ಶಿವಮೊಗ್ಗ ಲೈವ್.ಕಾಂ | SHIMOGA | 29 ಜನವರಿ 2020
ಮೈಸೂರಿನಿಂದ ಬಂದರು ಬಿಜೆಪಿ ಕಾರ್ಪೊರೇಟರ್’ಗಳು. ಕಣ್ಣೀರು ಹಾಕುತ್ತ ಹೊರ ಸಭೆಯಿಂದ ಹೊರ ನಡೆದ ಮೇಯರ್ ಆಕಾಂಕ್ಷಿ. ಮಹತ್ವದ ಸಭೆಯಲ್ಲಿ ಮೇಯರ್, ಉಪ ಮೇಯರ್ ಅಭ್ಯರ್ಥಿಗಳ ಘೋಷಣೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೇಯರ್, ಉಪ ಮೇಯರ್ ಆಯ್ಕೆ ಸಂಬಂಧ ಬಿಜೆಪಿ ಕಚೇರಿಯಲ್ಲಿ ಇವತ್ತು ಮಹತ್ವದ ಸಭೆ ನಡೆಯಿತು. ಸಚಿವ ಕೆ.ಎಸ್.ಈಶ್ವರಪ್ಪ ಸಭೆಯ ನೇತೃತ್ವ ವಹಿಸಿದ್ದರು.
ಮೈಸೂರಿಗೆ ತೆರಳಿದ್ದ ಬಿಜೆಪಿ ಕಾರ್ಪೊರೇಟರ್‌ಗಳು ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಹಿಂತಿರುಗಿದ್ದಾರೆ. ನೇರವಾಗಿ ಬಿಜೆಪಿ ಕಚೇರಿಗೆ ಆಗಮಿಸಿದ ಕಾರ್ಪೊರೇಟರ್‌ಗಳು ಸಭೆಯಲ್ಲಿ ಭಾಗವಹಿಸಿದರು. ಈ ವೇಳೆ ಮೇಯರ್, ಉಪ ಮೇಯರ್ ಆಯ್ಕೆ ಸಂಬಂಧ ಮಹತ್ವದ ಚರ್ಚೆ ನಡೆಯಿತು.
ಅಂತಿಮವಾಗಿ ಮೇಯರ್ ಸ್ಥಾನಕ್ಕೆ ಸುವರ್ಣ ಶಂಕರ್, ಉಪ ಮೇಯರ್ ಸ್ಥಾನಕ್ಕೆ ಸುರೇಖಾ ಮುರಳೀಧರ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.
ಮೇಯರ್ ಸ್ಥಾನ ಕೈ ತಪ್ಪಿದ ಹಿನ್ನೆಲೆ ಆಕಾಂಕ್ಷಿ ಅನಿತಾ ರವಿಶಂಕರ್ ಕಣ್ಣೀರು ಹಾಕಿದರು. ದುಃಖದಿಂದಲೇ ಸಭೆಯಿಂದ ಹೊರ ನಡೆದರು.