ಶಿವಮೊಗ್ಗ ಜೈಲಿನಲ್ಲಿರುವ ಧರ್ಮಸ್ಥಳದ ಮಾಸ್ಕ್‌ ಮ್ಯಾನ್‌ಗೆ ಜಾಮೀನು

 ಶಿವಮೊಗ್ಗ  LIVE 

ಶಿವಮೊಗ್ಗ: ಧರ್ಮಸ್ಥಳದ ಬುರುಡೆ ಕೇಸ್‌ನ ಮಾಸ್ಕ್‌ ಮ್ಯಾನ್‌ ಚಿನ್ನಯ್ಯಗೆ ಜಾಮೀನು ಮಂಜೂರಾಗಿದೆ. 79 ದಿನದ ಬಳಿಕ ಚಿನ್ನಯ್ಯಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ಸದ್ಯ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರುಪಾಯಿ ಷೂರಿಟಿ, ಸೇರಿ 12 ಷರತ್ತುಗಳನ್ನು ಹಾಕಿ ಜಾಮೀನು ಮಂಜೂರು ಮಾಡಲಾಗಿದೆ.

Sigandur-Janthre-2026-scaled.

ಶಿವಮೊಗ್ಗ ಜೈಲಿನಲ್ಲಿದ್ದಾನೆ ಚಿನ್ನಯ್ಯ

ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಸದ್ಯ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಭದ್ರತೆಯ ದೃಷ್ಟಿಯಿಂದ ಚಿನ್ನಯ್ಯನನ್ನು ಸೆ.18ರಂದು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ಈಗ ಜಾಮೀನು ಮಂಜೂರಾಗಿದ್ದು, ನ್ಯಾಯಾಲಯದಿಂದ ಬಿಡುಗಡೆ ಆದೇಶ ಬಂದ ಬಳಿ ಜೈಲಿನಿಂದ ಬಿಡುಗಡೆಗೊಳಿಸಲಾಗುತ್ತದೆ ಎಂದು ಜೈಲು ಮೂಲಗಳು ತಿಳಿಸಿವೆ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಹಂಪ್‌ಗಳ ಅವಾಂತರ, ಸಿಟ್ಟಾದ ಜನ, ಅಷ್ಟಕ್ಕು ಸಮಸ್ಯೆ ಏನು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment