ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಜನವರಿ 2022
ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆಯನ್ನು ಮಾರ್ಚ್ 22ರಿಂದ ನಡೆಸಲು ನಿರ್ಧರಿಸಲಾಗಿದೆ. ಈ ಭಾರಿ ಸರಳವಾಗಿ ಜಾತ್ರೆ ನಡೆಸಲಾಗುತ್ತದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಜಾತ್ರೆ ಕುರಿತು ಮಹತ್ವದ ಸಂಗತಿಗಳನ್ನು ತಿಳಿಸಿದರು.
ಹೇಗಿರುತ್ತೆ ಈ ಭಾರಿಯ ಜಾತ್ರೆ?
> ಜನವರಿ 28ರ ಒಳಗೆ ಮರ ತಂದು ತವರು ಮನೆಯಲ್ಲಿ ಇಡಲಾಗುತ್ತದೆ. ಅದೇ ರೀತಿ ಪ್ರತಿ ಜಾತ್ರೆಯಲ್ಲಿ ನಡೆಯುವ ವಿಧಿವಿಧಾನ ಎಂದಿನಂತೆ ನಡೆಯಲಿದೆ. ತವರು ಮನೆಗೆ ಹೋಗುವುದು, ಬರುವುದು ಕೂಡ ಇರಲಿದೆ.
> ಶೂನ್ಯ ಮಾಸದಲ್ಲಿ ಮರ ತರುವ ಸಂಪ್ರದಾಯವಿದೆ. ಒಂದು ಭಾರಿ ಮರ ತಂದರೆ ತಾಯಿಯನ್ನು ಕೂರಿಸಲೇಬೇಕು, ಪೂಜೆ ನಡೆಸಬೇಕಾಗುತ್ತದೆ.
> ಅವತ್ತಿನ ಪರಿಸ್ಥಿತಿಗೆ ಅನುಗುಣವಾಗಿ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ. ನಾಗರಿಕರಿಗೆ ತೊಂದರೆ ಆಗದಂತೆ ವಿಧಿವಿಧಾನ ನೆರವೇರಿಸಲಾಗುತ್ತದೆ.
> ಹರಕೆ ಮಾಡುವುದು, ಬೇವಿನ ಉಡುಗೆ ತೊಡಿಸುವುದು ಸೇರಿದಂತೆ ಭಕ್ತರಿಗೆ ಯಾವುದೆ ಪೂಜೆಗಳಿಗೂ ತೊಂದರೆ ಮಾಡುವುದಿಲ್ಲ. ಎರಡು ವರ್ಷಕ್ಕೆ ಒಮ್ಮೆ ನಡೆಯುವ ಜಾತ್ರೆ ಆಗಿರುವುದರಿಂದ ಭಕ್ತರಿಗೆ ಯಾವುದೆ ತೊಂದರೆ ಆಗದ ಹಾಗೆ ಸರಳವಾಗಿ ಆಚರಣೆ ಮಾಡಲಾಗುತ್ತದೆ.
> ಸರಳವಾಗಿ ಆಚರಣೆ ಮಾಡುವಂತೆ ಜಿಲ್ಲಾಡಳಿತ ತಿಳಿಸಿದೆ. ಅಂಗಡಿಗಳು, ಎಗ್ಸಿಬಿಷನ್ ಸೇರಿದಂತೆ ಯಾವುದೆ ಚಟುವಟಿಕೆ ಇರುವುದಿಲ್ಲ.
> ಮಾರ್ಚ್ 22ರಂದು ಜಾತ್ರೆ ಆರಂಭವಾಗಲಿದೆ. ಆದರೆ ಎಷ್ಟು ದಿನ ಜಾತ್ರೆ ನಡೆಯಲಿದೆ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ. ಆಗಿನ ಪರಿಸ್ಥಿತಿಗೆ ಅನುಗುಣವಾಗಿ ಮೂರು ದಿನವೋ, ಐದು ದಿನವೋ ಎಂಬುದು ನಿಗದಿಯಾಗಲಿದೆ.
> ಜಾತ್ರೆ ಕುರಿತು ಮತ್ತೊಂದು ಸಭೆ ನಡೆಸಲಾಗುತ್ತದೆ. ದೇಗುಲದ ಬಳಿ ಜನ ಸಂದಣಿ ಆಗದ ಹಾಗೆ ನೋಡಿಕೊಳ್ಳಬೇಕಿದೆ. ಈ ಬಗ್ಗೆ ಯೋಚನೆ ಮಾಡಲಾಗುತ್ತಿದೆ.
‘ಸಂಪ್ರದಾಯಬದ್ಧ ಜಾತ್ರೆ ಮಾಡೋಣ’
ಸಮಿತಿಯ ಗೌರವಾಧ್ಯಕ್ಷೆ, ಶಿವಮೊಗ್ಗ ಮೇಯರ್ ಸುನೀತಾ ಅಣ್ಣಪ್ಪ ಮಾತನಾಡಿ, ಪಾಲಿಕೆ ವತಿಯಿಂದ ಜಾತ್ರೆಗೆ ಹತ್ತು ಲಕ್ಷ ರೂ. ಒದಗಿಸಲಾಗುತ್ತೆದೆ. ಕರೋನ ಸೋಂಕಿನ ತೀವ್ರತೆಗೆ ಅನುಗುಣವಾಗಿ ಜಾತ್ರೆ ನಡೆಸಬೇಕಿದೆ ಎಂದು ತಿಳಿಸಿದರು.
ಮಾರಿಕಾಂಬ ಸೇವಾ ಸಮಿತಿ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422