದಾರೆ.

ಅಪರಿಚಿತ ವ್ಯಕ್ತಿಯ ಶವವು ಸುಮಾರು 06 ಅಡಿ ಎತ್ತರವಿದ್ದು, ಕಪ್ಪು ಮೈಬಣ್ಣ, ಕೋಲು ಮುಖ, ತೆಳವಾದ ಮೈಕಟ್ಟು ಹೊಂದಿರುತ್ತಾರೆ. ತಲೆಯಲ್ಲಿ ಸುಮಾರು 03 ಇಂಚು ಉದ್ದದ ಕಪ್ಪು ಕೂದಲು, ಬಿಳಿ ಕಪ್ಪು ಮಿಶ್ರಿತ ಗಡ್ಡ ಮೀಸೆ ಇದೆ. ಕೆಂಪು ಗೆರೆಗಳುಳ್ಳ ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಮಾಸಲು ಪ್ಯಾಂಟ್ ಧರಿಸಿರುತ್ತಾರೆ.

Kalleshwara-Enterprises.webp

Shimoga nanjappa hospital

ಮೃತದೇಹವನ್ನು ಮೆಗ್ಗಾನ್ ಆಸ್ಪತೆ ಶವಾಗಾರದಲ್ಲಿ ಇರಿಸಲಾಗಿದೆ. ಈ ಶವದ ವಾರಸುದಾರರು ಯಾರಾದರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಮುಂದುವರೆದ ಬೈಕ್ ಕಳ್ಳರ ಹಾವಳಿ, ಟೀ ಕುಡಿದು ಬರುವರಷ್ಟರಲ್ಲಿ ಬೈಕ್ ಇಲ್ಲ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment