ನಾಳೆ ಶಿವಮೊಗ್ಗ ಮಾರಿ ಜಾತ್ರೆಗೆ ಚಾಲನೆ, ರೆಡಿಯಾಯ್ತು ಒಂದೂವರೆ ಕೆಜಿ ಬೆಳ್ಳಿ ಗದೆ, ಈ ಬಾರಿ ಜಾತ್ರೆಯ ವಿಶೇಷತೆಗಳೇನು ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 24 ಫೆಬ್ರವರಿ 2020

ಫೆಬ್ರವರಿ 25ರಿಂದ ಐದು ದಿನ ನಡೆಯಲಿರುವ ಶಿವಮೊಗ್ಗ ಮಾರಿಕಾಂಬ ಜಾತ್ರೆಗೆ ಅಂತಿಮ ಹಂತದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ದೇವಸ್ಥಾನ ಮುಂಭಾಗದ ರಸ್ತಯಲ್ಲಿ ಪೆಂಡಾಲ್ ಹಾಕಲಾಗಿದೆ. ದೇಗುಲದ ಮುಂದೆ ಚಪ್ಪರ ಹಾಕುವ ಕಾರ್ಯ ನಡೆಯುತ್ತಿದೆ.

87451333 1059864747708278 3265320127406538752 n.jpg? nc cat=107& nc ohc=xc854Da4e7sAX yS1x4& nc ht=scontent.fblr1 3

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಫೆ.25ರಂದು ಮಾರಿದೇವಿಯನ್ನು ಗಾಂಧಿ ಬಜಾರ್‌ನಲ್ಲಿ ಕೂರಿಸಲಾಗುತ್ತಿದ್ದು ಅಲ್ಲಿ ಪೇಂಟಿಂಗ್, ದ್ವಾರ ಬಾಗಿಲಿನ ಸಿದ್ಧತೆ ನಡೆಯುತ್ತಿದೆ. ಈ ಬಾರಿ ವಿಐಪಿ ಪಾಸ್‌ಗಳನ್ನು ಸ್ಥಳದಲ್ಲೇ ನೀಡಲಾಗುವುದು, 150 ರೂ.ಗೆ ಪಾಸ್ ನೀಡಲಿದ್ದು ಮೂವರು ಪ್ರವೇಶಿಸಬಹುದು ಎಂದರು.

ಗದ್ದುಗೆಯಲ್ಲಿ ಪ್ರಾಣಿ ಬಲಿ ಇಲ್ಲ

ಗದ್ದುಗೆಯಲ್ಲಿ ಯಾವ ಪ್ರಾಣಿ ಬಲಿ ಕೊಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಎಸ್.ಕೆ.ಮರಿಯಪ್ಪ, ಸಿಎಂ ಬಿ.ಎಸ್.ಯಡಿಯೂರಪ್ಪ ಫೆ.25ರಂದು ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು ಮಾರಿಕಾಂಬೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುವರು ಎಂದರು.

87378267 1059864797708273 6708913030031212544 n.jpg? nc cat=101& nc ohc=VR4DshpOK7oAX8hGGAq& nc ht=scontent.fblr1 4

ಕಲಾ ತಂಡಗಳು

ಕರಾವಳಿ ತಂಡದಿಂದ ತಮಟೆ ವಾದ್ಯ ಕರೆಯಿಸಲಾಗುವುದು. ಗರಡಿ ಮನೆಗಳಿಗೆ ಸಮಿತಿ ಭೇಟಿ ನೀಡಿ ರಾಜ್ಯಮಟ್ಟದ ಕುಸ್ತಿಪಟುಗಳನ್ನು ಕರೆಸಲಾಗುತ್ತಿದೆ. ಸಾಗರದಲ್ಲಿ ನಡೆದ ಪಂದ್ಯಾವಳಿಯಲ್ಲಿ ವಿಜಯಶಾಲಿ ಆದ ಶಿವಮೊಗ್ಗದ ಕೆಇಬಿ ನೌಕರ ನಾಗರಾಜ್ ಅವರ ಪುತ್ರ ಕಿರಣ್ ಸಹ ಭಾಗವಹಿಸುವರು ಎಂದು ತಿಳಿಸಿದರು.

87392873 1059864871041599 8663781250370109440 n.jpg? nc cat=106& nc ohc=IcDzqwnb2nEAX 4ZuAQ& nc ht=scontent.fblr1 3

ಒಂದೂವರೆ ಕೆಜಿಯ ಬೆಳ್ಳಿ ಗದೆ

ಕುಸ್ತಿಗಾಗಿ ಬೆಂಗಳೂರಿನಿಂದ 1 ಕೆಜಿ 500 ಗ್ರಾಂ ತೂಕದ ಬೆಳ್ಳಿ  ಗದೆ ತರಿಸಲಾಗಿದೆ. ಕುಸ್ತಿ ಪಂದ್ಯಾವಳಿಗೆ 400 ಜನರನ್ನು ಕರೆಸಲಾಗಿದೆ. ಫೈನಲ್ ಪಂದ್ಯಾವಳಿಯಲ್ಲಿ ಗೆದ್ದ ಪಟುವಿಗೆ ಬೆಳ್ಳಿಗದೆ, 25 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.

87290198 1059863474375072 8083123288521310208 n.jpg? nc cat=101& nc ohc=e1GTiRlIAEYAX vqEy & nc ht=scontent.fblr1 4

ವಿವಿಧತೆಯಲ್ಲಿ ಏಕತೆಯ ಜಾತ್ರೆ

ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಮಾತನಾಡಿ, ಈ ಜಾತ್ರೆ ಕೇವಲ ಹಿಂದುಳಿದ ಸಮಾಜದವರ ಜಾತ್ರೆ ಎನಿಸಿಕೊಂಡಿತ್ತು. ಆದರೆ ಈಗ ಆ ರೀತಿ ಕರೆಯಲಾಗುತ್ತಿಲ್ಲ. ವಿವಿಧತೆಯಲ್ಲಿ ಏಕತೆ ಸಾರುವ ಜಾತ್ರೆಯಲ್ಲಿ ಸಾಮಾನ್ಯವಾಗಿ ಎಲ್ಲ ಸಮಾಜದವರಿಂದ ಅಮ್ಮನವರ ಪೂಜಾ ಕೈಂಕರ್ಯ ನಡೆಯಲಿವೆ. ಗಾಂಧಿ ಬಜಾರ್‌ ಮತ್ತು ಗದ್ದುಗೆ ಬಳಿ 5 ದಿನವೂ ಬೆಳಗ್ಗೆ 8 ರಿಂದ 12ರವರೆಗೆ ವಿಶೇಷ ದರ್ಶನ ಏರ್ಪಡಿಸಲಾಗಿದೆ ಎಂದರು.

87580461 1059864717708281 6167749581686702080 n.jpg? nc cat=101& nc ohc=11yJmao3WdYAX8ia4rD& nc ht=scontent.fblr1 4

ಸಮತಿ ಉಪಾಧ್ಯಕ ಕೆ.ಎನ್.ಶ್ರೀನಿವಾಸ್, ಎನ್.ಉಮಾಪತಿ, ಕೋಶಾಧ್ಯಕ್ಷ ತಿಮ್ಮಪ್ಪ, ಕಾರ್ಯದರ್ಶಿ ಎಸ್.ಹನುಮಂತಪ್ಪ ಇದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 24, 2020

Leave a Comment